ಮಂಗಳೂರು : ಪತ್ರಕರ್ತ ಹೈಮದ್ ಹುಸೇನ್ ಇನ್ನಿಲ್ಲ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 09 : ಪತ್ರಕರ್ತ ಹೈಮದ್ ಹುಸೇನ್ ಹೃದಯಾಘಾತದಿಂದಾಗಿ ಚಾರ್ಮಾಡಿಯಲ್ಲಿ ಮೃತಪಟ್ಟಿದ್ದಾರೆ. ಹೈಮದ್ ಮಂಗಳೂರಿನ ಪ್ರಜಾವಾಣಿ ಆವೃತ್ತಿಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೂಲತಃ ರಾಯಚೂರು ನಿವಾಸಿಯಾಗಿರುವ ಹೈಮದ್ ಹುಸೇನ್ (28) ಪತ್ರಕರ್ತರ ತಂಡದ ಜೊತೆ ಶುಕ್ರವಾರ ಪಶ್ಚಿಮ ಘಟ್ಟಕ್ಕೆ ಅಧ್ಯಯನಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.[ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ವಿ.ಪದ್ಮನಾಭ ಆತ್ಮಹತ್ಯೆ]

haimad hussain

ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈಮದ್ ಹುಸೇನ್ ಅವರನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಕೆಲವು ದಿನಗಳಲ್ಲಿ ಹಾವೇರಿಯಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು. ಹೈಮದ್ ಹುಸೇನ್ ಅವರ ನಿಧನಕ್ಕೆ ಪತ್ರಕರ್ತರು, ಗಣ್ಯರು ಕಂಬನಿ ಮಿಡಿದಿದ್ದಾರೆ. [ಮೈಸೂರು ಪತ್ರಕರ್ತ ಬಿಳಿಗಿರಿ ರಂಗನಾಥ್ ನಿಧನ]

ಪ್ರಜಾವಾಣಿಯ ಬೆಂಗಳೂರು ಕಚೇರಿಯಲ್ಲಿಯೂ ಒಂದು ವರ್ಷ ಕೆಲಸ ಮಾಡಿದ್ದ ಹೈಮದ್ ಹುಸೇನ್ ಅವರು, ಎರಡು ವರ್ಷದಿಂದ ಮಂಗಳೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹಳ್ಳಿಗೆ ಮರಳಿ ಮಾದರಿ ಕೃಷಿಕನಾಗಿ ಬೆಳೆಯಬೇಕೆಂಬ ಆಸೆ ಅವರದ್ದಾಗಿತ್ತು.

ರಾಯಚೂರಿಗೆ ಮೃತದೇಹ : ಶನಿವಾರ ಬೆಳಗ್ಗೆ 6 ಗಂಟೆಗೆ ಬಂದರು ಝೀನತ್ ಭಕ್ಷಿ ಮಸೀದಿಯಲ್ಲಿ ಅಂತಿಮ ವಿದಿವಿಧಾನಗಳು ನಡೆದವು. ನಂತರ ಕುಟುಂಬದವರು ಮೃತದೇಹವನ್ನು ರಾಯಚೂರಿಗೆ ತೆಗೆದುಕೊಂಡು ಹೋದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Journalist Haimad Hussain (28) passed away after a cardiac arrest during trekking at Charmadi Ghats on Friday, April 8, 2016. Haimad worked for Prajavani newspaper’s Mangaluru office as reporter.
Please Wait while comments are loading...