ಕಾರ್ಕಳದ ಬೈಲೂರಿನಲ್ಲಿ 71 ಲಕ್ಷ ರೂ ಸಾಗಿಸುತಿದ್ದವರ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕಾರ್ಕಳ, ಡಿಸೆಂಬರ್. 02 : ದಾಖಲೆ ಇಲ್ಲದ 2,000 ರೂಪಾಯಿ ಮುಖಬೆಲೆಯ 71 ಲಕ್ಷ ರೂಪಾಯಿ ಹಣ ಬೈಲೂರಿನಲ್ಲಿ ಪತ್ತೆಯಾಗಿದೆ. ಶುಕ್ರವಾರ ಮದ್ಯಾಹ್ನ ಹಣ ಸಾಗಿಸುತ್ತಿದ್ದ ಮೂವರನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಮ೦ಗಳೂರು ಕುದ್ರೋಳಿಯ ಇಮ್ರಾನ್‌, ಆಸೀಫ್ ಮತ್ತು ದೀಪಕ್‌ ಎಂದು ತಿಳಿದುಬಂದಿದೆ. KA-19 MA-7639 ನೋಂದಣಿಯ ಫೋರ್ಡ್ ಕಾರಿನಲ್ಲಿ ಹಣವನ್ನು ಸಾಗಿಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿದ್ದಾರೆನ್ನಲಾಗಿದೆ.

Karkala police raids a car during the shipment of illegal money

ಪೊಲೀಸರು ಈ ಮೂವರನ್ನೂ ತೀವ್ರ ವಿಚಾರಣೆ ಒಳಪಡಿಸುತ್ತಿದ್ದು, ಈ ಪ್ರಕರಣವನ್ನು ಮಂಗಳೂರು ಐಟಿ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ನಾಲ್ಕೈದು ದಿನ ಸರತಿ ಸಾಲಿನಲ್ಲಿ ನಿಂತರೂ ನಾಲ್ಕು ಹೊಸ ನೋಟುಗಳನ್ನು ಸಹ ಪಡೆಯಲಾಗದ ಪರಿಸ್ಥಿತಿ ಇರುವಾಗ ಇವರ ಬಳಿ ಇಷ್ಟು ನೋಟುಗಳು ಹೇಗೆ ಬಂದವು ಎಂದು ಪೊಲೀಸ್ ತನಿಖೆಯಲ್ಲಿ ಇನ್ನಷ್ಟೇ ತಿಳಿಯಬೇಕಿದೆ.

ಕಾರ್ಕಳ ಪೊಲೀಸ್ ವೃತ್ತನೀರಿಕ್ಷಕ ಜಾನ್ ಅ೦ಟೋನಿ ಹಾಗೂ ಗ್ರಾಮಾ೦ತರ ಪಿಎಸ್ಐ ರಫೀಕ್ ಈ ಕಾರ್ಯಚರಣೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karkala police raids a car during the shipment of illegal money amounting to 71 lakhs, carrying new two thousand currency notes. at Karkala Malura on Friday.
Please Wait while comments are loading...