ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲ್ಗುಣಿ ನದಿಯಲ್ಲಿ ಹೆಚ್ಚುತ್ತಿದೆ ಜೆಲ್ಲಿ ಫಿಶ್ ಗಳ ಸಂಖ್ಯೆ , ಮೀನುಗಾರರಲ್ಲಿ ಆತಂಕ

|
Google Oneindia Kannada News

ಮಂಗಳೂರು ಜನವರಿ 19: ಮಂಗಳೂರಿನ ಫಲ್ಗುಣಿ ನದಿಯಲ್ಲಿ ಜೆಲ್ಲಿ ಫಿಶ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಯ ಮತ್ಸ್ಯ ಸಂಕುಲ ಅಪಾಯಕ್ಕೆ ಸಿಲುಕುವ ಆತಂಕ ವ್ಯಕ್ತವಾಗಿದೆ.

ಸಮುದ್ರ ದ ಉಪ್ಪು ನೀರಿನಲ್ಲಿ ಕಂಡು ಬರುವ ಈ ಜೆಲ್ಲಿ ಫಿಶ್ ಗಳು ಈಗ ಸಿಹಿ ನೀರಿನಲ್ಲೂ ಕಂಡು ಬರುತ್ತಿದ್ದು ಫಲ್ಗುಣಿ ನಡಿಯ ಹಿನ್ನಿರಿನಲ್ಲಿ ಇದರ ಸಂಖ್ಯೆ ಗಣನೀಯ ವಾಗಿ ಏರಿಕೆ ಯಾಗುತ್ತಿದೆ. ಇದು ಸ್ಥಳೀಯ ಮೀನುಗಾರರಲ್ಲಿ ಆತಂಕ ಸೃಷ್ಠಿಸಿದೆ.

ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ 2 ವರ್ಷಗಳ ಹಿಂದೆ ಫಲ್ಗುಣಿ ನಡಿಗೆ ಕಿಂಡಿ ಅಣೆಕಟ್ಟು ಕಟ್ಟಲಾಗಿತ್ತು. ಆದರೆ ಕಳೆದ 2 ವರ್ಷಗಳಿಂದ ಮರವೂರು ಅಣೆಕಟ್ಟಿನ ಪ್ರದೇಶದಲ್ಲಿ ನೀರು ಕೆಡುತ್ತಿರುವ ಬಗ್ಗೆ ವರದಿಯಾಗುತ್ತಲೆ ಇದೆ. ಈ ನಡುವೆ ಫಲ್ಗುಣಿ ನದಿಯಲ್ಲಿ ಜೆಲ್ಲಿ ಫಿಶ್ ಗಳು ಅತಿ ಹೆಚ್ಚು ಕಂಡು ಬರುತ್ತಿರುವುದು ಅಚ್ಚರಿಗೆ ಕಾರಣ ವಾಗಿದೆ.

Jelly fish Population increased in Phalguni river in Mangaluru

ಹಿಂದೆಂದೂ ಇಷ್ಟುಪ್ರಮಾಣ ದಲ್ಲಿ ಜೆಲ್ಲಿ ಫಿಶ್ ಗಳು ಇಲ್ಲಿ ಕಂಡು ಬಂದಿರಲಿಲ್ಲ. ಆದರೆ ಈಗ ದಿಢೀರ್ ಆಗಿ ಈ ಜೆಲ್ಲಿ ಫಿಶ್ ಗಳ ಸಂಕ್ಯೆ ಹೆಚ್ಚಾಗಲು ಕಾರಣ ವೇನು ಎಂಬ ಪ್ರಶ್ನೆ ಉದ್ಬವಿಸಿದೆ. ಇದರ ಸಂಖ್ಯೆ ವೇಗವಾಗಿ ವರ್ಧಿಸುತ್ತ ಹೋದಂತೆ ನದಿಯ ಮತ್ಸ್ಯ ಸಂಕುಲಕ್ಕೆ ಅಪಾಯ ಉಂಟಾಗಲಿದೆ. ಈ ಜೆಲ್ಲಿ ಫಿಶ್ ಗಳ ಸಂಖ್ಯೆ ಹೆಚ್ಚಾದಂತೆ ನದಿಯ ಮೀನುಗಳ ಮರಿಗಳನ್ನೇ ತಿನ್ನುತ್ತವೆ, ಅಲ್ಲದೆ ಇತರ ಮೀನುಗಳು ತಿನ್ನುವ ಆಹಾರವನ್ನೂ ಕಬಳಿಸುತ್ತದೆ. ಇದರಿಂದಾಗಿ ಇತರ ಮೀನುಗಳ ಸಂಖ್ಯೆ ಗಣನೀಯ ಕಡಿಮೆಯಾಗುವ ಸಾಧ್ಯತೆ ಇದೆ.

Jelly fish Population increased in Phalguni river in Mangaluru

ನದಿ ನೀರಿನಲ್ಲಿ ಉಪ್ಪು ನೀರಿನ ಅಂಶ ಹೆಚ್ಚಿರುವುದು ಜೆಲ್ಲಿ ಫಿಶ್ ಹೆಚ್ಚಾಗಲು ಕಾರಣವಿರಬಹುದು. ಎರಡು ಬಗೆಯ ಜೆಲ್ಲಿ ಫಿಶ್ ಇಂಥ ನೀರಿನಲ್ಲಿರುತ್ತವೆ. ವಾತಾವರಣ ಹಾಗೂ ನೀರಿನ ತಾಪಮಾನದ ಏರಿಕೆಯಾದಾಗ ಜೆಲ್ಲಿಫಿಶ್ ಕಾಣಿಸಿಕೊಳ್ಳುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬಹಳ ವೇಗವಾಗಿ ಸಂಖ್ಯೆಯನ್ನೂ ವರ್ಧಿಸಿಕೊಳ್ಳುತ್ತದೆ. ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Jelly fish Population increased in Phalguni river in Mangaluru

ಸಾಮಾನ್ಯವಾಗಿ ಜೆಲ್ಲಿ ಫಿಶ್ ಸಮುದ್ರ ಜೀವಿಗಳು. ಉಪ್ಪು ನೀರನ್ನು ಇಷ್ಟಪಡುತ್ತ್ತವೆ. ಇತರ ಮೀನುಗಾರರು ಜೆಲ್ಲಿ ಮೀನುಗಳನ್ನು ಹಿಡಿಯಲು ಹೋಗುವುದಿಲ್ಲ, ಬಲೆಗೆ ಸಿಕ್ಕವುಗಳನ್ನು ಮತ್ತೆ ನೀರಿಗೆ ಬಿಡುತ್ತಾರೆ. ಇತರ ಮೀನುಗಳ ಸಂಖ್ಯೆ ಕಡಿಮೆಯಾದಷ್ಟೂ ಜೆಲ್ಲಿ ಮೀನುಗಳು ಸಂಖ್ಯೆ ವೃದ್ಧಿಸಿಕೊಳ್ಳುತ್ತವೆ. ಸಮುದ್ರ ಉಬ್ಬರದ ವೇಳೆ ಹಿನ್ನೀರಿಗೂ ಬರುತ್ತವೆ. ಸಮುದ್ರ ದ ಉಪ್ಪು ನೀರು ಹೆಚ್ಚಿನ ಪ್ರಮಾಣದಲ್ಲಿ ಫಲ್ಗುಣಿ ನದಿಗೆ ಸೇರುತ್ತಿರುವುದರಿಂದ ಜೆಲ್ಲಿ ಫಿಶ್ ಗಳ ಸಂಖ್ಯೆ ನದಿಯಲ್ಲಿ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

English summary
Jelly fish a saltwater species found in River Phalguni near Mangaluru. The population of jelly fish increased in the river day by day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X