ಮಂಗಳೂರಿನ ಪತ್ರಕರ್ತ ಸಂದೀಪ್ ವಾಗ್ಲೆಗೆ ಪ.ಗೋ. ಪ್ರಶಸ್ತಿ ಪ್ರದಾನ

Subscribe to Oneindia Kannada

ಮಂಗಳೂರು, ಎ. 16: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2016 ನೇ ಸಾಲಿನ ಪ. ಗೋ. ಪ್ರಶಸ್ತಿಯನ್ನು ಗ್ರಾಮೀಣ ವರದಿಗಾರಿಕೆಗಾಗಿ 'ಕನ್ನಡ ಪ್ರಭ' ಪತ್ರಿಕೆಯ ವರದಿಗಾರ ಸಂದೀಪ್ ವಾಗ್ಲೆಯವರಿಗೆ ಪ್ರದಾನ ಮಾಡಲಾಯಿತು.

ಈ ಪ. ಗೋ. ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.[ವೈರಿಗಳ ಸದೆಬಡಿದ ಮಂಗಳೂರಿನ ಯೋಧನ ದುರಂತ ಕಥೆ]

Kannada Prabha journalist Sandeep Wagle receives Pa. Go. award

2016ರ ಜುಲೈ 26 ರಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ "ನಾಡಿಗೆ ಬಂದು ಸೊರಗಿದ ಕೊರಗರು'' ಎಂಬ ಸಂದೀಪ್ ವಾಗ್ಲೆಯವರ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ.10,001/ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಸಂದೀಪ್ ವಾಗ್ಲೆಯವರು ತನಗೆ ದೊರೆತ ಪ್ರಶಸ್ತಿಯ ಮೊತ್ತವನ್ನು ಮಂಜನಾಡಿ ಸಮೀಪದ ಮೊಂಟೆಪದವಿನ ಬಡ ಕೊರಗ ಕುಟುಂಬದ ರೂಪಾ ಎಂಬ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ನೀಡಿ ಮಾದರಿಯಾದರು.[ಕ್ಯಾಮರಾ ಕೇಳಿದರೆ ಮಂಗಳೂರಲ್ಲಿ ಗಣಪನೇ ಪ್ರತ್ಯಕ್ಷನಾದ!]

Kannada Prabha journalist Sandeep Wagle receives Pa. Go. award

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಬಂಟ್ವಾಳ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು.

ಬಸ್-ಹೋಂಡಾ ಆಕ್ಟಿವಾ ಡಿಕ್ಕಿ

ಬಸ್ ಮತ್ತು ಹೋಂಡಾ ಆ್ಯಕ್ಟಿವಾ ನಡುವೆ ಸಂಭವಿಸಿದ ಅಪಘಾತದಲ್ಲಿ ಹೋಂಡಾ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಣಂಬೂರು ಕಸ್ಟಮ್ಸ್ ಕಚೇರಿ ಮುಂಭಾಗದಲ್ಲಿ ಶನಿವಾರ ನಡೆದಿದೆ. ಮೃತ ಯುವಕನನ್ನು ಚೊಕ್ಕಬೆಟ್ಟುವಿನ ಸೋನಾಲ್ ಕಂಪೌಂಡ್ ನಿವಾಸಿ ಶರೀಫ್ ಎಂಬವರ ಪುತ್ರ ಅಬ್ದುಲ್ ಹಿಕ್ರಾಮ್(22) ಎಂದು ಗುರುತಿಸಲಾಗಿದೆ.

Kannada Prabha journalist Sandeep Wagle receives Pa. Go. award

ಅಬ್ದುಲ್ ಹಿಕ್ರಾಮ್ ಮಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಪಘಾತದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Prabha journalist Sandeep wagle receives Pa. Go. award here at Mangaluru press club on 15th April.
Please Wait while comments are loading...