ಮಂಗ್ಳೂರು-ಶಾರ್ಜಾ ವಿಮಾನ ಯಾನ ಮೂರು ತಿಂಗಳು ರದ್ದು

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 10 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ತೆರಳುವ ಜೆಟ್ ಏರ್‌ವೇಸ್ ನೇರ ವಿಮಾನ ಯಾನವನ್ನು ಮೂರು ತಿಂಗಳು ಕಾಲ ರದ್ದುಗೊಳಿಸಲಾಗಿದೆ.

ಜನವರಿ 8ರಿಂದ ಸ್ಥಗಿತಗೊಳಿಸಲಾಗಿದ್ದು. ಮಾರ್ಚ್ ಅಂತ್ಯದವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಮಂಗಳೂರಿನ ಜೆಟ್ ಏರ್‌ವೇಸ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Jet Airways suspends direct daily flight service from Mangaluru to Sharjah

ಜೆಟ್ ಏರ್‌ವೇಸ್ ನ ಈ ಹಠಾತ್ ನಿರ್ಧಾರಕ್ಕೆ ಮಂಗ್ಳೂರು-ಶಾರ್ಜಾ ವಿಮಾನ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು-ಶಾರ್ಜಾ ನಡುವೆ ಜೆಟ್ ಏರ್‌ವೇಸ್ ನೇರ ವಿಮಾನ ಯಾನ ಮತ್ತೆ ಪುನಾರಂಭ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ರಾಧಾಕೃಷ್ಣ ಅವರು,

ಮಂಗಳೂರು- ಶಾರ್ಜಾ ನಡುವೆ ವಿಮಾನ ಯಾನಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru to Sharjah by Jet Airways has suspended its direct operations from Mangalore International Airport (MIA) to Sharjah from Sunday, January 8.
Please Wait while comments are loading...