ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗ ಪರಿವರ್ತಿತರ ಸಮಸ್ಯೆ ಕೇಳಲು ಬಂತು ವೆಬ್ ಸೈಟ್

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 13 : ಸಲಿಂಗಿಗಳು ಮತ್ತು ಲಿಂಗ ಪರಿವರ್ತಿತರ ಬಗ್ಗೆ ಸಮಾಜದಲ್ಲಿ ಇರುವ ತಪ್ಪುಕಲ್ಪನೆ ಹೋಗಲಾಡಿಸಲು, ಲಿಂಗಪರಿವರ್ತಿತರಿಗೆ ಇ- ಪ್ರೋತ್ಸಾಹ ನೀಡಲು ವೆಬ್‌ಸೈಟ್ ಆರಂಭಿಸಲಾಗಿದೆ. ಲಿಂಗ ಪರಿವರ್ತಿತರು ಒಟ್ಟಾಗಿ ವೆಬ್‌ಸೈಟ್ ರೂಪಿಸಿದ್ದಾರೆ ಎಂಬುದು ವಿಶೇಷ.

'ಲಿಂಗ ಪರಿವರ್ತಿತರ ಸಮಸ್ಯೆಗಳಿಗಳನ್ನು ತಿಳಿಸಲು ದೇಶದ ಮೊದಲ 24*7ವೆಬ್‌ಸೈಟ್ www.transgenderindia.com ಆರಂಭಿಸಲಾಗಿದೆ' ಎಂದು ಲಿಂಗ ಪರಿವರ್ತಿತ ನೇಸರ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. [ಶಿವಕುಮಾರ್ ಜೊತೆ ಬಾಳುವ ಆಶಯದಲ್ಲಿದ್ದಾಳೆ ರಾಧಿಕಾ!]

website

'ಈ ವೆಬ್‌ಸೈಟ್ ಲಿಂಗ ಪರಿವರ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಸಂಪನ್ಮೂಲವಾಗಿ ಕಾರ್ಯನಿರ್ವಹಿಸಲಿದೆ. ಲಿಂಗ ಪರಿವರ್ತಿತರ, ಅವರ ಕುಟುಂಬಿಕರ ನೈಜ ಜೀವನ ಅನುಭವವನ್ನು ವೆಬ್‌ಸೈಟ್ ಪ್ರಕಟಿಸಲಿದೆ' ಎಂದರು. [ಈ ಲಗ್ನ ಸಾಧ್ಯವಿಲ್ಲ, ಏಕೆಂದ್ರೆ ಅವಳು ಅವಳಲ್ಲ ಅವನು!]

'15ರ ಹರೆಯದಲ್ಲೇ ನಾನು ತಾಯಿಯನ್ನು ಕಳೆದುಕೊಂಡೆ. ಆ ಬಳಿಕ ಸೋದರಮಾವನಿಂದಲೇ ದೌರ್ಜನ್ಯಕ್ಕೆ ಒಳಗಾದೆ. 10 ವರ್ಷಗಳ ಕಾಲ ದೌರ್ಜನ್ಯ ಅನುಭವಿಸಿ ಮಾನಸಿಕವಾಗಿ ಜರ್ಜರಿತಗೊಂಡಿದ್ದೆ. ಇದರ ಪರಿಣಾಮವಾಗಿ ಲಿಂಗ ಪರಿವರ್ತನೆಯ ನಿರ್ಧಾರ ಕೈಗೊಂಡೆ' ಎಂದು ನೇಸರ ಹೇಳಿದರು. [ಮಂಗಳಮುಖಿಯನ್ನು ಪ್ರೀತಿಸಿ ರೈಲಿಗೆ ತಲೆಕೊಟ್ಟ ಯುವಕ]

'ಲಿಂಗ ಪರಿವರ್ತಿತರು ತಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಹಿಂದೇಟು ಹಾಕಿ, ಲಿಂಗ ಪರಿವರ್ತನೆ ಹೊಂದಿದ ವಿಷಯವನ್ನು ರಹಸ್ಯವಾಗಿಡುತ್ತಿದ್ದಾರೆ. ಲಿಂಗ ಪರಿವರ್ತನೆ ಹೊಂದಿದ ವ್ಯಕ್ತಿ ತಾನಾಗಿ ವಿಷಯವನ್ನು ತಿಳಿಸದ ಹೊರತು ಸಮಾಜಕ್ಕೂ ಗೊತ್ತಾಗುವುದಿಲ್ಲ' ಎಂದು ತಿಳಿಸಿದರು.

ವೆಬ್‌ಸೈಟ್ ಮತ್ತು ಲಿಂಗ ಪರಿವರ್ತಿತರ ಹೋರಾಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7338321413 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
A group of Indian transgender persons have launched the website Transgender India. The website aims to be a platform where transgenders can discuss doubts regarding gender identities and share personal stories and experiences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X