ಜೆಟ್ಏರ್ ವೇಸ್ ಟಾಯ್ಲೆಟ್ ನಲ್ಲಿ ಚಿನ್ನದ ಗಂಟು..!

Posted By:
Subscribe to Oneindia Kannada

ಮಂಗಳೂರು, ಜನವರಿ 31: ಮಂಗಳೂರು- ದುಬೈ ಜೆಟ್ ಏರ್ ವೇಸ್ ವಿಮಾನದ ಶೌಚಾಲಯದಲ್ಲಿ 29 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಜೆಟ್ ಏರ್‌ವೇಸ್ 9W 531 ಇದ ವಿಮಾನದಲ್ಲಿ ಲಕ್ಷಾಂತರ ಮೌಲ್ಯದ ಆಭರಣಗಳಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್ ಐ) ಪತ್ತೆಹಚ್ಚಿದರು.[ಮಂಗಳೂರಿನಿಂದ ದೆಹಲಿಗೆ ನೇರ ಜೆಟ್ ವಿಮಾನ ಸಂಪರ್ಕ]

jewelery worth lakhs discovered Jet Airways toilet from Mangalore International Airport

ವಿಮಾನದ ಶೌಚಾಲಯದೊಳಗೆ ಸುಮಾರು ರು.29 ಲಕ್ಷ ಮೌಲ್ಯದ 1,233 ಗ್ರಾಂ ಚಿನ್ನಾಭರಣಗಳು ಪತ್ತೆಯಾದವು. ಇದನ್ನು ಕಪ್ಪು ಬಣ್ಣದ ಎರಡು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿಸಿ ಶೌಚಾಲಯದಲ್ಲಿ ಅಡಗಿಸಿಡಲಾಗಿತ್ತು.ಇದರಲ್ಲಿ ನೆಕ್ಲೆಸ್, ಬ್ರಾಸ್ ಲೆಟ್, ಸರ, ಕಿವಿಯೋಲೆ ಮಾದರಿಗಳ ರೂಪದ ಚಿನ್ನಾಭರಣಗಳು ಇರುವುದು ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ಇದನ್ನು ವಶಕ್ಕೆ ಪಡೆದರು.

jewelery worth lakhs discovered Jet Airways toilet from Mangalore International Airport

500, 1000 ನೋಟುಗಳ ನಿಷೇಧದ ಬಳಿಕ ಅಕ್ರಮ ಚಿನ್ನ ಸಾಗಾಟ ಪ್ರಕರಣ ಇದೇ ಮೊದಲ ಬಾರಿ ಬೆಳಕಿಗೆ ಬಂದಿದೆ ಎಂದು ಮಂಗಳೂರು ಕಸ್ಟಮ್ಸ್ ಇಲಾಖೆಯ ಉಪನಿರ್ದೇಶಕರು ಹೇಳಿದ್ದಾರೆ. ಅಲ್ಲದೇ ಆಭರಣ ಕಸ್ಟಮ್ಸ್ ಆಕ್ಟ್ 1962 ನಿಬಂಧನೆಗಳನ್ನ ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
jewelery worth lakhs discovered Jet Airways toilet from Mangalore International Airport has come to light on Monday.
Please Wait while comments are loading...