ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಮನೆ ಮೇಲೆ ಐಟಿ ದಾಳಿ, ನಡುಗಿದ ಸುಳ್ಯದ ಕಾಂಗ್ರೆಸ್ಸಿಗರು

By ಒನ್ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಸುಳ್ಯ, ಆಗಸ್ಟ್ 03: ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ದಾಳಿ, ಪರಿಶೀಲನೆ, ತನಿಖೆ ಮುಂದುವರೆಸಿದ್ದಾರೆ. ಕೋಟ್ಯಂತರ ಮೊತ್ತ ಲಭ್ಯವಾಗಿದೆ ಎಂಬ ಸುದ್ದಿ ಹಬ್ಬಿದೆ. ಈ ನಡುವೆ ಡಿಕೆಶಿ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆಲ ಪುಟ್ಟ ಊರುಗಳಲ್ಲಿ ತಳಮಳ, ಆತಂಕ ಶುರುವಾಗಿದೆ.

ಡಿಕೆಶಿ ಮೇಲಿನ ಐಟಿ ದಾಳಿ: ಎಲ್ಲೆಲ್ಲಿ, ಏನೇನು ಸಿಕ್ಕಿತು?ಡಿಕೆಶಿ ಮೇಲಿನ ಐಟಿ ದಾಳಿ: ಎಲ್ಲೆಲ್ಲಿ, ಏನೇನು ಸಿಕ್ಕಿತು?

ಲಭ್ಯ ಮಾಹಿತಿಯಂತೆ ಡಿಕೆ ಶಿವಕುಮಾರ್ ಅವರ ಪ್ರಭಾವ ಕನಕಪುರದಿಂದ ಕರಾವಳಿಯ ಪುಟ್ಟ ಊರುಗಳ ತನಕ ಹಬ್ಬಿದೆ. ಡಿಕೆಶಿಯ ಪರಮಾಪ್ತರೆನಿಸಿಕೊಂಡಿರುವ ಇಬ್ಬರು ಮಹಿಳೆಯರು ಸುಳ್ಯ ತಾಲೂಕಿನಲ್ಲಿ ನೆಲೆಸಿದ್ದು, ಕಾಂಗ್ರೆಸ್ ಸಮಿತಿಯಲ್ಲಿ ಆಯಕಟ್ಟಿನ ಜಾಗದಲ್ಲಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಪುತ್ತೂರಿನಿಂದ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಗುರುವಾರದ 7 ಬೆಳವಣಿಗೆಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಗುರುವಾರದ 7 ಬೆಳವಣಿಗೆ

IT Raid on DK Shivakumar -Know why Sullia Taluk Congress activist fear

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಡಿಕೆಶಿ ಆಪ್ತ ವಲಯದ ದ್ವಾರಕನಾಥ್, ಸಚಿನ್ ನಾರಾಯಣ್, ಚಾಲಕ ನಾಗರಾಜು, ಆಪ್ತ ಸಹಾಯಕ ಆಂಜನೇಯ, ಆಪ್ತರಾದ ಎಸ್ ರವಿ ಸೇರಿದಂತೆ ಅನೇಕರ ಮೇಲೆ ಐಟಿ ಕಣ್ಣು ಬಿದ್ದಿದೆ. ಈಗ ಅದಾಯ ತೆರಿಗೆ ಅಧಿಕಾರಿಗಳ ವಾಹನ ರಾಜ್ಯದ ಇತರೆಡೆಗೆ ಚಲಿಸಲು ಆರಂಭಿಸಿದರೆ ಮೊದಲಿಗೆ ಸುಳ್ಯ ತಾಲೂಕಿನ ಒಂದು ಗ್ರಾಮ ಪಂಚಾಯಿತಿ ಬಳಿಗೆ ಬರುವುದು ಗ್ಯಾರಂಟಿ ಎನ್ನಲಾಗಿದೆ. ಆದರೆ, ಸದ್ಯಕ್ಕೆ ಈ ರಾಜಕೀಯ ಆಟವೆಲ್ಲ ರಾಜ್ಯಸಭೆ ಚುನಾವಣೆ ತನಕ ಮಾತ್ರ ಎಂಬ ಸುದ್ದಿಯೂ ಇದೆ. ಕಾದು ನೋಡೋಣ.

English summary
Income Tax department officials conducted raid on Minister DK Shivakumar's house and various places -Know why Sullia Taluk Congress activist fear
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X