ಮಂಗಳೂರು: ಕಾರ್ಟೂನ್ ಸ್ಟಿಕರ್ ಗಳಲ್ಲಿ ಮಾದಕ ವಸ್ತು?

By: ಕಿರಣ್ ಸಿರ್ಸಿಕರ್
Subscribe to Oneindia Kannada

ಮಂಗಳೂರು, ಆಗಸ್ಟ್ 2: ಪುಟ್ಟ ಪುಟ್ಟ ಮಕ್ಕಳನ್ನು ಆಕರ್ಷಿಸುವ ಕಾರ್ಟೂನ್ ಕ್ಯಾರೆಕ್ಟರ್ ಗಳೆ ಈಗ ಮಾದಕ ವಸ್ತುಗಳಾಗಿ ಮಾರ್ಪಟ್ಟಿವೆ. ಕಾರ್ಟೂನ್ ಸ್ಟಿಕ್ಕರ್ ನಲ್ಲೂ ಮಾದಕ ವಸ್ತುಗಳು ತೂರಿ ಕೊಂಡಿರುವ ಆಘಾತಕಾರಿ ಮಾಹಿತಿ ಮಂಗಳೂರು ಸಮೀಪದ ಕೇರಳದ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ.

ಗುಜರಾತಿನಲ್ಲಿ ಭರ್ಜರಿ ಬೇಟೆ, 3500ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಇಲ್ಲಿಯ ಶಾಲಾ ವಿದ್ಯಾರ್ಥಿಯೊಬ್ಬ ಮಾದಕ ವಸ್ತುಗಳ ದಾಸನಾಗಿದ್ದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಆಘಾತಕಾರಿ ವಿಚಾರ ಬಯಲಾಗಿದೆ.ಕರ್ನಾಟಕದ ಗಡಿಭಾಗ ಕೇರಳದ ಕಾಸರಗೋಡಿನಲ್ಲಿ ಸ್ಟಿಕ್ಕರ್ ರೂಪದಲ್ಲಿರುವ ಮಾದಕ ವಸ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

kasargod is turning to be the market for high-end drugs

ಈಗಾಗಲೇ ಮಿಠಾಯಿ ,ಮೌತ್ ಸ್ಪ್ರೇ, ಟ್ಯಾಬ್ಲೆಟ್ ಗಳ ರೂಪದಲ್ಲಿ ಮಾದಕ ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಮಾಫಿಯಾದ ಹೊಸ ಪ್ರಯೋಗವೇ ಸ್ಟಿಕ್ಕರ್ ರೂಪದ ಮಾದಕವಸ್ತು. ಎಲ್ ಎಸ್ ಡಿ ( Lysergic acid diethylanide) ಹೆಸರಿನ ಭ್ರಮಾಕಾರಕ ಮಾದಕವಸ್ತು ಸ್ಟಿಕ್ಕರ್ ರೂಪದಲ್ಲಿ ಮಕ್ಕಳ ಕೈ ಸೇರುತ್ತಿವೆ.

ಮಕ್ಕಳನ್ನು ಆಕರ್ಷಿಸುತ್ತಿರುವ ಕಾರ್ಟೂನ್ ಸ್ಟಿಕ್ಕರ್ ಗೆ ಎಲ್ ಎಸ್ ಡಿ ಬ್ಲಾಟರ್ ಪೇಪರ್ ಅಂಟಿಸಲಾಗಿರುತ್ತದೆ. ಈ ಸ್ಟಿಕ್ಕರನ್ನು ನಾಲಿಗೆಯಲ್ಲಿ ಇಟ್ಟರೆ ಅದರಲ್ಲಿರುವ ಮಾದಕವಸ್ತು ಶರೀರ ಸೇರುತ್ತದೆ. ಇದನ್ನು ಸೇವಿಸಿದ ಬಳಿಕ ಗಂಟೆಗಳಕಾಲ ಭಾಂತಿ,ಅಮಲು ಇರುತ್ತದೆ. ಮಾದಕ ವಸ್ತು ಹೆಚ್ಚು ಪ್ರಮಾಣದಲ್ಲಿ ದೇಹ ಸೇರಿದರೆ ಸೇವಿಸಿದವರು ಪ್ರಜ್ಞಾಹೀನ ಸ್ಥಿತಿ ತಲುಪುತ್ತಾರೆ.

kasargod is turning to be the market for high-end drugs

ಪೋಷಕರು ತಮ್ಮ ಮಕ್ಕಳನ್ನು ಈ ಸ್ಟಿಕ್ಕರ್ ರೂಪದ ಮಾದಕವಸ್ತು ವಿನಿಂದ ದೂರ ಇಡುವಂತೆ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಲ್ ಆಗಿದೆ. ಕಾಸರಗೋಡು ಪೊಲೀಸರು ಈ ಸ್ಟಿಕ್ಕರ್ ರೂಪದ ಮಾದಕ ವಸ್ತುವಿನ ಬೆನ್ನು ಹತ್ತಿದ್ದಾರೆ.

ಮಂಗಳೂರಿನಲ್ಲೂ ಎಲ್ ಎಸ್ ಡಿ ಪತ್ತೆಯಾಗಿತ್ತು. 2015 ಎಪ್ರಿಲ್ ನಲ್ಲಿ ಮಂಗಳೂರಿನ ಕದ್ರಿ ಪೋಲಿಸರು 10 ಲಕ್ಷ ರೂಪಾಯಿ ಮೌಲ್ಯದ ಎಲ್ ಎಸ್ ಡಿ ಯನ್ನು ವಶಪಡಿಸಿ ರಾಬಿನ್ ರಾಯ್ ಎಂಬತನನ್ನು ಬಂಧಿಸಿದ್ದರು. ಹಾಗಾಗಿ ಎಜ್ಯುಕೇಷನ್ ಹಬ್ ಎಂದೇ ಖ್ಯಾತಿ ಪಡೆದಿರುವ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೂ ಸುಲಭವಾಗಿ ಗುರುತಿಸಲು ಹಾಗೂ ಪತ್ತೆ ಹಚ್ಚಲು ಅಸಾಧ್ಯವಾದ ಈ ಮಾದರಿ ಮಾದಕ ವಸ್ತುಗಳು ಈಗಾಗಲೇ ಲಗ್ಗೆ ಇಟ್ಟಿದೆ.

kasargod is turning to be the market for high-end drugs
Cybercrime Crime Attack Happen Once In Every 10 minutes In India | Oneindia Kannada

ಇದು ಅತ್ಯಂತ ಕಳವಳಕಾರಿ ಹಾಗೂ ಆತಂಕಕಾರಿ ವಿಷಯವಾಗಿದ್ದು, ಸಂಬಂಧಪಟ್ಟ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು ಇದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
High-end children cartoon stickers mind-altering drugs seem to have found a niche market in Kasargod which is slowly traveling down to Mangaluru. It is said that the school children have been the main target of cartoon sticker drug.
Please Wait while comments are loading...