ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಲೂರು ದೇವಳದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯಪೂಜೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ, ನ.11: ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಯುತ್ತಿದೆ. ಅದರೆ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿದಿನವೂ 'ಮೈಸೂರು ಹುಲಿ' ಹೆಸರಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಹಿಂದೊಮ್ಮೆ ಟಿಪ್ಪು ಕೊಲ್ಲೂರಿಗೆ ಭೇಟಿ ನೀಡಿದ್ದ, ದೇಗುಲದ ಅಭಿವೃದ್ಧಿಗೆ ದೇಣಿಗೆ ನೀಡಿದ್ದ ಎನ್ನಲಾಗುತ್ತಿದೆ.ಈ ಕಾರಣಕ್ಕೆ ನಾಡಿನ ದೊರೆಗಳಿಗೆ ಶ್ರೇಯಸ್ಸು ಲಭಿಸಲಿ ಎಂದು ಶುರುವಾದ ಪೂಜೆ ಪ್ರತಿನಿತ್ಯ ಸಂಜೆ 7.30ಕ್ಕೆ ಸಲಾಂ ಮಂಗಳಾರತಿ ಅರ್ಥಾತ್ ಪ್ರದೋಷ ಪೂಜೆಯಂತೆ ನಡೆಯುತ್ತಿದೆ. [ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನ್]

ಸಲಾಂ ಮಂಗಳಾರತಿ: ಆದರೆ, ಇಲ್ಲಿಗೆ ಟಿಪ್ಪು ಭೇಟಿ ಬಗ್ಗೆ ಅಧಿಕೃತ ದಾಖಲೆಗಳಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಹೇಳುತ್ತಾರೆ. ಸಂಜೆ ಹೊತ್ತಿಗೆ ಭಕ್ತರು ಸಲಾಂ ಮಂಗಳಾರತಿ ನಡೆಸುತ್ತಿದ್ದು, ಇದು ಮಂಗಳಾರತಿಗಿಂತ ಭಿನ್ನವಾಗಿಲ್ಲ. ದೇವಸ್ಥಾನದಲ್ಲಿ ದಾಖಲೆ ರಹಿತ ಸಂಪ್ರದಾಯದಂತೆ ಸಲಾಂ ಮಂಗಳಾರತಿ ನಡೆಯುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಉಮಾ ಹೇಳಿದ್ದಾರೆ.

Kollur Sri Mookambika Temple offers puja for Tipu ever day

"ಇಲ್ಲಿ ಈ ಸಂಪ್ರದಾಯ ಹಲವಾರು ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ. ಇದು ಟಿಪ್ಪುವಿನ ಸಂಸ್ಮರಣಾರ್ಥ ನಡೆಯುತ್ತಿದೆ ಎಂದು ಜನ ನಂಬಿದ್ದಾರೆ. ಸೀಎಂ, ಸಚಿವರು ಅಥವಾ ಅಧಿಕಾರಿಗಳಿಗೆ ನೀಡುವ ಗೌರವ ಸಂಪ್ರದಾಯವು ಇದಾಗಿದೆ. ದೇವಸ್ಥಾನಕ್ಕೆ ವಿಐಪಿಗಳು ಆಗಮಿಸಿದಾಗ ಇಲ್ಲಿನ ಸಿಬ್ಬಂದಿ ಕೈಯಲ್ಲಿ ಪಂಜು ಹಿಡಿದುಕೊಂಡು ಸ್ವಾಗತಿಸುತ್ತಾರೆ. [ಮಂಗಳೂರಲ್ಲಿ ಟಿಪ್ಪು ಜಯಂತಿಗೆ ಅಡ್ಡಿ, ಪೋಸ್ಟರ್ ಗೆ ಚಪ್ಪಲಿ ಹಾರ]

ವಿಐಪಿಗಳ ಉಪಸ್ಥಿತಿಯಲ್ಲಿ ಭಕ್ತರ ಮಂಗಳಾರತಿ ಮಾಡುತ್ತಾರೆ. ಆದರೀಗ ಸಂಜೆ ಹೊತ್ತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿದಾಗ ಈ ಸಂಪ್ರದಾಯ ಅನುಸರಣೆಯಾಗುತ್ತದೆ" ಎಂದಿದ್ದಾರೆ.

ದೇವಸ್ಥಾನಕ್ಕೆ ಅರಸ ಸರ್ಕಾರಿ ಪ್ರತಿನಿಧಿಗಳು ಆಗಮಿಸಿದಾಗ ಈ ಗೌರವ ಸಾಮಾನ್ಯ ಎಂದಿರುವ ಇತಿಹಾಸಕಾರ ಉದಯಬಾರ್ಕೂರ್, "ಕೊಲ್ಲೂರು ದೇವಸ್ಥಾನಕ್ಕಿಂತ ಕೇವಲ 10 ಕಿ ಮೀ ದೂರದಲ್ಲಿರುವ ಶಂಕರನಾರಾಯಣ ದೇವಸ್ಥಾನಕ್ಕೆ ಟಿಪ್ಪು ಭೇಟಿ ನೀಡಿದ್ದು, ಗಂಟೆಯೊಂದು ನೀಡಿದ್ದ. ಆಗ ಆತ ಕೊಲ್ಲೂರು ದೇವಸ್ಥಾನಕ್ಕೂ ಭೇಟಿ ನೀಡಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ನಾನೀಗ ಈ ಸಂಪ್ರದಾಯ ಹೇಗೆ ಆರಂಭವಾಯಿತು ಎಂಬುದನ್ನು ಅಧ್ಯಯನ ಮಾಡುತಿದ್ದೇನೆ" ಎಂದು ಉಮಾ ಹೇಳಿದರು.

English summary
Kollur Sri Mookambika Temple on the foothills of Western Ghats continues to perform a special puja in the name of the 'Tiger of Mysuru' every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X