ಪಿ.ಹರಿಶೇಖರನ್‌ಗೆ ಅಮೆರಿಕ ಕಾನ್ಸುಲೇಟ್ ಜನರಲ್ ಪ್ರಶಸ್ತಿ

Posted By:
Subscribe to Oneindia Kannada

ಮಂಗಳೂರು, ಅ.18 : ಅಮೆರಿಕಾಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲದಲ್ಲಿನ 16 ತಂಡಗಳನ್ನು ಪತ್ತೆ ಮಾಡಿದ ಐಪಿಎಸ್ ಅಧಿಕಾರಿ ಪಿ.ಹರಿಶೇಖರನ್ ಅವರಿಗೆ ಅಮೆರಿಕ ಕಾನ್ಸುಲೇಟ್ ಜನರಲ್ ಅಂತಾರಾಷ್ಟ್ರೀಯ ಮಟ್ಟದ ಕಾನೂನು ಜಾರಿ ವಿಭಾಗದ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪಶ್ಚಿಮ ವಲಯ ಐಜಿಪಿ ಆಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ಪಿ.ಹರಿಶೇಖರನ್ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆಯಲ್ಲಿದ್ದ ಅವಧಿಯಲ್ಲಿ ಅವರ ನೇತೃತ್ವದಲ್ಲಿ ರಚಿಸಿದ ವಿಶೇಷ ತನಿಖಾ ತಂಡ ಮಾನವ ಕಳ್ಳಸಾಗಣೆ ಮಾಡುತ್ತಿದ್ದ 16 ತಂಡಗಳನ್ನು ಪತ್ತೆ ಮಾಡಿತ್ತು.

IPS officer P.Harishekaran awarded by American Consulate General

ಎಸ್ಐಟಿ ಮುಖ್ಯಸ್ಥರಾಗಿ ಕೆಲಸ ಮಾಡುವಾಗ ಮಾನವ ಕಳ್ಳಸಾಗಣೆ ಜಾಲವನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಕ್ಕಾಗಿ ಹರಿಶೇಖರನ್ ಅವರನ್ನು ಅಮೆರಿಕನ್ ಕಾನ್ಸುಲೇಟ್ ಶ್ಲಾಘಿಸಿದೆ. ಇತ್ತೀಚೆಗೆ ಅವರಿಗೆ ಕಾನ್ಸುಲೇಟ್ ಜನರಲ್ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

45 ಸಬ್ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಪಶ್ಚಿಮ ವಲಯ ಐಜಿಪಿ ಹುದ್ದೆಯಲ್ಲಿದ್ದ ಪಿ.ಹರಿಶೇಖರನ್ ಬುಧವಾರ ಹೇಮಂತ್ ನಿಂಬಾಳ್ಕರ್ ಅವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಪ್ರಸ್ತುತ ಬೆಂಗಳೂರು ಕೇಂದ್ರ ಸ್ಥಾನದ ಐಜಿಪಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior IPS officer P.Harishekaran received award from American Consulate General (ACG) recently for detecting gangs involved in human trafficking.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X