ಕಪಿಲ ತೀರದಲ್ಲಿರುವ ಶಿಶಿಲೇಶ್ವರಕ್ಕೆ ಒಮ್ಮೆ ಭೇಟಿ ಕೊಡಿ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಬೇಸಿಗೆಯಲ್ಲಿ ಒಂದು ದಿನದ ಪ್ರವಾಸ ಹೋಗಲು ಯೋಜನೆ ರೂಪಿಸುತ್ತಿರುವವರು ಬೆಳ್ತಂಗಡಿ ತಾಲೂಕಿನಲ್ಲಿರುವ ಶಿಶಿಲೇಶ್ವರ ದೇವಾಲಯಕ್ಕೆ ಭೇಟಿ ನೀಡಬಹುದು. ಮಂಗಳೂರು ನಗರದಿಂದ ಸುಮಾರು 93 ಕಿ.ಮೀ.ದೂರದಲ್ಲಿರುವ ದೇವಾಲಯ ಕಪಿಲ ನದಿ ತೀರದಲ್ಲಿದೆ.

ಶಿಶಿಲೇಶ್ವರ ದೇವಾಲಯದಲ್ಲಿರುವ ಶಿವಲಿಂಗ ಉದ್ಭವ ಲಿಂಗವೆಂದು ಇತಿಹಾಸ ಹೇಳುತ್ತದೆ. ದೇವಸ್ಥಾನಕ್ಕೆ ಅಂಟಿಕೊಂಡಿರುವ ಮತ್ಸ್ಯ ತೀರ್ಥದಲ್ಲಿ ಪೆರುವೇಲು ಎಂಬ ಜಾತಿಗೆ ಸೇರಿದ ಸಾವಿರಾರು ಮೀನುಗಳಿವೆ. ನದಿಯ ಎರಡು ದಡವನ್ನು ಸಂಪರ್ಕಿಸುವ ಭವ್ಯ ತೂಗು ಸೇತುವೆ. ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟು, ಇಲ್ಲಿನ ಸೂರ್ಯಾಸ್ತಗಳು ಪ್ರಮುಖ ಆಕರ್ಷಣೆಯಾಗಿವೆ. [ದೇವಾಲಯದ ಬಗ್ಗೆ ಓದಿ]

shishileshwara temple

ಒಂದು ದಿನದ ಪ್ರವಾಸಕ್ಕೆ ಇದು ಸೂಕ್ತವಾದ ತಾಣವಾಗಿದೆ. ಬೆಳಗ್ಗೆ ತೆರಳಿದರೆ ಸಂಜೆ ಸೂರ್ಯಾಸ್ತದ ಸವಿಸವಿದು ವಾಪಸ್ ಬರಬಹುದು. ಇಲ್ಲಿ ವಾಸ್ತವ್ಯ ಹೂಡಲು ಗುಣಮಟ್ಟದ ಲಾಡ್ಜ್ ವ್ಯವಸ್ಥೆ ಇಲ್ಲ. ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿ, ಶಿಶೀಲೇಶ್ವರಕ್ಕೆ ಹೋಗಿ ಬರಬಹುದು. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

ಎಷ್ಟು ದೂರ? : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶೀಲೇಶ್ವರ ಗ್ರಾಮದಲ್ಲಿ ಈ ದೇವಾಲಯವಿದೆ. ಮಂಗಳೂರು ನಗರದದಿಂದ ಸುಮಾರು 93 ಕಿ.ಮೀ. ಪ್ರಯಾಣ ಮಾಡಿದರೆ ದೇವಾಲಯ ತಲುಪಬಹುದು. ಕಾರ್ಕಳದಿಂದ ಇರುವ ದೂರ ಸುಮಾರು 91 ಕಿ.ಮೀ. [ಪ್ರೀತಿ ಪಾತ್ರರೊಂದಿಗೆ ಪ್ರವಾಸದ ಐಡಿಯಾ ತಲೆಯಲ್ಲಿದೆಯೇ?]

-
-
-
-

ಹೋಗುವುದು ಹೇಗೆ? : ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲ್ಯಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಸಿಗುವ ಕೊಕ್ಕಡದಿಂದ ಬಲಕ್ಕೆ 16 ಕಿ.ಮೀ ತೆರಳಿದರೆ ದೇವಾಲಯ ಸಿಗುತ್ತದೆ. ಉಡುಪಿಯಿಂದ ಬರುವವರು ಕಾರ್ಕಳ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಅರಶಿಣಮಕ್ಕಿ ಮೂಲಕ ತಲುಪಬಹುದು. ಉಪ್ಪಿನಂಗಡಿ ಧರ್ಮಸ್ಥಳಗಳಿಂದ ಬಸ್ ಸೌಲಭ್ಯವೂ ಇದೆ.

ಹಸಿರು ಪರಿಸರ : ಶಿಶಿಲೇಶ್ವರ ದೇವಾಲಯದ ಸುತ್ತಲು ಹಸಿರ ಕಾಡು, ಪ್ರಕೃತಿಗೆ ಕಲಶ ವಿಟ್ಟಂತಿರುವ ದೊಡ್ಡ ಬೆಟ್ಟಗಳಿವೆ. ನಡುವೆ ಪಶ್ಚಿಮ ಘಟ್ಟದಿಂದ ಹಾದು ಬರುವ ಅಪ್ಪಟ ಸ್ಫಟಿಕದಂಥ ನೀರಿನ ಕಪಿಲ ನದಿ ಇದೆ.

ಶಿಶಿಲೇಶ್ವರ ದೇವಸ್ಥಾನ ಸುಮಾರು 800 ವರ್ಷಗಳಷ್ಟು ಹಳೆಯದ್ದು. ಮನಸ್ಸಿಗೆ ಶಾಂತಿ, ದೇಹಕ್ಕೆ ತಂಪಿನ ಅನುಭವ ನೀಡುವ ಸುಂದರ ಪರಿಸರವನ್ನು ನೀವೊಮ್ಮೆ ನೋಡಿ ಬನ್ನಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shishileshwara temple in Shishila of Belthangady taluk, Dakshina Kannada district. Its best place for one day trip. Temple located along side of river Kapila believed to be built around 700 years back. A hanging bridge over the river is another attraction.
Please Wait while comments are loading...