ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ : ಕಮಲದ ಅಲೆಗೆ ಕೈ ಧೂಳೀಪಟ

|
Google Oneindia Kannada News

ಮಂಗಳೂರು, ಮೇ 16: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಗೆಲುವಿನ ನಗೆ ಬೀರಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆ ಹೊರಬೀಳ ಬೇಕಾಗಿದೆ.

ಪ್ರತೀ ಹಂತದಲ್ಲೂ ಭರ್ಜರಿ ಮುನ್ನಡೆ ಸಾಧಿಸಿಕೊಂಡು ಬಂದ ಕಟೀಲ್, ಅಂತಿಮವಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನು 1,43,709 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.(ಕರ್ನಾಟಕ ಸೀಟುಗಳಿಗೆ ಮತ ಎಣಿಕೆ : ಹಿನ್ನಡೆ ಮುನ್ನಡೆ)

Nalin Kumar Kateel (BJP) retains Dakshina Kannada Loksabha constituency

ಇನ್ನು ಕಮ್ಯೂನಿಸ್ಟ್ ಪಕ್ಷಕ್ಕೆ ಬೆಂಬಲ ವ್ಯಕ್ತ ಪಡಿಸಿ ಜೆಡಿಎಸ್ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಕಣದಲ್ಲಿ ಒಟ್ಟು ಹದಿನಾಲ್ಕು ಮಂದಿ ಕಣದಲ್ಲಿದ್ದರು. ಬಿಜೆಪಿ, ಕಾಂಗ್ರೆಸ್ ಹೊರತಾಗಿ ಕಣದಲ್ಲಿದ್ದ ಇತರೆಲ್ಲಾ ಅಭ್ಯರ್ಥಿಗಳು ಠೇವಣಿಯನ್ನು ಕಳೆದು ಕೊಂಡಿದ್ದಾರೆ.

2009ರ ಚುನಾವಣೆಯಲ್ಲಿ ಕಟೀಲ್ ಅವರು ಪೂಜಾರಿಯವರನ್ನು ನಲವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು.

ಏಪ್ರಿಲ್ 17ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದಾಖಲೆಯ ಶೇ. 77.18 ಮತದಾನವಾಗಿತ್ತು.(ಕರ್ನಾಟಕ ಲೋಕಸಭೆ : ಗೆದ್ದವರು ಸೋತವರು)

ದಕ್ಷಿಣ ಕನ್ನಡ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ನಳೀನ್ ಕುಮಾರ್ ಕಟೀಲ್
1 ಬಿಜೆಪಿ 642739
ಜನಾರ್ಧನ ಪೂಜಾರಿ 2 ಕಾಂಗ್ರೆಸ್ 499030
ಹನೀಫ್ ಖಾನ್ ಕೊಡಾಜೆ
3 ಎಸ್ಡಿಪಿಐ 27254
ಕೆ ಯಾದವ ಶೆಟ್ಟಿ 4 ಸಿಪಿಐಎಂ 9394
English summary
Lok Sabha Election results 2014, Karnataka : BJP sitting MP and party candidate Nalin Kumar Kateel (BJP) wins Dakshina Kannada constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X