ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ತಾಣಗಳಲ್ಲಿ ಕಂಬಳದ್ದೇ ಹವಾ ಗುರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ. 25 : ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಜನಪ್ರಿಯವಾಗಿರುವ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ದಿನದಿಂದ ದಿನಕ್ಕೆ ಕರಾವಳಿಯಲ್ಲಿ ಹೋರಾಟ ಕಾವೇರತೊಡಗಿದೆ.

ಇನ್ನು ಇದರ ಬಗ್ಗೆ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲೂ ಕಂಬಳದ್ದೇ ಹವಾ. ಯುವಕರು, ಸಂಘ-ಸಂಸ್ಥೆಗಳು 'ಕಂಬಳ ನಮ್ಮ ಹಕ್ಕು', 'ಪ್ರೋ ಕಂಬಳ', 'ಕಂಬಳ ಬೇಕು' ಹೀಗೆ ಹಲವು ಗ್ರೂಪ್ ಗಳನ್ನು ಫೇಸ್ಬುಕ್ ಮತ್ತು ವಾಟ್ಸಪ್ ಗಳಲ್ಲಿ ಮಾಡಿಕೊಂಡು ಕಂಬಳಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.[ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

'ಕಂಬಳ' ಲಾಂಛನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ವೈರಲ್ ಆಗಿದೆ. ಕಂಬಳ ಖಾಲಿ ಮನೋರಂಜನೆಗೆ ಮಾತ್ರ ಸೀಮಿತವಲ್ಲ ಇದು ಕರಾವಳಿಗರ ಸಂಪ್ರದಾಯದ ಕ್ರೀಡೆ ಎನ್ನುವ ಲೋಗೋ ಈಗಾಗಲೇ ಯುವಕರ ಫೆವ್ ರೇಟ್ ಆಗಿ ಬಿಟ್ಟಿದೆ.

ಕಂಬಳ ಕ್ರೀಡೆಯ ಉಳಿವಿಗಾಗಿ ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಂಬಳದ ಉಳಿವಿಗಾಗಿ ಈಗಾಗಲೇ ಬೆಂಗಳೂರಿನಲ್ಲಿ ಶಿವರಾಜ್ ಕುಮಾರ್, ಜಗ್ಗೇಶ್ ಮುಂತಾದ ನಟರು ಬೆಂಬಲ ನೀಡಿದ್ದಾರೆ.[ರಾಜ್ಯದಲ್ಲಿ ರಣಕಹಳೆ ಎಬ್ಬಿಸಿರುವ ಕಂಬಳ ಬಗ್ಗೆ ಯಾರು ಏನಂದ್ರು?]

ಕಂಬಳ ನಿಷೇಧ ಮಾಡುವುದು ಸರಿಯಲ್ಲ ಎಂಬುದು ಕಂಬಳ ಪ್ರಿಯರ ಮಾತು. ತಮಿಳುನಾಡಿನ ಜನತೆ ಜಲ್ಲಿಕಟ್ಟು ನಿಷೇಧದ ವಿರುದ್ಧ ಹೋರಾಡಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲೂ ಹೋರಾಟದ ಕಿಚ್ಚು ಹೆಚ್ಚಿದೆ. ಈಗಾಗಲೇ ಕಂಬಳಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕುರಿತು ಮುಂದಿನ ವಿಚಾರಣೆ ಜ. 30 ರಂದು ನಡೆಯಲಿದೆ.

ಜಾಲತಾಣಗಳಲ್ಲಿ 'ಕಂಬಳ' ಲಾಂಛನ

ಜಾಲತಾಣಗಳಲ್ಲಿ 'ಕಂಬಳ' ಲಾಂಛನ

ಕಂಬಳ ನಿಷೇಧ ಹಿಂತೆಗೆಯುವಂತೆ ಆಗ್ರಹಿಸಿ ದಿನದಿಂದ ದಿನಕ್ಕೆ ಕರಾವಳಿಯಲ್ಲಿ ಹೋರಾಟ ಕಾವೇರತೊಡಗಿದೆ. ಅದಕ್ಕೆ ಪೂರಕವೆಂಬಂತೆ 'ಕಂಬಳ' ಲಾಂಛನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ವೈರಲ್ ಆಗಿದೆ. ಕಂಬಳ ಖಾಲಿ ಮನೋರಂಜನೆಗೆ ಮಾತ್ರ ಸೀಮಿತವಲ್ಲ ಇದು ಕರಾವಳಿಗರ ಸಂಪ್ರದಾಯದ ಕ್ರೀಡೆ ಎನ್ನುವ ಲೋಗೋ ಈಗಾಗಲೇ ಯುವಕರ ಫೆವ್ ರೇಟ್ ಆಗಿ ಬಿಟ್ಟಿದೆ.

ಡಾ. ಡಿ. ವೀರೇಂದ್ರ ಹೆಗ್ಗಡೆ

ಡಾ. ಡಿ. ವೀರೇಂದ್ರ ಹೆಗ್ಗಡೆ

'ಕಂಬಳ ಈಗ ಹಿಂಸಾತ್ಮಕವಲ್ಲ , ಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದರೆ ಖಂಡಿತ ಜನ ಒಪ್ಪುತ್ತಾರೆ, ತಡೆಯುವ ನಿಷೇಧ ನಿವಾರಿಸಿ ನಡೆಯುವ ದಾರಿ ತೋರಿಸಿ' ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. 'ತುಳುನಾಡು ಕ್ರೀಡೆ ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ

ಕಂಬಳ ಕ್ರೀಡೆ ಮುಂದುವರಿಕೆಯ ನಿಟ್ಟಿನಲ್ಲಿ ಜನವರಿ 31ರಿಂದ ಆರಂಭವಾಗುವ ಸಂಸತ್ ಅಧಿವೇಶನ ಸಂದರ್ಭ ಕೇಂದ್ರ ಸಚಿವರ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

'ಮಾಡು ಇಲ್ಲವೇ ಮಡಿ' ಹೋರಾಟ

'ಮಾಡು ಇಲ್ಲವೇ ಮಡಿ' ಹೋರಾಟ

ಕಂಬಳ ಉಳಿಸಲು 'ಮಾಡು ಇಲ್ಲವೇ ಮಡಿ' ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು , ಜನವರಿ 30 ರಂದು ಕೋರ್ಟ್ ತೀರ್ಪು ವ್ಯತಿರಿಕ್ತವಾದರೆ ಸುಮಾರು 50000 ಮಂದಿಯನ್ನು ಸೇರಿಸಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ನಿಷೇಧ ಹಿಂಪಡೆಯುವ ವರೆಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಕರಾವಳಿಗರು ಮುಂದಾಗಿದ್ದಾರೆ.

English summary
#KambaBeku full trending in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X