ಉಳ್ಳಾಲದ ಖಂಡಿಗೆಯಲ್ಲಿ ಮೀನು ಹಿಡಿವ ವಿಶಿಷ್ಟ ಜಾತ್ರೆ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 15 : ಒಂದೊಂದು ಊರು, ಕ್ಷೇತ್ರ, ದೈವ ದೇವರುಗಳಿಗೂ ಕಾರಣಿಕದ ಕಥೆಗಳು ಮತ್ತು ಆಚರಣೆಗಳು ಇರುವಂತೆ ಖಂಡಿಗೆ ಕ್ಷೇತ್ರವೂ ವಿಶೇಷವಾದ ಆಚರಣೆ ಯನ್ನು ನಡೆಸಿಕೊಂಡು ಬರುತ್ತಿದೆ.

ಪ್ರತಿ ವರುಷದ ಮೇ ತಿಂಗಳ ಸಂಕ್ರಮಣದಂದು ನಡೆಯುವ ಮೀನು ಹಿಡಿಯುವ ಜಾತ್ರೆ ಕರಾವಳಿ ಭಾಗದ ಒಂದು ವಿಶೇಷ ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ.

ಮಂಗಳೂರಿನ ಉಳ್ಳಾಲದ ಚೆಳೈರುವಿನ ಶ್ರೀ ಧರ್ಮರಸು ದೈವಸ್ಥಾನದ ಜಾತ್ರೆಯಲ್ಲಿ ಪಾವಂಜೆ ಬಳಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಸಾಮೂಹಿಕ ಜಾತ್ರೆಯು ಆ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಾ ಬಂದಿರುವುದು ವಿಶೇಷವಾಗಿದೆ.

ಮಕ್ಕಳು ಮಹಿಳೆಯರು ಮುದುಕರೆನ್ನದೆ ಎಲ್ಲರೂ ನೀರಿಗಿಳಿದು ತಾವೇ ತಂದಿರುವ ಬಲೆಗಳಿಂದ ಮೀನಿನ ಬೇಟೆ ಆರಂಭಿಸುತ್ತಾರೆ. ನಂತರ ಏನೆಲ್ಲ ಮಾಡ್ತಾರೆ ಎಂಬುವುದನ್ನು ಮುಂದೆ ಓದಿ.

ಹಿಡಿದ ಮೀನುಗಳನ್ನು ಪ್ರಸಾದವನ್ನಾಗಿ ಸ್ವೀಕರ

ಹಿಡಿದ ಮೀನುಗಳನ್ನು ಪ್ರಸಾದವನ್ನಾಗಿ ಸ್ವೀಕರ

ತಾವು ಹಿಡಿದ ಮೀನನ್ನು ದೈವದ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಆ ಮೀನುಗಳನ್ನು ತಿಂದರೆ ರೋಗರುಜಿನಗಳು ಬರೋದಿಲ್ಲ ಅನ್ನುವ ಇಲ್ಲಿನ ಜನರ ನಂಬಿಕೆ.

ಹಿಂದಿನ ಕಾಲದ ನಂಬಿಕೆ

ಹಿಂದಿನ ಕಾಲದ ನಂಬಿಕೆ

ಈ ಶ್ರದ್ಧಾ ಭಕ್ತಿಯ ಮೀನು ಹಿಡಿಯುವ ಜಾತ್ರೆಯೊಂದಿಗೆ ತುಳುನಾಡಿನ ಜಾತ್ರೆಗಳಿಗೆ ತೆರೆ ಬೀಳುತ್ತದೆ. ಹೀಗಾಗಿ ಹಿಂದಿನ ಕಾಲದ ನಂಬಿಕೆ ಇಂದಿನವರೆಗೆ ಉಳಿಸಿಕೊಂಡು ಬಂದಿದ್ದು ಭಕ್ತರು ಇಂದಿಗೂ ಈ ಕ್ಷೇತ್ರದಲ್ಲಿ ಮೀನೇ ಪ್ರಸಾದ ಎಂದು ಸ್ವೀಕರಿಸುತ್ತಿರೋದು ವಿಶೇಷವಾಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ್ರಾ?

ಇದನ್ನೇ ಬಂಡವಾಳ ಮಾಡಿಕೊಂಡ್ರಾ?

ಇಲ್ಲಿ ಬಲೆಗೆ ಬೀಳುವ ಮೀನುಗಳನ್ನು ಮಾರಾಟ ಮಾಡಿ ಸಾವಿರಾರು ರೂಪಾಯಿ ಸಂಪಾದಿಸುವ ಒಂದು ವರ್ಗವೂ ಇದೆ. ಭಾರೀ ಬೇಡಿಕೆ ಇರುವ ಇಲ್ಲಿನ ಮೀನುಗಳನ್ನು ಖರೀದಿಸುವ ಇನ್ನೊಂದು ವರ್ಗವೂ ಇದೆ. ಖಂಡೇವು ಮೀನು ವರ್ಷಕ್ಕೊಮ್ಮೆ ಸೇವಿಸಲೇಬೇಕು ಎಂದು ಭಾವಿಸುವವರು ಅದರ ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

 ಈ ಜಾತ್ರೆಯಲ್ಲಿ ಜಾತಿ ಮತ ಬೇಧವಿಲ್ಲ

ಈ ಜಾತ್ರೆಯಲ್ಲಿ ಜಾತಿ ಮತ ಬೇಧವಿಲ್ಲ

ಮೀನು ಹಿಡಿಯುವುದನ್ನು ವೃತ್ತಿ ಮಾಡಿದವರೂ ಕೂಡ ಈ ಮೀನು ಜಾತ್ರೆಯಲ್ಲಿ ಜಾತಿ ಮತ ಬೇಧವಿಲ್ಲದೆ ಭಾಗವಹಿಸಿದ್ದಾರೆ. ರಜಾದಿನಗಳಲ್ಲಿ ಮುಂಬೈ, ಬೆಂಗಳೂರು, ಗೋವಾ ಮುಂತಾದ ಕಡೆಗಳಿಂದ ತವರಿಗೆ ಬಂದವರು ಖಂಡಿಗೆಯಲ್ಲಿ ಮೀನು ಹಿಡಿಯುವ ಜೋಶ್ ನಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A special fishing ritual held as part of the 'Jatra Mahotsava' of Chelairu Kandige Sri Ullaya Temple was observed at Kandige Nandini river here on Sunday, May 14.
Please Wait while comments are loading...