ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ರಾಜ್ಯದಲ್ಲಿ ಸಿಗರೇಟ್ ಮಾರಾಟಕ್ಕೂ ಲೈಸೆನ್ಸ್: ಯುಟಿ ಖಾದರ್

|
Google Oneindia Kannada News

ಮಂಗಳೂರು, ಸೆಪ್ಟೆಂಬರ್. 26: ಮದ್ಯ ಮಾರಾಟಕ್ಕೆ ಲೈಸೆನ್ಸ್ ಮಾದರಿಯಲ್ಲೇ ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಮಾರಾಟಕ್ಕೂ ಲೈಸೆನ್ಸ್ ಕಾನೂನು ತರುವುದಕ್ಕೆ ಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ರಾಜ್ಯ ವಸತಿ ಹಾಗು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕೆ ಡಿ ಪಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಸಿಗರೇಟ್ ಮೇಲೆ ಹೆಚ್ಚುವರಿ ಸೆಸ್, ತುಟಿ ಸುಡಲಿದೆ ಎಚ್ಚರ!ಸಿಗರೇಟ್ ಮೇಲೆ ಹೆಚ್ಚುವರಿ ಸೆಸ್, ತುಟಿ ಸುಡಲಿದೆ ಎಚ್ಚರ!

ಈ ಮಾದಕ ದ್ರವ್ಯ ಹತ್ತಿಕ್ಕುವ ನಿಟ್ಟಿನಲ್ಲಿ ಮದ್ಯ ಮಾರಾಟಕ್ಕೆ ಲೈಸೆನ್ಸ್ ಪಡೆದುಕೊಳ್ಳಬೇಕಾದ ಮಾದರಿಯಲ್ಲೇ ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಮಾರಾಟಕ್ಕೂ ಲೈಸೆನ್ಸ್ ಕಾನೂನು ತರುವುದಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

Khadar says state government preparing new rules to sell Cigarettes

ಅಂಗಡಿಗಳಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸಿಗರೇಟ್ ಮಾರುತ್ತಿದ್ದಾರೆ. ಸಿಗರೇಟ್ , ಬೀಡಿ ಸೇರಿದಂತೆ ಇನ್ನಿತರ ತಂಬಾಕು ಉತ್ಪನ್ನಗಳ ಚಿಲ್ಲರೆ‌ ಮಾರಾಟ ಮಾಡುವುದಕ್ಕೆ ಕೂಡಾ ನಿಯಂತ್ರಣ ಹೇರಲಾಗುವುದು ಎಂದು ಖಾದರ್ ಸ್ಪಷ್ಟ ಪಡಿಸಿದ್ದಾರೆ.

ಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ

ಮುಂದೆ ಸಿಗರೇಟ್ ಮಾರಾಟಕ್ಕೂ ಸ್ಥಳೀಯ ಸಂಸ್ಥೆಗಳಿಂದ ಲೈಸೆನ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ. ಈ ಬಗ್ಗೆ ಶೀಘ್ರ ನಿಯಮಾವಳಿ ರಚಿಸಲಾಗುವುದು ಎಂದು ತಿಳಿಸಿದರು.

English summary
KDP meeting organised in Mangaluru Today. In meeting Minister UT Khadar said that state government preparing new rules to sell Cigarettes and other tobacco products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X