ಆಗಸ್ಟ್ 7ರಿಂದ ಮಂಗಳೂರು-ಶಾರ್ಜಾ ನಡುವೆ ಜೆಟ್‌ ಏರ್‌ವೇಸ್ ಹಾರಾಟ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 02 : ಮಂಗಳೂರು ಮತ್ತು ಶಾರ್ಜಾ ನಡುವೆ ಜೆಟ್‌ ಏರ್‌ವೇಸ್ ವಿಮಾನ ಆಗಸ್ಟ್ 7ರಿಂದ ಹಾರಾಟ ಆರಂಭಿಸಲಿದೆ. ಮಂಗಳೂರಿನಿಂದ ಈಗಾಗಲೇ ಮೂರು ವಿಮಾನಗಳ ಹಾರಾಟ ನಡೆಸುತ್ತಿರುವ ಜೆಸ್‌ ಏರ್‌ವೇಸ್ ಮತ್ತೊಂದು ಸೇವೆಯನ್ನು ಆರಂಭಿಸುತ್ತಿದೆ.

ವಿಮಾನ ನಿಲ್ದಾಣ ಪ್ರಾಧಿಕಾರ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 9.05ಕ್ಕೆ ಶಾರ್ಜಾಕ್ಕೆ ವಿಮಾನ ಹೊರಡಲಿದೆ. ಶಾರ್ಜಾದಿಂದ ಬರುವ ವಿಮಾನ ಸಂಜೆ 5.45ಕ್ಕೆ ಮಂಗಳೂರಿಗೆ ಆಗಮಿಸಲಿದೆ.[ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ]

Jet airways daily flight between Mangaluru-Sharjah from August 7

'ಕರಾವಳಿ ಭಾಗದ ಅನೇಕ ಜನರು ಶಾರ್ಜಾ ಸುತ್ತಮುತ್ತ ವಾಸಿಸುತ್ತಿದ್ದಾರೆ. ಅವರಿಗೆ ಈ ವಿಮಾನ ಸೇವೆ ಸಹಾಯಕವಾಗಲಿದೆ. ಇದರೊಂದಿಗೆ ಅಂತರಾಷ್ಟ್ರೀಯ ಕಾರ್ಗೋ ಸೇವೆಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ' ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ಹೇಳಿದ್ದಾರೆ.[24*7 ಕಾರ್ಯನಿರ್ವಹಿಸಲಿದೆ ಮಂಗಳೂರು ವಿಮಾನ ನಿಲ್ದಾಣ]

ಜೆಟ್‌ ಏರ್‌ವೇಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ದುಬೈ ಮತ್ತು ಅಬುದಾಬಿಗೆ ವಿಮಾನ ಸೇವೆ ನೀಡುತ್ತಿದೆ. ಏರ್ ಇಂಡಿಯಾದ ಎರಡು ವಿಮಾನಗಳು ಪ್ರತಿದಿನ ದುಬೈಗೆ ಹಾರಾಟ ನಡೆಸುತ್ತಿವೆ. ವಾರದಲ್ಲಿ ಮೂರು ದಿನಗಳ ಕಾಲ ದೋಹಾ, ಮಸ್ಕತ್, ಕುವೈತ್‌ಗೆ ಸಂಚಾರ ನಡೆಸುತ್ತಿವೆ.[ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಕಲ್ಪಿಸಿ]

ಜೆಟ್ ಏರ್ ವೇಸ್ ವೆಬ್ ಸೈಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jet Airways will operate a daily flight between Mangaluru international airport to Sharjah from August 7, 2016.
Please Wait while comments are loading...