ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ದೇಶಪಾಂಡೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 18 : 'ಕರಾವಳಿಯ ಸಮುದ್ರ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತೊಡಕಾಗಿರುವ ಸಿಆರ್‌‌ಝಡ್ ನಿಯಮದಲ್ಲಿ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರನ್ನು ಕೋರಲಾಗಿದ್ದು, ಈ ಬಗ್ಗೆ ಪೂರಕ ಪ್ರತಿಕ್ರಿಯೆ ದೊರಕಿದೆ' ಎಂದು ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ಪ್ರವಾಸಿ ಸೌಲಭ್ಯದ ವಿವಿಧ ಕಾಮಗಾರಿಗಳ ಹಾಗೂ ಕೆಎಸ್‌‌ಟಿಡಿಸಿ ಪ್ರವಾಸಿ ಬಸ್ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 'ಕಾರವಾರದಿಂದ ಮಂಗಳೂರುವರೆಗೆ 330 ಕಿ.ಮೀ. ದೂರದ ಸಮುದ್ರ ಕರಾವಳಿ ಇದೆ. ವಿದೇಶಗಳಲ್ಲಿ ಸಮುದ್ರ ತೀರದಲ್ಲಿ ಹೇರಳ ಪ್ರವಾಸೋದ್ಯಮಕ್ಕೆ ಅವಕಾಶವಿದೆ' ಎಂದರು. [ಉಡುಪಿಯಲ್ಲಿ ಘರ್ಜನೆ ನಿಲ್ಲಿಸಿದ ಹೆಲಿ ಟೂರಿಸಂ?]

rv deshapande

'ರಾಜ್ಯದ ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕರಾವಳಿ ನಿಯಂತ್ರಣ ವಲಯ (ಸಿಆರ್‌‌ಝಡ್)ನಿಯಮ ತೊಡಕಾಗಿದೆ. ಈ ಬಗ್ಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅಧ್ಯಯನ ನಡೆಸಲಾಗಿದೆ. ಅದರ ವರದಿಯನ್ನು ಕೇಂದ್ರ ಪರಿಸರ ಇಲಾಖೆಗೆ ಸಲ್ಲಿಸಲಾಗಿದೆ. ಶೀಘ್ರವೇ ನಿಯಮದಿಂದ ವಿನಾಯ್ತಿ ನೀಡುವ ಭರವಸೆ ಸಿಕ್ಕಿದೆ' ಎಂದು ಸಚಿವರು ಹೇಳಿದರು. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

'ಕರಾವಳಿ ನಿಯಂತ್ರಣ ವಲಯದ ನಿಯಮದಲ್ಲಿ ವಿನಾಯಿತಿ ಸಿಕ್ಕರೆ, ವಲಯದ ವ್ಯಾಪ್ತಿಯಲ್ಲಿನ 22 ಬೀಚ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬೀಚ್‌ಗಳ ಅಭಿವೃದ್ಧಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ' ಎಂದು ಆರ್‌.ವಿ.ದೇಶಪಾಂಡೆ ತಿಳಿಸಿದರು. [ವಾರಾಂತ್ಯಕ್ಕೆ ಕರ್ನಾಟಕ ಹಬ್ಬವೇ ಅತ್ಯುತ್ತಮ ಆಯ್ಕೆ..ಯಾಕಂದ್ರೆ?]

ಗೃಹ ರಕ್ಷಕ ದಳದವರ ನೇಮಕ : 'ಕರಾವಳಿಯ ಬೀಚ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಒದಗಿಸಲು ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಈಗಾಗಲೇ 175 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ 250 ಮಂದಿಯನ್ನು ನೇಮಕ ಮಾಡಲಾಗುವುದು. ಇದಲ್ಲದೆ ಪ್ರವಾಸಿ ತಾಣಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಕೈಗಾರಿಕೆಗಳ ಸಿಎಸ್ಆರ್ ನಿಧಿಯನ್ನು ಬಳಕೆ ಮಾಡಲಾಗುವುದು' ಎಂದು ಸಚಿವರು ಹೇಳಿದರು.

ಸಿಟಿ ಪ್ರವಾಸಿ ಬಸ್ ಸಂಚಾರದ ಮಾಹಿತಿ : ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಸಿಟಿ ಪ್ರವಾಸಿ ಬಸ್ ನಿತ್ಯವೂ ಮಂಗಳೂರಿನ ಆಯ್ದ ಪ್ರವಾಸಿ ಕೇಂದ್ರಗಳಿಗೆ ಸಂಚಾರ ನಡೆಸಲಿದೆ. ಒಬ್ಬರಿಗೆ 190 ರೂ. ಪ್ರಯಾಣದ ದರ ನಿಗದಿಪಡಿಸಲಾಗಿದೆ. ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಿಸಲಾಗಿದ್ದು, ಕನಿಷ್ಠ 10 ಮಂದಿ ಇದ್ದರೆ ಬಸ್ ಹೊರಡಲಿದೆ.

ಬೆಳಗ್ಗೆ 8ಕ್ಕೆ ಲಾಲ್‌‌ಬಾಗ್‌‌ನಿಂದ ಹೊರಡುವ ಬಸ್ ಕುದ್ರೋಳಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ, ಜೈವಿಕ ಉದ್ಯಾನವನ, ತಣ್ಣೀರುಬಾವಿ ಮರಗಳ ಉದ್ಯಾನ ಮತ್ತು ಸಮುದ್ರ ತೀರಕ್ಕೆ ಸಂಚರಿಸಿ ಸಂಜೆ 7 ಗಂಟೆಗೆ ಮರಳಿ ಲಾಲ್‌‌ಬಾಗ್‌‌ ತಲುಪಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka government has sought a relaxation on Coastal Regulation Zone (CRZ) norms to develop beach tourism in the state. Proposal regarding this issue submitted to central government said, Tourism minister R. V. Deshpande at Mangaluru, On April 17, 2016.
Please Wait while comments are loading...