ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆ ನರ್ಮ್: ಮಂಗಳೂರು, ಉಡುಪಿಗೆ 65 ಅತ್ಯಾಧುನಿಕ ಬಸ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 19: ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಪುನರುತ್ಥಾನ (ಜೆ ಎನ್ ನರ್ಮ್) ಯೋಜನೆಯಡಿ ಮಂಗಳೂರು ಹಾಗೂ ಉಡುಪಿ ಕೆಎಸ್ಆರ್ ಟಿಸಿ ವಿಭಾಗಗಳಿಗೆ 65 ಅತ್ಯಾಧುನಿಕ ಬಸ್‌ಗಳನ್ನು ಮಂಜೂರು ಮಾಡಲಾಗಿದೆ.

ಮಂಗಳೂರು, ಉಡುಪಿಗೆ ಹೊರಟ 65 ಬಸ್‌ಗಳೂ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕಾರ್ಯಾಚರಣೆ ಮಾಡುವ 241 ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಗುರುವಾರ ಚಾಲನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಟಾಟಾ ಮೋಟಾರ್ಸ್‌ನ ಹಿರಿಯ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.[ಗೋವು ಸಾಗಾಟ ವಿವಾದ, ದಕ್ಷಿಣ ಕನ್ನಡದ ಹಿಂದಿನ ಘಟನೆಗಳು]

J N Nurm: 65 bus granted to Mangaluru, Udupi

ಬಸ್ ಗಳು ಹೇಗಿವೆ?: ಹೊಸ ಪೀಳಿಗೆಯ ಈ ಅತ್ಯಾಧುನಿಕ ಬಸ್‌ಗಳು ಸುಧಾರಿತ ಎಂಜಿನ್, ಉದ್ದವಾದ ಕಿಟಕಿ, ತುರ್ತು ನಿರ್ಗಮನ ವ್ಯವಸ್ಥೆ, ಅಗ್ನಿ ನಿರೋಧಕ ಉಪಕರಣ ಮತ್ತಿತರ ಸೌಲಭ್ಯ ಹೊಂದಿವೆ. ಇಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್ ಹೊಂದಿದ ಈ ಬಸ್ ನಲ್ಲಿ 70 ಮಿಲಿಮೀಟರ್ ಗ್ಯಾಂಗ್ ವೇ ಇದೆ. ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಲು ಸ್ಥಳಾವಕಾಶ ಇರುವುದರಿಂದ ಇದು ಪ್ರಯಾಣಿಕ ಸ್ನೇಹಿ ಆಗಲಿದೆ ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಸರ್ಕಾರ ನಿಗದಿಪಡಿಸಿರುವ ಅರ್ಬನ್ ಬಸ್ ಸ್ಪೆಸಿಫಿಕೆಷನ್-2ಗೆ ಅನುಗುಣವಾಗಿ ಏರ್ ಸಸ್ಪೆನ್ಷನ್ , ಮಲ್ಟಿಪ್ಲೆಕ್ಸ್ ವೈರಿಂಗ್ ನಂಥ ಸೌಲಭ್ಯವನ್ನು ಹೊಂದಿದೆ. ಅಧಿಕ ಸಾಮರ್ಥ್ಯದ ಆಕ್ಸಿಲರೇಟರ್ ವೇಗದ ಚಲನೆಗೆ ಅನುಕೂಲ ಮಾಡಿಕೊಡಲಿದೆ.[26 ಪಾಸ್‌ಪೋರ್ಟ್‌ ಹೊಂದಿದ್ದ ವ್ಯಕ್ತಿ ಮಂಗಳೂರಿನಲ್ಲಿ ಬಂಧನ]

ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ , ಪಬ್ಲಿಕ್ ಇನ್‌ಫರ್ಮೇಶನ್ ಸಿಸ್ಟಮ್, ಆಟೋಮೆಟಿಕ್ ವೆಹಿಕಲ್ ಲೊಕೇಷನ್ ಸಿಸ್ಟಮ್, ಸೆಕ್ಯುರಿಟಿ ನೆಟ್ ವರ್ಕ್ ಸಿಸ್ಟಮ್ ಈ ನೂತನ ಬಸ್‌ಗಳ ವೈಶಿಷ್ಟ್ಯಗಳಾಗಿವೆ.[21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಳ್ಳಾಲಕ್ಕೆ]

ಕಂಟ್ರೋಲ್ ರೂಂನಲ್ಲಿ ಕುಳಿತು ಬಸ್‌ಗಳ ಸಂಚಾರದ ಮೇಲೆ ಕಣ್ಗಾವಲು ಇಡಲು ಅನುಕೂಲವಾಗುವಂತೆ ಜಿಪಿಎಸ್ ಸಿಸ್ಟಮ್ ಕೂಡಾ ಅಳವಡಿಸಲಾಗಿದೆ. ಚಾಲಕರು ಹೆಚ್ಚು ಆರಾಮದಾಯಕವಾಗಿ ಬಸ್ ಚಲಾಯಿಸಲು ಅನುಕೂಲವಾಗುವಂತೆ ಸೀಟ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದು, ನಾಲ್ಕು ಹಂತದಲ್ಲಿ ಈ ಆಸನವನ್ನು ಹೊಂದಿಸಿಕೊಳ್ಳಲು ಅವಕಾಶ ಇದೆ. ಇಂಥ ಬಸ್‌ಗಳ ಚಾಲನೆಗಾಗಿ ಚಾಲಕ, ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ ಎಂದು ಕೆಎಸ್ಆರ್ ಟಿಸಿ ತಿಳಿಸಿದೆ.

English summary
65 bus granted to Mangaluru and Udupi under J N Nurm scheme. 241 busses granted to Karnataka state different cities. The programme inagurated by chief minister Siddaramaih on Thursday in Benagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X