ನಿಗೂಢವಾಗಿ ಸಾವನ್ನಪ್ಪಿದ ಕಾವ್ಯಾಳ ಮನೆಗೆ ಮಧು ಬಂಗಾರಪ್ಪ ಭೇಟಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 28 : ನಿಗೂಢವಾಗಿ ಸಾವನ್ನಪ್ಪಿದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾಳ ಮನೆಗೆ ಸೋಮವಾರ ಯುವ ಜನತಾದಳ ರಾಜ್ಯಾಧ್ಯಕ್ಷ ಹಾಗೂ ಶಾಸಕ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಕಾವ್ಯಾಳ ಪೋಷಕರಿಗೆ ಸಾಂತ್ವನ ಹೇಳಿದರು.

ಕಾವ್ಯಾ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಉಪವಾಸ ಸತ್ಯಗ್ರಹ

ಈ ಸಂದರ್ಭದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಮಂಗಳೂರಿನ ಮಕ್ಕಳೆಲ್ಲಾ ಪಕ್ಷ ಭೇದ ಮರೆತು ಎಲ್ಲರೂ ಒಟ್ಟು ಸೇರಿ ನ್ಯಾಯಕ್ಕಾಗಿ ಆಗ್ರಹಿಸುವುದು ಅಗತ್ಯ. ನಾನು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ" ಎಂದು ಹೇಳಿದರು.

JDS MLA Madhu Bangarappa visits kavya poojary's house in Mangaluru

ಈ ಸಂದರ್ಭ ದಲ್ಲಿ ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಹಾಗು ಕಂಕನಾಡಿ ಬಿಲ್ಲವ ಸಂಘದ ಪ್ರಮುಖರು ಉಪಸ್ತಿತರಿದ್ದರು.

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾಳ ಸಾವಿನ ನಿಗೂಢತೆ ಬಹಿರಂಗಕ್ಕೆ ಹಾಗೂ ಕಾವ್ಯಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಇನ್ನೊಂದೆಡೆ ರಾಜಕಾರಣಿಗಳು ಕಾವ್ಯಾಳ ಮನೆಗೆ ಭೇಟಿ ನೀಡಿ ಕಾವ್ಯಳ ಪೋಷಕರಿಗೆ ಸಾಂತ್ವನ ಹೇಳುವ ಪ್ರಕ್ರಿಯೆ ನಡೆಯುತ್ತಿದೆ. ಕಾವ್ಯಾ ಜುಲೈ 20 ರಂದು ಮೂಡಬಿದಿರೆಯ ಆಳ್ವಾಸ್ ಹಾಸ್ಟೆಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jds MLA Madhu Bangarappa visits Alvas student Kavya poojary's house in Mangaluru and consoles her parents here on August 28.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ