ಕೇರಳದ ಯುವಕ ಮಂಗಳೂರಿನಲ್ಲಿ ಒಂದು ತಿಂಗಳಿನಿಂದ ನಾಪತ್ತೆ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 24 : ಕೇರಳ ಮೂಲದ ಯುವಕನೊಬ್ಬ ಮಂಗಳೂರಿನಲ್ಲಿ ನಾಪತ್ತೆಯಾಗಿದ್ದಾನೆ. ಯುವಕನ ಕುಟುಂಬದವರು ಒಂದು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ.

ಕೇರಳದ ಕಣ್ಣೂರು ಮೂಲದ ದಿನೇಶನ್ (30) ಜುಲೈ 14ರಿಂದ ನಾಪತ್ತೆಯಾಗಿದ್ದಾನೆ. ಆದರೆ, ಯುವಕನ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.[ಕರ್ನಾಟಕ- ಕೇರಳ ಗಡಿಯಲ್ಲಿ ಚಳಿ ಕಾಯಿಸುತ್ತಿರುವ ISIS]

Dineshan

ಕೊಲ್ಲೂರಿಗೆ ಹೋಗುವುದಾಗಿ ಹೇಳಿ ಹೊರಟ ಯುವಕ ಬಳಿಕ ನಾಪತ್ತೆಯಾಗಿದ್ದಾನೆ. ದಿನೇಶನ್ ಅವರ ಕುಟುಂಬದವರು ಒಂದು ತಿಂಗಳಿನಿಂದ ಆತನಿಗಾಗಿ ಹುಡುಕಾಟ ನಡೆಸಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

ದಿನೇಶನ್ ಮನೆಯಿಂದ ಹೊರಡುವಾಗ ಬಿಳಿಯ ಶರ್ಟ್ ಮತ್ತು ಧೋತಿ ಧರಿಸಿದ್ದ ಎಂದು ತಿಳಿದುಬಂದಿದೆ. ಈ ಯುವಕನ ಬಗ್ಗೆ ಮಾಹಿತಿ ಸಿಕ್ಕರೆ ಕೆಳಗಿನ ವಿಳಾಸಕ್ಕೆ ಮಾಹಿತಿ ನೀಡಿ ಎಂದು ಮನವಿ ಮಾಡಲಾಗಿದೆ.[ಕೇರಳ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ]

ವಿಳಾಸ

Odayoth House
P.O Kayaralam
Mayyil
Kannur District
Pin: 670602, Kerala
Phone : 09895143128 Or 09947968363

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 30-year-old youth hailing from Kerala has gone missing in Mangaluru city since July 14, 2016. The missing person has been identified as Dineshan hailing from Kannur.
Please Wait while comments are loading...