ದೀಪಕ್ ರಾವ್ ಯಾರು? ಕೊಲೆ ಆಗಲು ಕಾರಣವೇನು?

Posted By:
Subscribe to Oneindia Kannada
   ಮಂಗಳೂರು : ದೀಪಕ್ ರಾವ್ ಯಾರು? ಈ ಅಮಾನುಷ ಕೊಲೆಗೆ ಕಾರಣವೇನು? | Oneindia Kannada

   ಮಂಗಳೂರು, ಜನವರಿ 04 : ಬುಧವಾರ, ಜನವರಿ 3ರಂದು ಮಧ್ಯಾಹ್ನ ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ನ ಹತ್ಯೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ದೀಪಕ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಗಾಡಿಯಿಂದ ಗುದ್ದಿ, ಬೀಳಿಸಿ, ಕತ್ತಿಗಳನ್ನು ಬೀಸಿ, ನೆತ್ತರು ಚೆಲ್ಲಿಸಿ ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.

   ಕರಾವಳಿಯಲ್ಲಿ ಮತ್ತೆ ರಕ್ತಪಾತ: ಸಹನೆಯ ಕಟ್ಟೆಯೊಡೆದ ಆಕ್ರೋಶ

   ಅಷ್ಟು ಅಮಾನುಷವಾಗಿ ಹತ್ಯೆಯಾದ 25 ವರ್ಷದ ಯುವಕ ದೀಪಕ್ ರಾವ್ ಯಾರು? ಅಷ್ಟು ಭೀಕರವಾಗಿ ಆತನನ್ನು ಕೊಲೆಗೈಯಲು ಏನು ಕಾರಣ? ಇಲ್ಲಿದೆ ದೀಪಕ್ ರಾವ್ ಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಇಲ್ಲಿವೆ.

   ಮಂಗಳೂರಲ್ಲಿ ದೀಪಕ್ ಹತ್ಯೆ: ಚಿತ್ರಗಳಲ್ಲಿ ಪ್ರಕ್ಷುಬ್ಧ ಕರಾವಳಿ

   ದೀಪಕ್ ರಾವ್ ಮಂಗಳೂರಿನ ಕಾಟಿಪಳ್ಳ ಮೂರನೇ ಬ್ಲಾಕ್ ಜನತಾ ಕಾಲನಿ ಬಳಿಯ ಗಣೇಶ ಕಟ್ಟೆ ನಿವಾಸಿ ದಿ.ರಾಮಚಂದ್ರ ರಾವ್, ಪ್ರೇಮ ದಂಪತಿಯ ಮೊದಲ ಮಗ. ದೀಪಕ್ ರಾವ್ ನಿಗೆ ಒಬ್ಬ ತಮ್ಮ ಇದ್ದಾನೆ, ಆತನದ್ದು ಕೂಲಿ ಕೆಲಸ, ಸತೀಶ್ ಆತನ ಹೆಸರು. ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ದೀಪಕ್ ರಾವ್‌ ಸಂಪಾದನೆಯಿಂದಲೇ ಮನೆ ನಡೆಯುತ್ತಿದುದು.

   ದೀಪಕ್ ಸಂಪಾದನೆಯೇ ಕುಟುಂಬದ ಆಧಾರ

   ದೀಪಕ್ ಸಂಪಾದನೆಯೇ ಕುಟುಂಬದ ಆಧಾರ

   ದೀಪಕ್ ಕಾಟಿಪಳ್ಳದ ಅಬ್ದುಲ್ ಮಜೀದ್ ಎಂಬವರ ಮೊಬೈಲ್ ಕರೆನ್ಸಿ, ಸಿಮ್ ಮಾರಾಟ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಜೊತೆಗೆ ಭಜರಂಗದಳ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಇತ್ತೀಚೆಗೆ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿಯೂ ಕೆಲಸ ಮಾಡುತ್ತಿದ್ದ.

   ಫ್ಲೆಕ್ಸ್ ಹಾಕುವ ವಿಷಯಕ್ಕೆ ಜಗಳ

   ಫ್ಲೆಕ್ಸ್ ಹಾಕುವ ವಿಷಯಕ್ಕೆ ಜಗಳ

   ಡಿಸೆಂಬರ್ 1ರಂದು ಕಾಟಿಪಳ್ಳದ ಕೈಕಂಬದಲ್ಲಿ ಭೂತಕೋಲ ಆಯೋಜಿಸಲಾಗಿತ್ತು, ಆಯೋಜಕರು ಪ್ರತಿವರ್ಷ ಒಂದು ನಿರ್ದಿಷ್ಟ ಜಾಗದಲ್ಲಿಯೇ ಫ್ಲೆಕ್ಸ್ ಹಾಕುತ್ತಿದ್ದರು ಈ ಬಾರಿಯೂ ಅಲ್ಲಿಯೇ ಫ್ಲೆಕ್ಸ್ ಹಾಕಲು ಹೋದಾಗ ಅಲ್ಲಿ ಮೊದಲೇ ಹಾಕಿದ್ದ ಈದ್ ಮಿಲಾದ್ ಶುಭಾಷಯದ ಫ್ಲೆಕ್ಸ್ ಅನ್ನು ತೆರವುಗೊಳಿಸಲು ಕೆಲವು ಅನ್ಯ ಧರ್ಮೀಯ ಯುವಕರು ಅಡ್ಡಿಪಡಿಸಿದರು.

   ವಿಡಿಯೋ ಡಿಲಿಟ್ ಮಾಡುವಂತೆ ಬೆದರಿಕೆ

   ವಿಡಿಯೋ ಡಿಲಿಟ್ ಮಾಡುವಂತೆ ಬೆದರಿಕೆ

   ಆಗ ಅಲ್ಲಿ ಸಣ್ಣ ಗಲಾಟೆಯೂ ಆಯಿತು, ಆಗ ದೀಪಕ್ ರಾವ್ ಕೂಡಾ ಸ್ಥಳದಲ್ಲಿ ಹಾಜರಿದ್ದ, ಅಷ್ಟೇ ಅಲ್ಲ ಆತ ಆ ಗಲಾಟೆಯ ವಿಡಿಯೊ ಚಿತ್ರೀಕರಣ ಮಾಡಿದ್ದ, ಆಗ ಅನ್ಯ ಕೋಮಿನ ಕೆಲವರು 'ವಿಡಿಯೋ ಡಿಲೀಟ್ ಮಾಡು, ಇಲ್ಲಿದಿದ್ದರೆ ನಿನ್ನನ್ನು ಡಿಲೀಟ್ ಮಾಡುತ್ತೇವೆ' ಎಂದು ಹೆದರಿಸಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

   ಸಾಮಾಜಿಕ ಜಾಲತಾಣದಲ್ಲೂ ಬೆದರಿಕೆ

   ಸಾಮಾಜಿಕ ಜಾಲತಾಣದಲ್ಲೂ ಬೆದರಿಕೆ

   ಆ ನಂತರ ದೀಪಕ್ ರಾವ್ ಕೆಲಸ ಮಾಡುತ್ತಿದ್ದ ಮೊಬೈಲ್ ಅಂಗಡಿಗೆ ಬಂದು ದೀಪಕ್ ನನ್ನು ಕೆಲಸದಿಂದ ತೆಗೆದು ಹಾಕುವಂತೆ ಅಂಗಡಿ ಮಾಲೀಕ ಅಬ್ದುಲ್ ಮಜೀದ್ ಮೇಲೆ ಅನ್ಯ ಧರ್ಮೀಯ ಕೆಲ ಯುವಕರು ಒತ್ತಡ ಹಾಕಿದ್ದರು. ಆ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ದೀಪಕ್ ಗೆ ಬೆದರಿಕೆಗಳು ಬರುತ್ತಿದ್ದವು ಎನ್ನಲಾಗಿದೆ. ಈಗ ಅವರೇ ದೀಪಕ್ ಕೊಲೆ ಮಾಡಿರಬಹುದು ಎಂಬ ಆರೋಪ ಕೇಳಿ ಬರುತ್ತಿದೆ. ಕೊಲೆ ಮಾಡಿದ್ದಾರೆ ಎನ್ನಲಾಗಿರುವ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಬಳಿಕ ಕೊಲೆಗೆ ನಿಜವಾದ ಕಾರಣ ತಿಳಿದು ಬರಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Deepak Rao a simple boy of Mangalore brutaly murderd by some goons. He is known as BJP's active party worker and Bhajarangadal member.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ