ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಗೆಲುವಿನ ನಗೆ ಬೀರಿದ ಸಚಿವ ಯು.ಟಿ.ಖಾದರ್.!

By Harshitha
|
Google Oneindia Kannada News

ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಹಾಗೂ ನಾಗರೀಕ ಸರಬರಾಜು ಸಚಿವರಾಗಿದ್ದ ಯು.ಟಿ.ಖಾದರ್ ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಜಯಭೇರಿ ಬಾರಿಸಿದ್ದಾರೆ.

ಹಾಲಿ ಶಾಸಕ ಯು.ಟಿ.ಖಾದರ್ ಕುಟುಂಬ ಮಂಗಳೂರು ಕ್ಷೇತ್ರದಲ್ಲಿ ಪ್ರಭಾವಿತರು. 1972, 1978, 1999 ಹಾಗೂ 2004 ರಲ್ಲಿ ಯು.ಟಿ.ಖಾದರ್ ತಂದೆ ಯು.ಟಿ.ಫರೀದ್ ಗೆಲುವು ಸಾಧಿಸಿದ್ದರು.

ಮಂಗಳೂರಿನಲ್ಲಿ ಸಚಿವ ಖಾದರ್ ಮುನ್ನಡೆಮಂಗಳೂರಿನಲ್ಲಿ ಸಚಿವ ಖಾದರ್ ಮುನ್ನಡೆ

2004ರಲ್ಲಿ ಗೆದ್ದ ನಂತರ ಫರೀದ್ 2007ರಲ್ಲಿ ನಿಧನರಾದರು. ಆಗ ಅವರ ಜಾಗದಲ್ಲಿ ಮಗ ಯು.ಟಿ. ಖಾದರ್ ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಈ ಚುನಾವಣೆಯಲ್ಲಿ ಖಾದರ್ ಗೆದ್ದರು. ಅಂದಿನಿಂದ ಇಲ್ಲಿಯವರೆಗೂ ಯು.ಟಿ.ಖಾದರ್ ಗೆಲುವಿನ ಓಟ ಮುಂದುವರಿದಿದೆ.

Karnataka Election Results 2018: Congress Candidate UT Khader wins mangaluru constituency

ಮುಸ್ಲಿಂ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಯು.ಟಿ.ಖಾದರ್ ಸುಲಭವಾಗಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯು.ಟಿ.ಖಾದರ್ ಪಡೆದಿರುವ ಒಟ್ಟು ಮತಗಳು - 80813. ಇನ್ನೂ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಪಡೆದಿರುವ ಒಟ್ಟು ಮತಗಳು - 61074. 3692 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ ಜೆ.ಡಿ.ಎಸ್ ನ ಕೆ.ಅಶ್ರಫ್.

LIVE: ಕರ್ನಾಟಕ ಫಲಿತಾಂಶ: ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲುವುLIVE: ಕರ್ನಾಟಕ ಫಲಿತಾಂಶ: ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲುವು

English summary
Karnataka Election Results 2018: Congress Candidate UT Khader wins Mangaluru Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X