ಮಂಗಳೂರು ಮೇಯರ್ ಕವಿತಾ ಹುಲಿವೇಷ ತೊಟ್ಟು ಸಖತ್ ಡ್ಯಾನ್ಸ್

Posted By:
Subscribe to Oneindia Kannada

ಮಂಗಳೂರು, ನವೆಂಬರ್ 16 : ಮಂಗಳೂರು ಮಹಾನಗರ‌ ಪಾಲಿಕೆಯ ಖಡಕ್ ಮೇಯರ್ ಎನಿಸಿಕೊಂಡಿರುವ ಕವಿತಾ ಸನಿಲ್ ಇತ್ತಿಚೆಗೆ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ಸುದ್ದಿಯಾಗಿದ್ದರು. ಮೇಯರ್ ಕವಿತಾ ಸನೀಲ್ ಫೈಟ್ ಗೂ ಸೈ ನೃತ್ಯಕ್ಕೂ ಜೈ ಎನ್ನುವಂತೆ ಈಗ ಹುಲಿವೇಷದ ವಾದ್ಯಕ್ಕೆ ಬಿಂದಾಸ್ ಹೆಜ್ಜೆ ಹಾಕಿದ್ದಾರೆ ಮತ್ತೆ ಸುದ್ದಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ ಆಯೋಜಿಸಿ ಕಾರ್ಯಕ್ರಮದಲ್ಲಿ ಸಿಎಂ‌ ಸಿದ್ಧರಾಮಯ್ಯ ಅವರೊಂದಿಗೆ ಕರಾಟೆ ಪ್ರದರ್ಶಿಸುತ್ತ ಸಿಎಂ ಕರಾಟೆ ಪಂಚ್ ಭಾರಿ ಪ್ರಚಾರ ಗಿಟ್ಟಿಸಿತ್ತು. ಆದರೆ ಇದೀಗ ಮತ್ತೆ ಕವಿತಾ ಸನಿಲ್ ಸುದ್ದಿಯಾಗಿದ್ದಾರೆ.

Karate fighter Mangalore mayor kavita sanil once again in news with tiger dance

ಇತ್ತೀಚೆಗಷ್ಟೇ ಮಹಾನಗರ ಪಾಲಿಕೆಯ ಸಿಬ್ಬಂದಿಗಳಿಗೆ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಮೇಯರ್ ಕವಿತಾ ಸನೀಲ್ ಕೂಡ ಭಾಗವಹಿಸಿದ್ದರು. ಕ್ರೀಡಾಕೂಟದ ಮುಕ್ತಾಯದ ಬಳಿಕ ಇತರರ ಜತೆಗೂಡಿ ಮೇಯರ್ ಕವಿತಾ ಸನಿಲ್ ಹಾಗು ಉಪ‌ಮೇಯರ್ ರಜನೀಶ್ ಹುಲಿವೇಷದ ವಾದ್ಯಕ್ಕೆ ಸಕ್ಕತ್ ಹೆಜ್ಜೆ ಹಾಕಿದ್ದಾರೆ. ಮೇಯರ್ ಅವರ ಹುಲಿವೇಷದ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.

Karate fighter Mangalore mayor kavita sanil once again in news with tiger dance

ಮಂಗಳೂರಿನ ಪ್ರಥಮ ಪ್ರಜೆ ಆಗಿದ್ದರೂ ನಗರ ಪಾಲಿಕೆಯ ಸಿಬ್ಬಂದಿಗಳ ಜತೆ ಸಾಮಾನ್ಯರಂತೆ ಬೆರೆತು ಡ್ಯಾನ್ಸ್ ಮಾಡಿರುವುದರ ಕುರಿತು ಪ್ರಶಂಸೆ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Mayor who is said to be the masters in karate is now once again in news with her stylish tiger dance that has become viral on the social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ