ಮಂಗಳೂರು-ಶಾರ್ಜಾ ನಡುವೆ ಜೆಟ್‌ ಏರ್‌ವೇಸ್‌ ವಿಮಾನ ಸೇವೆ

Posted By:
Subscribe to Oneindia Kannada

ಮಂಗಳೂರು, ಜೂನ್ 14 : ಜೆಟ್ ಏರ್‌ವೇಸ್ ಮಂಗಳೂರು ಮತ್ತು ಶಾರ್ಜಾ ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಲಿದೆ. 2016ರ ಆಗಸ್ಟ್ 7ರಿಂದ ಈ ಸೇವೆ ಆರಂಭವಾಗಲಿದೆ.

ಜೆಟ್‌ ಏರ್‌ವೇಸ್ ಈಗಾಗಲೇ ಮಂಗಳೂರಿನಿಂದ ದುಬೈ ಮತ್ತು ಅಬುದಾಬಿಗೆ ವಿಮಾನ ಸೇವೆ ನೀಡುತ್ತಿದೆ. ಮಂಗಳೂರು ಮತ್ತು ಶಾರ್ಜಾ ನಡುವೆ ಸಂಪರ್ಕ ಕಲ್ಪಿಸುವ ವಿಮಾನ ಜೆಟ್‌ ಏರ್‌ವೇಸ್‌ನ 3ನೇ ಅಂತರಾಷ್ಟ್ರೀಯ ಸೇವೆಯಾಗಲಿದೆ. [ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ]

Jet Airways

ನಂ 9ಡಬ್ಲ್ಯೂ503 ವಿಮಾನ ಬೆಳಗ್ಗೆ 9.30ಕ್ಕೆ ಮಂಗಳೂರಿನಿಂದ ಶಾರ್ಜಾಕ್ಕೆ ಹಾರಲಿದೆ. ನಂ 9ಡಬ್ಲ್ಯೂ504 ವಿಮಾನ ಶಾರ್ಜಾದಿಂದ ಸಂಜೆ 5.55ಕ್ಕೆ ಮಂಗಳೂರಿಗೆ ಬಂದಿಯಲಿದೆ. ಆಗಸ್ಟ್ 7ರಿಂದ ಈ ಸೇವೆ ಆರಂಭವಾಗಲಿದೆ. [24*7 ಕಾರ್ಯನಿರ್ವಹಿಸಲಿದೆ ಮಂಗಳೂರು ವಿಮಾನ ನಿಲ್ದಾಣ]

ಈ ಸೇವೆ ಆರಂಭವಾದರೆ ಮಂಗಳೂರು ವಿಮಾನ ನಿಲ್ದಾಣದಿಂದ 8 ಅಂತರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಿದಂತಾಗುತ್ತದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗಾಗಲೇ ಮಂಗಳೂರಿನಿಂದ ದುಬೈ ಮತ್ತು ಅಬುದಾಬಿಗೆ ವಿಮಾನ ಸೇವೆ ನೀಡುತ್ತಿದೆ. [ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಕಲ್ಪಿಸಿ]

ಇ-ವೀಸಾ ವ್ಯವಸ್ಥೆ ಮಾಡಿ : ಬೆಂಗಳೂರು, ಚೆನ್ನೈ, ಕೊಚ್ಚಿನ್, ದೆಹಲಿ, ಗೋವಾ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ತಿರುವಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇ-ವೀಸಾ ಪರಿಶೀಲನೆ ವ್ಯವಸ್ಥೆ ಇದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೂ ಇಲ್ಲಿ ಈ ಸೌಲಭ್ಯವಿಲ್ಲ. ಈ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jet Airways will operate a daily flight between Mangaluru and Sharjah from August 7. Flight No 9W503 will depart from Mangaluru to Sharjah at 9.30 a.m. and flight No 9W504 will arrive here at 5.55 p.m..
Please Wait while comments are loading...