ಮಂಗಳೂರಿನಲ್ಲಿ ಏ.15ರಿಂದ ಕಬ್ಬಡಿ ಲೀಗ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 14 : ಮರಳಿನ ಮೇಲೆ ಮ್ಯಾಟ್ ಹಾಸಿ ನಡೆಯುವ ಭಾರತದ ಮೊದಲ ಪ್ರೊ ಕಬ್ಬಡ್ಡಿ ಪಂದ್ಯಾವಳಿಗೆ ಕಡಲತಡಿ ಪಣಂಬೂರು ಸಿದ್ಧಗೊಳ್ಳುತ್ತಿದೆ. ರಾಷ್ಟ್ರದ ವಿವಿಧ ಭಾಗಗಳಿಂದ ಬರುವ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರನ್ನು ಸ್ವಾಗತಿಸಲು ಕಡಲ ನಗರಿ ಸಜ್ಜಾಗಿ ನಿಂತಿದೆ.

ಅಮೆಚೂರ್ ಕಬ್ಬಡ್ಡಿ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಕಬ್ಬಡ್ಡಿ ಅಸೋಸಿಯೇಷನ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಫೆಡರೇಷನ್ ಕಬ್ಬಡ್ಡಿ ಅಸೋಸಿಯೇಷನ್ ಮತ್ತು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ ಮಟ್ಟದ ಪುರುಷರ ಆಹ್ವಾನಿತ ತಂಡದ ಪ್ರೊ ಕಬ್ಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ.

kabadi

ಎ.15 ರಿಂದ 17ರ ವರೆಗೆ ಪ್ರತಿದಿನ ಪ್ರೊ ಕಬ್ಬಡ್ಡಿ ನಡೆಯಲಿದ್ದು ಸಂಜೆ 4.30 ರಿಂದ 11 ಗಂಟೆ ತನಕ ಕಡಲ ಕಿನಾರೆಯಲ್ಲಿ ಪಂದ್ಯಗಳನ್ನು ಸವಿಯಬಹುದಾಗಿದೆ. ದೇಶಾದ್ಯಂತ ಪ್ರೊ ಕಬ್ಬಡ್ಡಿ ಮೂಲಕ ಮನೆಮಾತಾದ ಸ್ಟಾರ್ ಆಟಗಾರರು ಪಣಂಬೂರಿನಲ್ಲಿ ನಡೆಯುವ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.

ಪಂದ್ಯಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ 10000 ಜನರು ಕುಳಿತು ಕೊಳ್ಳುವ ಸಾಮರ್ಥ್ಯದ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಇರುತ್ತದೆ. ಪಂದ್ಯಗಳನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಪ್ರವೇಶ ಉಚಿತ.

ತಂಡಗಳು : ವಿಜಯ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಎಚ್ಎಎಲ್, ಎಂ.ಇ.ಜಿ., ಚೆನ್ನೈನ ಐಟೆಕ್, ಕರ್ನಾಟಕ ಪೊಲೀಸ್, ಸಿಕಂದರಬಾದ್ ರೈಲ್ವೆ, ಮುಂಬೈ, ತಮಿಳುನಾಡು ಪೊಲೀಸ್, ಕೇರಳ, ಹರಿಯಾಣ, ಬಿಎಂಟಿಸಿ ಬೆಂಗಳೂರು, ಎಂಇಜಿ ಬೆಂಗಳೂರು, ದೇನಾ ಬ್ಯಾಂಕ್, ಮಹಾರಾಷ್ಟ್ರ ಪೊಲೀಸ್, ಹೈಟೆಕ್ ಚೆನ್ನೈ ಹಾಗೂ ಕರಾವಳಿ ಜಿಲ್ಲೆಯ ಸ್ಪೋರ್‌ಟಿಂಗ್ ಉಳ್ಳಾಲ, ಆಳ್ವಾಸ್ ಮೂಡಬಿದಿರೆ, ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಹಾಗೂ ಉಡುಪಿ ತಂಡ ಪ್ರೊ ಕಬ್ಬಡಿಯಲ್ಲಿ ಭಾಗವಹಿಸಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru to play kabaddi matches at Panambur beach. 60 national kabaddi players set to take part in the pro kabaddi matches to be held on the beach between April 15 and April 17.
Please Wait while comments are loading...