ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ, ಸೆಹ್ವಾಗ್ ಸಂಭ್ರಮ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಈಗ ಕಾನೂನಿನ ಮಾನ್ಯತೆ ಸಿಕ್ಕಿದೆ, ಗ್ರಾಮೀಣ ಕ್ರೀಡೆ ಬೆಂಬಲಿಸಿ ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ಅವರ ಟ್ವೀಟ್ ನಿಂದ ಕಂಬಳ ಪ್ರಿಯರು ಥ್ರಿಲ್ ಆಗಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಕಂಬಳದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಸ್ವಯಂ ಸೇವಾ ಸಂಘಟನೆ ಪೆಟಾ ಇಂಡಿಯಾ, ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂದು ವಾದಿಸಿತ್ತು.

ಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

ಕರ್ನಾಟಕ ವಿಧಾನಸಭೆಯಲ್ಲಿ ಕಳೆದ ನವೆಂಬರ್‌ 17ರಂದು ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆ- 2017ಯನ್ನು ಅಂಗೀಕರಿಸಲಾಗಿತ್ತು. ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಫೆಬ್ರವರಿ 10ರಂದು ಅಂಕಿತ ಹಾಕಿದ್ದಾರೆ ಎಂದು ಕೇಂದ್ರದ ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ತಮಿಳುನಾಡಿನ ಜಲ್ಲಿ ಕಟ್ಟು, ಕರ್ನಾಟಕದ ಕಂಬಳ, ಆಂಧ್ರಪ್ರದೇಶ ಎತ್ತಿನ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ. ಸೆಹ್ವಾಗ್ ಟ್ವೀಟ್ ಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಸೆಹ್ವಾಗ್ ಹಾಗೂ ಮೊಹಮ್ಮದ್ ಕೈಫ್ ರಿಂದ ಬೆಂಬಲ

ಸೆಹ್ವಾಗ್ ಹಾಗೂ ಮೊಹಮ್ಮದ್ ಕೈಫ್ ರಿಂದ ಬೆಂಬಲ

ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಈಗ ಕಾನೂನಿನ ಮಾನ್ಯತೆ ಸಿಕ್ಕಿದೆ, ಗ್ರಾಮೀಣ ಕ್ರೀಡೆ ಬೆಂಬಲಿಸಿ ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ಹಾಗೂ ಮೊಹಮ್ಮದ್ ಕೈಫ್ ಅವರು ಟ್ವೀಟ್ ಮಾಡಿರುವುದನ್ನು ಕಂಡು ಕಂಬಳ ಪ್ರಿಯರು ಥ್ರಿಲ್ ಆಗಿದ್ದಾರೆ.

ಕಂಬಳದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಥ್ಯಾಂಕ್ಸ್

ಭಾರತೀಯರನ್ನು ದಡ್ಡರನ್ನಾಗಿಸಲು ಕೆಲವು ಸಂಸ್ಥೆಗಳು ಯತ್ನಿಸುತ್ತವೆ. ನೀವು ಕಂಬಳದ ಬಗ್ಗೆ ಟ್ವೀಟ್ ಮಾದಿದ್ದಕ್ಕೆ ಧನ್ಯವಾದಗಳು, ಗ್ರಾಮೀಣ ಕ್ರೀಡೆಗಳ ಬಗ್ಗೆ ನೀವು ತೋರಿರುವ ಕಾಳಜಿಗೆ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ್ದಾರೆ.

ಇದು ನಮ್ಮ ಕ್ರೀಡೆ, ನಮ್ಮ ಸಂಸ್ಕೃತಿ

ಇದು ನಮ್ಮ ಕ್ರೀಡೆ, ನಮ್ಮ ಸಂಸ್ಕೃತಿ, ಕಂಬಳಕ್ಕೆ ಬೆಂಬಲ ನೀಡಿದ್ದಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದಿದ್ದಾರೆ.

ಮೊಹಮ್ಮದ್ ಕೈಫ್ ರಿಂದ ಟ್ವೀಟ್

ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರು ಟ್ವೀಟ್ ಮಾಡಿ, ಕರ್ನಾಟಕದ ಜನತೆಗೆ ಅಭಿನಂದನೆಗಳು, ಸಾಂಪ್ರದಾಯಿಕ ಕ್ರೀಡೆಗೆ ಕಾನೂನಿನ ಮಾನ್ಯತೆ ಸಿಕ್ಕಿದೆ, ಸಂಭ್ರಮಿಸಲು ಇದು ಸಕಾಲ ಎಂದಿದ್ದಾರೆ.

ಜಾಗತಿಕಮಟ್ಟದ ವ್ಯಕ್ತಿಯಿಂದ ಗೌರವ

ಸೆಹ್ವಾಗ್ ರಂಥ ಜಾಗತಿಕ ಮಟ್ಟದ ಸೆಲೆಬ್ರಿಟಿಯಿಂದ ನಮ್ಮ ಕಂಬಳಕ್ಕೆ ಬೆಂಬಲ ಸಿಕ್ಕಿರುವುದು ಸಂತಸದ ವಿಷಯ ಎಂದು ತುಳುನಾಡಿನ ಜನರು ಟ್ವೀಟ್ ಮಾಡಿದ್ದಾರೆ.

ಕಂಬಳ ನೋಡಲು ಸಂಸಾರ ಸಮೇತ ಬನ್ನಿ

ಕಂಬಳ ನೋಡಲು ಕರ್ನಾಟಕದ ಕರಾವಳಿಗೆ ಸಂಸಾರ ಸಮೇತ ಬನ್ನಿ ಎಂದು ಆಹ್ವಾನಿಸಲಾಗಿದೆ.

English summary
All Clear Signal for Kambala is great news.Rural sport needs to be preserved.Great that #Kambala bill got President's approval, making Kambala a legal rural sport in Karnataka.Greater that it escaped hypocritical organization's attempt to block avenues which rejuvenate the youth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X