ನೋಡ್ರೀ,ಗದಗ ಹೈದನ ಪ್ರತಿ ಕೈ ಕಾಲಲ್ಲಿ ಆರು ಬೆರಳುಗಳು

By: ದಿನೇಶ್ ನಾಯಕ್ ತೊಕ್ಕೋಟು
Subscribe to Oneindia Kannada

ಕೈ ಅಥವಾ ಕಾಲಿನಲ್ಲಿ ಎರಡು ಬೆರಳುಗಳು ಇರುವ ವ್ಯಕ್ತಿಯನ್ನು ನಾವು ಸಾಮಾನ್ಯವಾಗಿ ನೋಡಿಯೇ ಇರ್ತೇವೆ. ಆದರೆ ಇಲ್ಲೊಬ್ಬ ಹುಡುಗನ ಎರಡೂ ಕೈ ಮತ್ತು ಕಾಲುಗಳಲ್ಲಿ ಆರು ಬೆರಳುಗಳಿವೆ. ಎರಡು ಕೈ, ಕಾಲಿನಲ್ಲಿನ ಬೆರಳನ್ನು ಲೆಕ್ಕ ಹಾಕಿದರೆ ಒಟ್ಟು 24 ಬೆರಳುಗಳು ಕಂಡು ಬರುತ್ತವೆ. ಎಲ್ಲಾ ಬೆರಳುಗಳು ಸ್ವಾಭಾವಿಕ ಮತ್ತು ಸದೃಢವಾಗಿದ್ದು ಎಲ್ಲರನ್ನು ಬೆರಗುಗೊಳಿಸುತ್ತಿದೆ .

ಗದಗದ ಸಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದಿಂದ ಮಂಗಳೂರಿಗೆ ಕೆಲಸ ಅರಸಿ ಬಂದ ಹಾಲೇಶ್ (22) ಎಂಬಾತನೇ 24 ಬೆರಳು ಹೊಂದಿರುವ ವ್ಯಕ್ತಿ. ಈತ ಬಸಮ್ಮ ಮತ್ತು ಲಕ್ಷ್ಮಣ್ ಅವರ ಮಗನಾಗಿದ್ದು, ಅರ್ಧದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ.

ಗದಗದಿಂದ ಮಂಗಳೂರಿಗೆ ಬಂದಾಗ ಅವರ ಸಹಾಯಕ್ಕೆ ನಿಂತವರೇ ಕೋಟೆಕಾರಿನ ಬೀರಿ ನಿವಾಸಿ ಪ್ರಗತಿಪರ ಕೃಷಿಕ ಸುಕುಮಾರ್ ರಾವ್. ಇವರ ಕುಟುಂಬದ ವೇದನೆ ಅರಿತ ಸುಕುಮಾರ್ ತನ್ನ ಮನೆಯ ತೋಟದ ಕೆಲಸಕ್ಕೆ ಅವರನ್ನು ನಿಯೋಜಿಸಿಕೊಂಡು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು.[8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

Is Gadag person born with six fingures in both hands and leg

ಹಾಲೇಶ್ ತೋಟದ ಕೆಲಸ ಮಾಡುತ್ತಿದ್ದ ಸಂದರ್ಭ ಸುಕುಮಾರ್ ಅವರ ಮಗ ಗಣೇಶನಿಗೆ ಹಾಲೇಶ್ ಕೈ ಮತ್ತು ಕಾಲುಗಳ ಶಾರೀರಿಕ ವೈಚಿತ್ರ್ಯದ ಬಗ್ಗೆ ಅರಿವಾಗಿದೆ. ಆತ ತಕ್ಷಣ ಎಲ್ಲರಿಗೂ ಹೇಳಿದ್ದಾನೆ. ಆಗ ಮನೆ ಮಂದಿ ಎಲ್ಲರೂ ಆತನನ್ನು ಗಮನಿಸಿದಾಗ ಅವನ ಕೈ ಕಾಲುಗಳಲ್ಲಿ ಯಾವುದೇ ಕುಬ್ಜತೆ ಇಲ್ಲದ 24 ಬೆರಳುಗಳು ಕಂಡಿವೆ

ಅಲ್ಲಿಯವರೆಗೂ ಹಾಲೇಶನಿಗೆ 6 ಬೆರಳುಗಳು ಇರುವುದು ಯಾರಿಗೂ ತಿಳಿದಿರಲಿಲ್ಲ. ಏಕೆಂದರೆ ಆತನ ಬೆರಳುಗಳು ಆರೋಗ್ಯಕರವಾಗಿವೆ. ಸಾಧಾರಣವಾಗಿ ಕೆಲವರ ಕೈ ಕಾಲುಗಳಲ್ಲಿ ಒಂದು ಬೆರಳು ಕುಬ್ಜವಾಗಿರುವುದನ್ನು ಎಲ್ಲರೂ ಕಂಡಿರುತ್ತಾರೆ. ಆದರೆ ಹಾಲೇಶ್ ಅವರ ಎಲ್ಲಾ ಬೆರಳುಗಳು ಸ್ವಾಭಾವಿಕ ರೀತಿಯಲ್ಲಿದ್ದು ಶಾರೀರಿಕ ರಚನೆಗೆ ಸವಾಲಾಗಿದೆ.

ಊರಿನಲ್ಲಿ ತಮ್ಮ ಹಿರಿಯ ಮಗಳ ಮದುವೆ ಮುಗಿಸಿದ ಬಸಮ್ಮರವರ ಕುಟುಂಬ ವಾಸಿಸಲು ಸ್ವಂತ ಮನೆಯೂ ಇರಲಿಲ್ಲ. ಹಾಲೇಶ 8ನೇ ತರಗತಿಯಲ್ಲಿ ಓದುತ್ತಿದ್ದ. ಆದರೂ ಮಗನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಕುಟುಂಬ ಮಂಗಳೂರಿಗೆ ಉದ್ಯೋಗ ಅರಸಿ ಬಂದಿತ್ತು.[ಪಾರ್ಕಿನ್ ಸನ್ ರೋಗದ ಜತೆ ಹೋರಾಡಿ ಗೆದ್ದ ಹರಿಪ್ರಸಾದ್ ಕಥೆ ಕೇಳಿ]

Is Gadag person born with six fingures in both hands and leg

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಧಿಕ ಬೆರಳುಗಳಿದ್ದರೆ ಅಧೃಷ್ಟ ಹೆಗಲೇರಿ ಬರುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಆದರೆ ಹಾಲೇಶನ ಬದುಕಿಗೆ ಬಹುಶಃ ಅದು ಅನ್ವಯವಾದಂತಿಲ್ಲ. ಓದಿ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವನ ಮಹದಾಸೆಗೆ ಕಡು ಬಡತನದ ದಟ್ಟ ದಾರಿದ್ರ್ಯ ತಣ್ಣೀರೆರಚಿದೆ .

ಹಾಲೇಶನಿಗೆ ಕೈ ಕಾಲು ಬೆರಳುಗಳಲ್ಲಿ ಯಾವುದೇ ದೋಷವಿಲ್ಲ. ಆದರೆ ಆತ ದೃಷ್ಟಿ ದೋಷ ಎದುರಿಸುತ್ತಿದ್ದಾನೆ. ಅದಕ್ಕೆ ಚಿಕಿತ್ಸೆ ನೀಡಲು ಹೆಣಗಾಡುತ್ತಿದ್ದ ಕುಟುಂಬದ ಕಷ್ಟ ಅರಿತ ಸುಕುಮಾರ್ ಅವರೇ ಕಣ್ಣಿನ ವೈದ್ಯರಲ್ಲಿಗೆ ಆತನ ಕಣ್ಣಿನ ಪರೀಕ್ಷೆ ಮಾಡಿಸಿದ್ದಾರೆ.[]

ದಾನಿಗಳು ಸಹಾಯ ಮಾಡಿದರೆ ಹಾಲೇಶನು ಮತ್ತೆ ವಿದ್ಯಾಭ್ಯಾಸ ಮುಂದುವರೆಸುವ ಹಂಬಲದಲ್ಲಿದ್ದಾನೆ. ಹಾಲೇಶನ 24 ಬೆರಳುಗಳನ್ನು ನೋಡಲು ಕೋಟೆಕಾರಿನ ಆಸುಪಾಸಿನ ಜನರು ಸುಕುಮಾರ್ ಮನೆಗೆ ಭೇಟಿ ನೀಡುತ್ತಿದ್ದಾರೆ. ಸುಕುಮಾರ್ ಅವರ ಪತ್ನಿ ಮಕ್ಕಳು ಕೂಡ ಹಾಲೇಶನನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ.

ಹಾಲೇಶನ ಬೆರಳುಗಳ ವೈಚಿತ್ರ್ಯ ಕಂಡು ಅದಕ್ಕೇನಾದರೂ ಧಾರ್ಮಿಕ ತಳಹದಿ ಇದೆಯೋ ಎಂಬುದರ ಬಗ್ಗೆ ತಿಳಿಯುತ್ತೇನೆ. ಹಾಲೇಶನ ವಿದ್ಯಾಭ್ಯಾಸ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಸುಕುಮಾರ್ ರಾವ್ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Is a person Halesh (22) with six fingures in both hands and leg. All have very curiousity in this person. Halesh and his father Lakshman and his mother Bassamma came from Belagatti village, Sirahatti Taluk, Gadag. to Mangaluru. He have a lot interest to continue his education. But no one one help him.
Please Wait while comments are loading...