ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ ತಿಂಗಳಾಂತ್ಯಕ್ಕೆ ಕರಾವಳಿಯಲ್ಲಿ ಕಂಬಳ ಪರ್ವ ಆರಂಭ: ಭರದಿಂದ ಸಾಗಿದ ಸಿದ್ಧತೆ

|
Google Oneindia Kannada News

ಮಂಗಳೂರು, ಅಕ್ಟೋಬರ್ 28: ಮುಂದಿನ ನವೆಂಬರ್ ತಿಂಗಳಾಂತ್ಯಕ್ಕೆ ಕರಾವಳಿಯಲ್ಲಿ ಕಂಬಳದ ಪರ್ವ ಆರಂಭವಾಗಲಿದೆ. ಕಂಬಳ ಕ್ರೀಡೆಗೆ ಕರಾವಳಿಯಲ್ಲಿ ಭರದಿಂದ ಸಿದ್ಧತೆಗಳು ಸಾಗಿದ್ದು, ಸ್ಪರ್ಧೆಗೆ ಇಳಿಯಲಿರುವ ಕೋಣಗಳ ತರಬೇತಿ ಆರಂಭವಾಗಿದೆ.

ತುಳುನಾಡಿನಲ್ಲಿ ಏಣಿಲು ಭತ್ತ ಕೃಷಿ ಬಹುತೇಕ ಮುಗಿದೆ. ಸುಗ್ಗಿ ಕೃಷಿಗೆ ತುಳುನಾಡು ಅಣಿಯಾಗುತ್ತಿದೆ. ಈ ಅವಧಿಯಲ್ಲಿ ತುಳುನಾಡ ಜಾನಪದ ಕ್ರೀಡೆಯಾದ ಕಂಬಳ ಮುಂದಿನ ನವೆಂಬರ್ ತಿಂಗಳಾಂತ್ಯಕ್ಕೆ ಆರಂಭವಾಗಲಿದೆ.

ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಈಗಾಗಲೇ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಕಂಬಳ ಸಮಿತಿ ಸಭೆ ನಡೆಸಿದೆ. ಕಂಬಳ ನಡೆಯುವ ಒಂದು ಹಂತದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಆದರೆ ತಾಂತ್ರಿಕ ಕಾರಣದಿಂದ ಇದರಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಅಂತಿಮ ಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ.

ಕಂಬಳ ಸಮಿತಿ ಶನಿವಾರ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿದೆ. ಈ ಭೇಟಿಯ ಸಂದರ್ಭದಲ್ಲಿ ಸಮಿತಿ ಜಿಲ್ಲಾಧಿಕಾರಿಯವರಿಗೆ ಕಂಬಳದ ಬಗ್ಗೆ ಸಮಗ್ರ ವಿವರಣೆ ನೀಡಲಿದೆ. ನಂತರ ಕಂಬಳದ ದಿನಾಂಕಕ್ಕೆ ಅಂತಿಮ ಅಂಕಿತ ಬೀಳಲಿದ್ದು, ಈ ಸಂದರ್ಭದಲ್ಲಿಯೇ ಪಿಲಿಕುಳದ ಕಂಬಳ ದಿನಾಂಕವು ನಿರ್ಧಾರವಾಗಲಿದೆ.

 ನವೆಂಬರ್ ತಿಂಗಳಾಂತ್ಯಕ್ಕೆ ಆರಂಭ

ನವೆಂಬರ್ ತಿಂಗಳಾಂತ್ಯಕ್ಕೆ ಆರಂಭ

ಡಿಸೆಂಬರ್. 1 ರಿಂದ ಪ್ರಖ್ಯಾತ ಮೂಡಬಿದ್ರೆಯ ಕಂಬಳಕ್ಕೆ ದಿನಾಂಕ ನಿಗದಿಯಾಗಿದ್ದು, ಯಥಾಸ್ಥಿತಿಯಂತೆ ಅದು ನಡೆಯಲಿದೆ. ಈ ನಿಟ್ಟಿನಲ್ಲಿ ಮೂಡುಬಿದರೆ ಕಂಬಳ ಸಮಿತಿ ಪೂರ್ವ ಸಿದ್ಧತೆಯನ್ನು ಆರಂಭಿಸಿದೆ. ನವೆಂಬರ್ ತಿಂಗಳಾಂತ್ಯಕ್ಕೆ ಆರಂಭವಾಗಲಿರುವ ಕಂಬಳ ಕ್ರೀಡೆ 2019ರ ಮಾರ್ಚ್ ನಲ್ಲಿ ಅಂತ್ಯಗೊಳ್ಳಲಿದೆ.

 ಕಾನೂನಾತ್ಮಕ ಸಮಸ್ಯೆ ಇಲ್ಲ

ಕಾನೂನಾತ್ಮಕ ಸಮಸ್ಯೆ ಇಲ್ಲ

ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ನೀಡುವ ಕರ್ನಾಟಕ ಪ್ರಾಣಿ ಹಿಂಸೆ ತಡೆ ಕಾಯ್ದೆ 2017ರ ಎರಡನೇ ತಿದ್ದುಪಡಿಯನ್ನು ರದ್ದು ಮಾಡುವಂತೆ ಕೋರಿ ಪೆಟಾ ಸಂಸ್ಥೆ ಸುಪ್ರೀಂ ಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದೆ. ಪೆಟಾ ದ ಈ ಅರ್ಜಿ ಸಲ್ಲಿಕೆಯಿಂದ ಯಾವುದೇ ಕಾನೂನಾತ್ಮಕ ಸಮಸ್ಯೆ ಆಗುವುದಿಲ್ಲ ಎಂದು ಕಂಬಳ ಸಮಿತಿ ಅಭಿಪ್ರಾಯಪಟ್ಟಿದೆ.

ಮಂಗಳೂರಿನಲ್ಲಿ ಮತ್ತೆ ಮೊಳಗಿದ ಕಂಬಳದ ಕಹಳೆಮಂಗಳೂರಿನಲ್ಲಿ ಮತ್ತೆ ಮೊಳಗಿದ ಕಂಬಳದ ಕಹಳೆ

 ಕಂಬಳ ನಡೆಯುವ ತಾತ್ಕಾಲಿಕ ದಿನಾಂಕ

ಕಂಬಳ ನಡೆಯುವ ತಾತ್ಕಾಲಿಕ ದಿನಾಂಕ

ಡಿಸೆಂಬರ್ 1 ಮೂಡಬಿದ್ರೆ , ಡಿಸೆಂಬರ್ 8 ಬಾರಾಡಿ , ಡಿಸೆಂಬರ್ 15 ಸುರತ್ಕಲ್, ಡಿಸೆಂಬರ್ 22 ಮೂಲ್ಕಿ, ಡಿಸೆಂಬರ್ 29 ಕೂಳೂರು, ಜನವರಿ 5 ನಂದಿಕೂರು, ಜನವರಿ 12 ಮಿಜಾರು, ಜನವರಿ 19 ಪುತ್ತೂರು, ಜನವರಿ 26 ಐಕಳ, ಫೆಬ್ರವರಿ 2 ಕಟಪಾಡಿ , ಫೆಬ್ರವರಿ 9 ಜಪ್ಪು , ಫೆಬ್ರವರಿ 16 ತಿರುವೈಲು , ಫೆಬ್ರವರಿ 23 ಉಪ್ಪಿನಂಗಡಿ, ಮಾರ್ಚ್ 2 ವೇಣ್ಣೂರು, ಮಾರ್ಚ್ 9 ಬಂಗಾಡಿ, ಮಾರ್ಚ್ 16 ಕಕ್ಕೆಪದವು, ಮಾರ್ಚ್ 23 ತಲಪಾಡಿ ಯಲ್ಲಿ ಕಂಬಳ ನಡೆಯಲಿದೆ.

ಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

 ಮತ್ತಷ್ಟು ರೋಚಕತೆ

ಮತ್ತಷ್ಟು ರೋಚಕತೆ

ಕಂಬಳದ ವೇಳೆ ಓಡುವ ಕೋಣಗಳು 140 ರಿಂದ 160 ಮೀಟರ್ ದೂರವನ್ನು 12 ರಿಂದ 13 ಸೆಕೆಂಡುಗಳಲ್ಲಿ ಕ್ರಮಿಸಲಿವೆ. 2014ರಲ್ಲಿ ನಿಷೇಧಕ್ಕೊಳಗಾಗಿದ್ದ ಕಂಬಳಕ್ಕೆ ಮತ್ತೆ ರಾಜ್ಯ ಸರ್ಕಾರದ ಮಸೂದೆಯ ಬೆಂಬಲ ಸಿಕ್ಕಿದ್ದರಿಂದ 2017 ರಿಂದ ಕಂಬಳ ಮತ್ತಷ್ಟು ರೋಚಕತೆಯಿಂದ ನಡೆಯುತ್ತಿದೆ.

ಮಂಗಳೂರು: ವಿವಾದಾತ್ಮಕ ಕಂಬಳದಲ್ಲಿ ತಪ್ಪಿತು ಭಾರಿ ಅನಾಹುತಮಂಗಳೂರು: ವಿವಾದಾತ್ಮಕ ಕಂಬಳದಲ್ಲಿ ತಪ್ಪಿತು ಭಾರಿ ಅನಾಹುತ

English summary
Kambala the traditional Buffalo slush track race is set to begin in the coastal belt from November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X