ವಾಲಿಬಾಲ್: ಕೇರಳ ಚಾಂಪಿಯನ್, ಕರ್ನಾಟಕ ರನ್ನರ್ ಅಪ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 13 : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಬಾಲಕಿಯರ 19ರ ವಯೋಮಾನದ ವಾಲಿಬಾಲ್ ಪಂದ್ಯಾಟದಲ್ಲಿ ಕೇರಳ ತಂಡ ಅತಿಥೇಯ ಕರ್ನಾಟಕ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕೇರಳ ಮತ್ತು ಕರ್ನಾಟಕ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕೇರಳ ತಂಡ (25-18, 25-23, 25-21)ನೇರ ಸೆಟ್‌ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಕೇರಳದ ಪರವಾಗಿ ನಾಯಕಿ ಅನ್ನಾ ಮ್ಯಾಥ್ಯೂ ಹಾಗೂ ವರ್ಣಾ ಉತ್ತಮ ಹೊಡೆತಗಳ ಮೂಲಕ ಗಮನ ಸೆಳೆದರೆ, ಗ್ಲಾಡಿಯಸ್ ಅವರು ನಿರ್ಮಿಸಿದ ತಡೆಗೋಡೆ ಸದಾ ಕರ್ನಾಟಕವನ್ನು ಕಾಡಿತ್ತು.

Kerala champion of 62nd national level Under-19 girls volleyball

ಕರ್ನಾಟಕದ ಪರವಾಗಿ ಮೇಘನಾ ಉತ್ತಮ ಪ್ರದರ್ಶನ ನೀಡಿದರು. ನಾಯಕಿ ಯಶೋಧಾ ಶಾಲಿ ಹಾಗೂ ಇತರರು ಬೆಂಬಲ ನೀಡಿದರೂ ಕೇರಳ ತಂಡದ ಎದುರು ಇವರ ಆಟ ನಡೆಯಲಿಲ್ಲ.

ಮೂರು ಹಾಗೂ ನಾಲ್ಕನೆ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಉತ್ತರಪ್ರದೇಶ ತಂಡ ಪಶ್ಚಿಮ ಬಂಗಾಳ ತಂಡವನ್ನು 3-1 ಅಂತರದಲ್ಲಿ (25-19, 18-25, 25-22, 25-15) ಗೆಲುವನ್ನು ತನ್ನದಾಗಿಸಿಕೊಂಡರು.

ಗುರುವಾರ ಬೆಳಗ್ಗೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ತಂಡ ಉತ್ತರಪ್ರದೇಶ ತಂಡವನ್ನು (25-15,25-10,25-19) ಅಂಕಗಳೊಂದಿಗೆ ನೇರ ಸೆಟ್‌ಗಳಲ್ಲಿ ಮಣಿಸಿ ಅಂತಿಮ ಹಣಾಹಣಿಗೆ ಅರ್ಹತೆಯನ್ನು ಪಡೆದುಕೊಂಡಿತ್ತು.

ಬಲವಾದ ಹೊಡೆತಗಳೊಂದಿಗೆ ಉತ್ತಮ ಆಟ ಪ್ರದರ್ಶಿಸಿದ ಕೇರಳ ತಂಡದ ಎದುರು ಯಾವುದೇ ಪ್ರತಿರೋಧ ವ್ಯಕ್ತಪಡಿಸಲು ಉತ್ತರಪ್ರದೇಶ ತಂಡಕ್ಕೆ ಸಾಧ್ಯವಾಗಲಿಲ್ಲ.

ಎರಡನೆಯ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಕರ್ನಾಟಕ ತಂಡ ಪಶ್ಚಿಮ ಬಂಗಾಳ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದೆ(25-12, 25-18, 25-23) ಸಹಸ್ರಾರು ಬೆಂಬಲಿಗರ ಚಪ್ಪಾಳೆಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯ ತಂಡ ಯಾವ ಹಂತದಲ್ಲಿಯೂ ಪಶ್ಚಿಮ ಬಂಗಾಳ ತಂಡಕ್ಕೆ ಅವಕಾಶವನ್ನೇ ನೀಡಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kerala team champion of 62nd national level Under-19 girls’ volleyball tournament, organised by the government of Karnataka, department of PU education, Bengaluru.
Please Wait while comments are loading...