ಮಂಗಳೂರಿಗೆ ಸ್ವಾಗತ ಕೋರುತ್ತಿದ್ದ ಕಲಶ ಸ್ಥಳಾಂತರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 22 : ಮಂಗಳೂರು ನಗರಕ್ಕೆ ಸ್ವಾಗತ ಕೋರುತ್ತಿದ್ದ ಪಂಪ್ ವೆಲ್ ವೃತ್ತದಲ್ಲಿದ್ದ ಕಲಶವನ್ನು ಸ್ಥಳಾಂತರ ಮಾಡಲಾಗಿದೆ. 26 ಅಡಿ ಎತ್ತರದ ಕಲಶ 20 ಟನ್ ಭಾರವಿದೆ.

ಕರ್ನಾಟಕ ಬ್ಯಾಂಕ್ ವೃತ್ತ-ಇಂಡಿಯಾ ಆಸ್ಪತ್ರೆ ನಡುವಿನ ಫ್ಲೈ ಓವರ್ ನಿರ್ಮಾಣಕ್ಕಾಗಿ ಕಲಶವನ್ನು ಸೋಮವಾರ ರಾತ್ರಿ ಸ್ಥಳಾಂತರ ಮಾಡಲಾಗಿದೆ. ಬೃಹತ್ ಜೆಸಿಬಿ ಮತ್ತು ಕ್ರೇನ್ ಮೂಲಕ ಕಲಶವನ್ನು ಪಂಪ್ ವೆಲ್ ವೃತ್ತ (ಮಹಾವೀರ ಸರ್ಕಲ್‌ )ದಿಂದ ಸ್ಥಳಾಂತರ ಮಾಡಲಾಗಿದೆ. [ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 3ನೇ ಸ್ಥಾನ]

pumpwell circle

ಜೈನ ಸಮುದಾಯದ ಮುನಿವರ್ಯರ ನೆನಪಿಗಾಗಿ 2006ರಲ್ಲಿ ಪಂಪ್ ವೆಲ್ ವೃತ್ತದಲ್ಲಿ 26 ಎತ್ತರದ ಕಲಶವನ್ನು ನಿರ್ಮಾಣ ಮಾಡಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆ ಅವರು ಕಲಶವನ್ನು ಲೋಕಾರ್ಪಣೆ ಮಾಡಿ, ಮಹಾವೀರ ಸರ್ಕಲ್ ಎಂದು ನಾಮಕರಣ ಮಾಡಿದ್ದರು. [ಹರಿನಾಥ್ ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್]

ಸುಮಾರು 22 ಟನ್‌ಗಳಷ್ಟು ಭಾರವಿರುವ ಕಲಶವನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಅದರ ಅಡಿಪಾಯವನನ್ನು ಬಿಟ್ಟು ಮೇಲಕ್ಕೆ ಎತ್ತಲಾಗಿದ್ದು, ಆದರೂ ಕಲಶ ಸುಮಾರು 20 ಟನ್ ಗಳಷ್ಟು ತೂಕ ಹೊಂದಿತ್ತು.

ಮಹಾವೀರ ಸರ್ಕಲ್ ಸಮೀಪದಲ್ಲೇ ಕಲಶವನ್ನು ಸ್ಥಾಪಿಸಲು ಸ್ಥಳ ನೀಡಬೇಕೆಂದು ಜೈನ ಸಮುದಾಯದವರು ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದಾರೆ. ಪಾಲಿಕೆ ಸರ್ಕಲ್ ಬಳಿ 22 ಸೆಂಟ್ ಜಾಗ ನೀಡಿದ್ದು, ಅಲ್ಲಿಯೇ ಕಲಶ ಸ್ಥಾಪನೆ ಮಾಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru city landmark 'Kalasha' at Mahaveer circle, Pumpwell which had adorned the entry point of the city for a decade, was on Monday March 21 removed and shifted to another spot close by. Kalasha was moved in order to make way for the construction of a flyover connecting the stretch between Karnataka Bank headquarters and Indiana hospital. The 26 ft Kalasha had been donated by the Jain community and inaugurated in 2006.
Please Wait while comments are loading...