ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳದಲ್ಲಿ ಈ ಬಾರಿಯ ಕಂಬಳ ಆಯೋಜನೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 15 : ಕರಾವಳಿಯಲ್ಲಿ ಈ ಋತುವಿನ ಕಂಬಳಕ್ಕೆ ಸಿದ್ಧತೆ ಆರಂಭಗೊಂಡಿದೆ . ಈ ಬಾರಿಯ ಕರಾವಳಿ ಉತ್ಸವದ ಭಾಗವಾಗಿ ಪಿಲಿಕುಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.

ಮಂಗಳೂರಿನಲ್ಲಿ 'ಕರಾವಳಿ ಉತ್ಸವ' ಈ ಬಾರಿ ಡಿಸೆಂಬರ್ ನಲ್ಲಿ ನಡೆಯಲಿದೆ. ಇದರ ಭಾಗವಾಗಿ ಪಿಲಿಕುಳದಲ್ಲಿ ನೇತ್ರಾವತಿ - ಫಲ್ಗುಣಿ ಜೋಡುಕೆರೆ ಕಂಬಳ ಆಯೋಜನೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು ಈ ನಿಟ್ಟಿನಲ್ಲಿ ಸಭೆ ಕೂಡ ನಡೆಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮೇಳೈಸಲಿದೆ ಅದ್ಧೂರಿಯ ಕಂಬಳಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮೇಳೈಸಲಿದೆ ಅದ್ಧೂರಿಯ ಕಂಬಳ

Kambala may organize at Pilikula Nisargadhama

ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ 2014ರಲ್ಲಿ ಕೊನೆಯ ಬಾರಿಗೆ ಕಂಬಳ ನಡೆದಿತ್ತು. 2015ರಲ್ಲಿ ಕಂಬಳ ಆಯೋಜನೆ ಗೊಂಡಿರಲಿಲ್ಲ. 2016 ರಲ್ಲಿ ಕಂಬಳದ ಮೇಲೆ ನಿಷೇಧ ಹೇರಿದ್ದ ಕಾರಣ ಕರಾವಳಿ ಭಾಗದಲ್ಲಿ ಎಲ್ಲೂ ಕಂಬಳ ಆಯೋಜ ಮಾಡಿರಲಿಲ್ಲ.

ಐಕಳದ ಕಾಂತಾಬಾರೆ ಬೂದಬಾರೆ ಕಂಬಳ ರದ್ದುಐಕಳದ ಕಾಂತಾಬಾರೆ ಬೂದಬಾರೆ ಕಂಬಳ ರದ್ದು

ಈ ಬಾರಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕಂಬಳ ನಡೆಸಲು ಅವಕಾಶವಿದೆ. ಪಿಲಿಕುಳ ನಿಸರ್ಗಧಾಮದಲ್ಲಿ ಈ ಬಾರಿ ಕಂಬಳ ನಡೆಸುವ ಕುರಿತು ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮೇಳೈಸಲಿದೆ ಅದ್ಧೂರಿಯ ಕಂಬಳಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮೇಳೈಸಲಿದೆ ಅದ್ಧೂರಿಯ ಕಂಬಳ

ಕಂಬಳ ಆಯೋಜನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

English summary
Dakshina Kannada all set to organize Kambala (Annual Buffalo Race). District administration may organize Kambala at Pilikula Nisarga Dhama, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X