ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರಂತರ ವಿರುದ್ಧ ಮಾತನಾಡಿ ಮತ್ತೆ ವಿವಾದಕ್ಕೆ ಗ್ರಾಸವಾದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

|
Google Oneindia Kannada News

ಮಂಗಳೂರು, ಆಗಸ್ಟ್ 12: ಕಡಲ ತೀರದ ಭಾರ್ಗವ ಡಾ.ಶಿವರಾಮ್ ಕಾರಂತರ ವಿರುದ್ಧ ಮಾತನಾಡಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ನಾಡಿನ ಶ್ರೇಷ್ಠ ಕವಿ ಶಿವರಾಮ ಕಾರಂತರು ಸ್ವಲ್ಪ ಬೇಗ ನಿಧನರಾಗಿದ್ದರೆ ಒಳ್ಳೆಯದಿತ್ತು ಎಂದು ಹೇಳುವ ಮೂಲಕ ಅಮೀನ್ ಮಟ್ಟು ಮತ್ತೆ ವಿವಾದಕ್ಕೆ ಗ್ರಾಸವಾಗಿದ್ದಾರೆ.

ಮಂಗಳೂರಿನಲ್ಲಿ 'ಕೋಶ ಓದು ದೇಶ ನೋಡು ಬಳಗ'ದ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾರಂತರು ಕೊನೆಯ ದಿನಗಳಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹರಿದ ವಿಚಾರದಲ್ಲಿ ಆರ್‌ಎಸ್‌ಎಸ್ ಪರವಾಗಿ ಮಾತನಾಡಿದ್ದರು.

'ಜಗತ್ತಿಗೆ ಕಾಣುವ ಅಮಿನ್ ಮಟ್ಟು ಬೇರೆ, ಅವರ ಅಂತರಂಗವೇ ಬೇರೆ''ಜಗತ್ತಿಗೆ ಕಾಣುವ ಅಮಿನ್ ಮಟ್ಟು ಬೇರೆ, ಅವರ ಅಂತರಂಗವೇ ಬೇರೆ'

ಆ ಸಂದರ್ಭ ಕಾರಂತರು ಸ್ವಲ್ಪ ಬೇಗ ಸತ್ತರೆ ಒಳ್ಳೆಯದಿತ್ತು ಎಂದು ಅನಿಸಿತ್ತು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು. ಕಾರಂತರ 'ಚೋಮನ ದುಡಿ' ಕಾದಂಬರಿ ಬಗ್ಗೆ ಟೀಕೆಗಳು ಬಂದಿದ್ದವು. ಅದನ್ನು ಅವರು ಸಂಶೋಧನ ಗ್ರಂಥ ರೀತಿ ಬರೆದಿದ್ದಾರೆ.

Journalist Dinesh Amin Mattu has been in Controversy again

ಚೋಮನ ಅನುಭವ ಕಾರಂತರ ಸಾಹಿತ್ಯದಲ್ಲಿ ಬರಲು ಹೇಗೆ ಸಾಧ್ಯ ? ಚೋಮನ ಕಷ್ಟ ಕಾರಂತರಿಗೇನು ಗೊತ್ತು? ಮುಂತಾದ ಟೀಕೆಗಳು ಬಂದಿದ್ದವು ಎಂದು ಪ್ರಶ್ನಿಸಿದರು.

ದಿನೇಶ್ ಅಮಿನ್‌ಮಟ್ಟು ವಿರುದ್ಧ ಆರೋಪ ಮಾಡಿದ್ದ ಭಾಸ್ಕರ್ ಪ್ರಸಾದ್ ಬಂಧನದಿನೇಶ್ ಅಮಿನ್‌ಮಟ್ಟು ವಿರುದ್ಧ ಆರೋಪ ಮಾಡಿದ್ದ ಭಾಸ್ಕರ್ ಪ್ರಸಾದ್ ಬಂಧನ

ದಿನೇಶ್ ಅಮೀನ್ ಮಟ್ಟು ಅವರ ಈ ಹೇಳಿಕೆಗಳು ಚರ್ಚೆಗೆ ಗ್ರಾಸ ವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

English summary
Journalist Dinesh Amin Mattu has spoken to Poet Shivaram Karanth and has been in Controversy again. Anti and favor debates have begun on the social networking site about this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X