• search

ಮಂಗಳೂರಲ್ಲಿ 'ಮಾದಕ' ಪ್ರೇಮ: ಪ್ರಿಯನಿಗಾಗಿ ಜೈಲಿಗೆ ಗಾಂಜಾ ತಂದ ಯುವತಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮಂಗಳೂರು, ಅಕ್ಟೋಬರ್ 13: ಮಂಗಳೂರು ಜೈಲ್ ನ ವಿಚಾರಣಾಧೀನ ಕೈದಿಗೆ ಗಾಂಜಾ ಸರಬರಾಜು ಮಾಡಿ ಮಂಗಳೂರು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವತಿಯ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.

  ಇದೊಂದು ಲವ್‌ಜಿಹಾದ್ ಪ್ರಕರಣ ಎಂದು ಅರೋಪಿಸಲಾಗುತ್ತಿದೆ. ನಿನ್ನೆ ಮಂಗಳೂರು ಜೈಲಿಗೆ ವಿಚಾರಣಾಧೀನ ಕೈದಿಯನ್ನು ಭೇಟಿ ಯಾಗಲು ಬಂದಿದ್ದ ಯುವತಿಯನ್ನು ಸಿಸಿಬಿ ಪೊಲೀಸರು ಗಾಂಜಾ ಪ್ಯಾಕೆಟ್ ಸಮೇತ ಬಂಧಿಸಿದ್ದರು. ಜೈಲಿನಲ್ಲಿರುವ ತನ್ನ ಪ್ರಿಯಕರನಿಗೆ ಗಾಂಜಾ ನೀಡಲು ಬಂದಿದ್ದಾಗ ಯುವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

  ಜೈಲಿನಲ್ಲಿ ಗಾಂಜಾ ದೊಡನೆ ಯುವತಿ ಸಿಕ್ಕಿಬಿದ್ದ ಪ್ರಕರಣ ರಾಜ್ಯದಾದ್ಯಂತ ಭಾರಿ ಸುದ್ದಿ ಆಗಿತ್ತು. ಆದರೆ ಇದೀಗ ಅದರ ಒಳಕತೆ ಬಹಿರಂಗವಾಗಿದ್ದು, ಈ ಪ್ರಕರಣ ಮುಂದೆ ಲವ್‌ ಜಿಹಾದ್ ರೂಪವನ್ನೂ ಪಡೆದುಕೊಳ್ಳುವ ಆತಂಕವಿದೆ.

  ಮಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ: ಮೂವರ ಬಂಧನ

  ಜೈಲಿಗೆ ಗಾಂಜಾ ಹಿಡಿದುಕೊಂಡು ಬಂದ ಯುವತಿ ಮೂಲತಃ ಸುಳ್ಯದವಳು. ಮಂಗಳೂರಿನ ವಿಶ್ವವಿದ್ಯಾಲಯದ ಪತ್ರಿಕೊದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಜೈಲಿನಲ್ಲಿರುವ ಕೊಲೆ ಆರೋಪಿ ಮುಸ್ತಾಫ ಎಂಬಾತನೊಂದಿಗೆ ಸ್ನೇಹ ಬೆಳೆದಿತ್ತು.

  ಸುದ್ದಿವಾಹಿನಿಯಲ್ಲಿ ಇಂಟರ್ನ್‌ ಆಗಿದ್ದ ಯುವತಿ

  ಸುದ್ದಿವಾಹಿನಿಯಲ್ಲಿ ಇಂಟರ್ನ್‌ ಆಗಿದ್ದ ಯುವತಿ

  ಯುವತಿಯು ಮಂಗಳೂರಿನ ಸ್ಥಳೀಯ ಸುದ್ದಿವಾಹಿನಿ ಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದ ಸಂದರ್ಭ ಯುವತಿ ವಾಮಂಜೂರಿನ ಸಂಬಂಧಿಯೊಬ್ಬರ ಮನೆಯಲ್ಲಿ ವಾಸವಾಗಿದ್ದಳು. ಈ ಸಂದರ್ಭದಲ್ಲಿಯೇ ಮಂಗಳೂರು ಹೊರವಲಯದ ವಾಮಾಂಜೂರು ನಿವಾಸಿಯಾಗಿರುವ ಮುಸ್ತಫಾ ನೊಂದಿಗೆ ಈಕೆಗೆ ಸ್ನೇಹ ಬೇಳೆದಿತ್ತು. ನಂತರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಹಲವಾರು ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಮುಸ್ತಫಾ ಗಾಂಜಾ ವ್ಯಸನಿ ಆಗಿದ್ದ. ಮುಸ್ತಾಫ ಜೈಲಿನಲ್ಲಿ ಇದ್ದುಕೊಂಡು ಯುವತಿಯ ಕೈಯಲ್ಲಿ ಗಾಂಜಾ ತರಿಸಿ ಕೊಳ್ಳುತ್ತಿದ್ದ.

  ಮಂಗಳೂರಿನಲ್ಲಿ ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ

  ಪೊಲೀಸರ ಮಾರುವೇಷದ ಕಾರ್ಯಾಚರಣೆ

  ಪೊಲೀಸರ ಮಾರುವೇಷದ ಕಾರ್ಯಾಚರಣೆ

  ಈ ಬಗ್ಗೆ ಖಚಿತ ಮಾಹಿತಿ ದೊರೆತಿದ್ದ ಸಿಸಿಬಿ ಪೊಪಲೀಸರು ಮಾರು ವೇಷದಲ್ಲಿ ಮಂಗಳೂರು ಕಾರಾಗೃದ ಎದುರು ಹೊಂಚುಹಾಕಿ ಕುಳಿತಿದ್ದರು. ಮುಸ್ತಫಾನ ಸ್ನೇಹಿತ ನೋರ್ವನಿಂದ ಗಾಂಜಾ ಪ್ಯಾಕೆಟ್ ಗಳನ್ನು ಪಡೆದ ಯುವತಿ ಜೈಲಿಗೆ ಬಂದೊಡನೆ ಪೊಲೀಸರ ಕೈಗೆ ಸಿಕ್ಕಿಬಿದ್ದಾಳೆ.

  ಕೊಲೆ ಯತ್ನ, ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಸೆರೆ

  ಎರಡು ಕೊಲೆ ಪ್ರಕರಣದಲ್ಲಿ ಭಾಗಿ ಆಗಿರುವ ಮುಸ್ತಫಾ

  ಎರಡು ಕೊಲೆ ಪ್ರಕರಣದಲ್ಲಿ ಭಾಗಿ ಆಗಿರುವ ಮುಸ್ತಫಾ

  2005 ರಲ್ಲಿ ಮೂಡಶೇಡ್ಡೆ ಯಲ್ಲಿ ನಡೆದ ಶರಣ್ ಎಂಬಾತನ ಕೊಲೆ ಸೇರಿದಂತೆ 2 ಹತ್ಯೆ ಪ್ರಕರಣದ ಆರೋಪಿ ಆಗಿರುವ ಮುಸ್ತಫಾ ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಹಲವು ಸಮಯಗಳ ಬಳಿಕ ನಿರೀಕ್ಷಣಾ ಜಾಮೀನು ಮೂಲಕ ಮುಸ್ತಫಾ ಹೊರಬಂದಿದ್ದ. ಹಲವು ಅಪರಾದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮುಸ್ತಫಾ ಮೂರು ತಿಂಗಳ ಹಿಂದೆ ವಾಮಂಜೂರಿನಲ್ಲಿ ಹಫ್ತಾ ವಸೂಲಿಗಾಗಿ ಖಾಲಿದ್ ಎಂಬಾತನ ಕೊಲೆಯತ್ನ ನಡೆಸಿ ಮತ್ತೆ ಮಂಗಳೂರು ಜಿಲ್ಲಾ ಕಾರಾಗೃಹ ಸೇರಿದ್ದ. ಈ ನಡುವೆ ಮುಸ್ತಾಫಗೆ ಜೈಲಿಗೆ ಗಾಂಜಾ ಸರಬರಾಜು ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಹಿಂದೆ ಮೂರು ಬಾರಿ ಯುವತಿ ಜೈಲಿಗೆ ಭೇಟಿ ನೀಡಿ ಮುಸ್ತಫಾ ಗೆ ಗಾಂಜಾ ಸರಬರಾಜು ಮಾಡಿರುವುದು ಈಗ ಬೆಳಕಿಗೆ ಬಂದಿದೆ.

  ಲವ್ ಜಿಹಾದ್ ತಿರುವು ಸಾಧ್ಯತೆ

  ಲವ್ ಜಿಹಾದ್ ತಿರುವು ಸಾಧ್ಯತೆ

  ಯುವತಿ ಜೈಲಿಗೆ ಗಾಂಜಾ ಸರಬರಾಜು ಮಾಡಲು ಏನು ಕಾರಣ? ಬ್ಯಾಕ್ ಮೇಲ್ ಏನಾದರೂ ನಡೆದಿದೆಯಾ? ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಈ ನಡುವೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ಕಾವು ಪಡೆದು ಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಗಾಂಜಾದೊಂದಿಗೆ ಸಿಕ್ಕಿಬಿದ್ದ ಯುವತಿಗೆ ಬುದ್ದಿ ಹೇಳಿ ಆಕೆಯನ್ನು ಬಿಟ್ಟು ಕಳಿಸಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  journalism student girl who supplied Ganja to the inmates of Mnagaluru district jail have been arrested by CCB police.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more