ಕಟೀಲು ದೇಗುಲ ಮೊಕ್ತೇಸರರ ಮನೆಯಲ್ಲಿ ಲಕ್ಷಾಂತರ ರುಪಾಯಿ ಕಳವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್ 5: ಮನೆಯವರನ್ನು ಕೂಡಿ ಹಾಕಿ, ಲಕ್ಷಾಂತರ ರುಪಾಯಿ ದರೋಡೆ ಮಾಡಿದ ಘಟನೆ ಇಲ್ಲಿ ನಡೆದಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ, 55 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಭ, ನಗದು ದೋಚಿ ಪರಾರಿಯಾಗಿದ್ದಾರೆ.

ಕಟೀಲು ದೇವಸ್ಥಾನದಲ್ಲಿ ಹುಲಿವೇಷಗಳ ವಿಶೇಷ ಪೂಜೆ ಹಾಗೂ ಕುಣಿತವಿತ್ತು. ರಾತ್ರಿ 12.10 ಕ್ಕೆ ವಾಸುದೇವ ಅಸ್ರಣ್ಣ ಅವರ ದೇವಸ್ಥಾನದ ಪಕ್ಕವೇ ಇರುವ ಮನೆಗೆ ದುಷ್ಕರ್ಮಿಗಳು ಬಂದಿದ್ದಾರೆ. ಅವರ ತಾಯಿ, ಪತ್ನಿ, ಸೊಸೆ, ಮಗಳು, ಮಕ್ಕಳು ಮನೆಯಲ್ಲಿ ಇದ್ದರು.[ಯಾದಗಿರಿಯಲ್ಲಿ ನಿಧಿಯಾಸೆಗೆ ಹೆಣ್ಣುಮಗುವನ್ನು ಕೊಂದರೆ?]

Jewels and cash worth of 55 lakh looted

ಆಗ ಒಳ ನುಗ್ಗಿದ ಮುಸುಕುಧಾರಿಗಳು ಯಾರೋ ಮೂರ್ಛೆ ಹೋಗಿದ್ದಾರೆ. ಪ್ರಸಾದ ನೀಡುವಂತೆ ಕೇಳಿದ್ದಾರೆ. ಇಷ್ಟು ಹೊತ್ತಿಗೆ ಎಂತಹ ಪ್ರಸಾದ ಎನ್ನುತ್ತಿರುವಾಗಲೇ ಮನೆಯವರನ್ನು ಕೋಣೆಯೊಳಗೆ ಕೂಡಿಹಾಕಿ, ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ಒಟ್ಟು 82 ಪವನ್ ಚಿನ್ನ ಮತ್ತು 50 ಸಾವಿರ ರು. ನಗದು ದೋಚಿ ಪರಾರಿಯಾಗಿದ್ದಾರೆ.[ಶನಿಪೂಜೆ ವೇಳೆ ಕರ್ತವ್ಯಕ್ಕೆ ಅಡ್ಡಿ: 20 ಆರೋಪಿಗಳ ಖುಲಾಸೆ]

ದರೋಡೆಕೋರರು ತುಳು ಹಾಗೂ ಹಿಂದಿ ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಸ್ರಣ್ಣ ಅವರ ಸಹೋದರ ವೆಂಕಟರಮಣರಿಗೆ ಕರೆಮಾಡಿದ ಮೊಮ್ಮಗಳಿಂದ ವಿಷಯ ತಿಳಿದಿದ್ದು, ಮನೆಗೆ ಬಂದಾಗ ಬಾಗಿಲು ತೆರೆದೇ ಇತ್ತು. ಕೋಣೆಯೊಳಗೆ ಮನೆಯವರನ್ನು ಕೂಡಿ ಹಾಕಲಾಗಿತ್ತು. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jewels and cash worth of 55 lakh looted from Kateel durga parameshwari temple officer Vasudeva Asranna. 8 people covered with masks entered the house and knot the family members who were in the house and looted jewels, money.
Please Wait while comments are loading...