ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಮೊದಲ ಸಲ ಮತದಾನ ಮಾಡಿದ 20 ಮಂಗಳಮುಖಿಯರು

|
Google Oneindia Kannada News

ಮಂಗಳೂರು, ಮೇ 12 : ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಮತದಾನ ಶನಿವಾರ ನಡೆಯುತ್ತಿದೆ. ಇದೇ ಮೊದಲ ಬಾರಿಗೆ 20 ತೃತೀಯ ಲಿಂಗಿಗಳು ಮಂಗಳೂರಿನಲ್ಲಿ ಮತದಾನ ಮಾಡಿದರು.

LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು

ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಮಂಗಳೂರಿನ ಮಿಲಾಗ್ರಿಸ್ ಶಾಲೆಯಲ್ಲಿ 20 ಮಂಗಳಮುಖಿಯರು ಇಂದು ತಮ್ಮ ಹಕ್ಕು ಚಲಾಯಿಸಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಹಲವು ವರ್ಷಗಳಿಂದ ಇವರು ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಸಿಕ್ಕಿದೆ. ಮೊದಲ ಬಾರಿ ಮತದಾನ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿ

Karnataka elections : Transgenders cast votes first time in Mangaluru

ತೃತೀಯ ಲಿಂಗಿಗಳ ಪೈಕಿ ಒಬ್ಬರು ಅಂಗವಿಕಲರಾಗಿದ್ದು, ಅವರು ಸ್ನೇಹಿತರ ಸಹಾಯದಿಂದ ತಮ್ಮ ಹಕ್ಕು ಚಲಾಯಿಸಿದರು. ಕರ್ನಾಟಕದಲ್ಲಿ 5055ತೃತೀಯ ಲಿಂಗಿ ಮತದಾರರು ಇದ್ದಾರೆ. ಹೆಚ್ಚಿನ ಮತದಾರರು ಮೈಸೂರಿನಲ್ಲಿದ್ದಾರೆ.

ಮಂಗಳಮುಖಿಯರನ್ನು ತೃತಿಯ ಲಿಂಗಿಗಳು ಎಂದು ಸುಪ್ರೀಂಕೋರ್ಟ್ ಪರಿಗಣಿಸಿದ್ದು, ಸಕಲ ಸರ್ಕಾರಿ ಸೌಲಭ್ಯಗಳನ್ನು ಅವರು ಪಡೆಯಬಹುದಾಗಿದೆ.

English summary
More than 20 Transgenders cast votes in the Karnataka assembly elections 2018 in Milagres school Mangaluru on May 12, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X