ಬಂಟ್ವಾಳ ನಾಗ ಸನ್ನಿಧಿಗೆ ನಟ ಕಿಚ್ಚ ಸುದೀಪ್ ಭೇಟಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್, 4: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಗುರುವಾರ ಸಂಜೆ ಬಂಟ್ವಾಳ ಸಮೀಪದ ಮೊಡಂಕಾಪುವಿನ ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನ್ನಿಧ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಿಚ್ಚ ಸುದೀಪ್ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ನಟ ರವಿಶಂಖರ್ ಮತ್ತು ರವೀಶ್ ಕೂಡಾ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Kiccha Sudeep Visits Modankapu Shri Vanadurga Temple

ತಮ್ಮ ಮುಂಬರುವ ಸಿನಿಮಾಗಳಿಗೆ ಹಾಗೂ ಅವರ ಕುಟುಂಬಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರು ಒಂದು ಸುಂದರ ನಗರ, ಇಲ್ಲಿನ ದೇವಸ್ಥಾನಗಳು ಅಂತೂ ಬಹಳ ವಿಶೇಷವಾದವು. ಎಂದು ಸುದೀಪ್ ಹೇಳಿದರು.

ಇಲ್ಲಿನ ಜನರು ಕೊಟ್ಟಿರುವ ಪ್ರೀತಿ ಹಾಗೂ ಸಹಕಾರಕ್ಕೆ ನಾನು ಎಂದೂ ಚಿರಋಣಿ ಎಂದು ಸುದೀಪ್ ಅವರು ತಮ್ಮ ಸಂತಸವನ್ನು ಹಂಚಿಕೊಂಡರು.

Kiccha Sudeep Visits Modankapu Shri Vanadurga Temple

ಇನ್ನು ಮಂಗಳೂರಿನವರೇ ಆಗಿರುವ ನಿರ್ದೇಶಕ ರಾಜೇಶ್ ಭಟ್ ಸಹ ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನ್ನಿಧ್ಯಕ್ಕೆ ಭೇಟಿ ನೀಡಿ ಸುದೀಪ್‌ರೊಂದಿಗೆ ಪೂಜೆ ಸಲ್ಲಿಸಿದರು.

ಸುದೀಪ್ ನಮ್ಮ ಹುಡುಗ ಆತ ನಮ್ಮ ಕೂಡ್ಲಕ್ಕೆ ಬಹಳ ಸಮಯದ ನಂತರ ಬಂದಿರುವುದು ನನಗೆ ನಿಜಕ್ಕೂ ಸಂತೋಷ ಎಂದು ಅವರು ಹೇಳಿದರು.

ಖಳನಾಯಕ ನಟ ರವಿಶಂಖರ್ ಸಹ ಐ ಲವ್ ಮಂಗಳೂರು, ನನ್ನ ಪ್ರೀತಿಯ ಗೆಳಯ ಸುದೀಪ್ ರೊಂದಿಗೆ ಸೇರಿ ವಿಶೇಷ ಪೂಜೆ ಸಲಿಸುವ ಅವಕಾಶವನ್ನು ದೇವರು ನನಗೆ ಕೊಟ್ಟಿದ್ದು ನನ್ನ ಬಾಗ್ಯ ಎಂದರು. ಮಂಗಳೂರಿನ ಮೀನು ಊಟವಂತೂ ನನ್ನ ಫೇವರೇಟ್ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಾಲಯದ ಮುಖ್ಯಸ್ಥ ಗುರುದತ್ ಶೆಣೈ, ಪಾಂಡುರಂಗ ಶೆಣೈ, ಭೂಮಿಕ ಶೆಣೈ, ಪುಷ್ಪರಾಜ್ ಮೊದಲಾದವರು ನಟರನ್ನು ಸ್ವಾಗತಿಸಿದರು.

ಕಿಚ್ಚನ ಅಭಿಮಾನಿಗಳು ಕೂಡ ಬಂಟ್ವಾಳದ ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನಿಧ್ಯಕ್ಕೆ ಆದರದಿಂದ ಸ್ವಾಗತಿಸಿದರು. ಅವರೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಲು ಜನ ಮುಗಿಬಿದ್ದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sandalwood actor Kiccha Sudeep visited Shri Vanadurga Naga temple at Modankapu near BC Road here on Thursday and offered special pooja.
Please Wait while comments are loading...