ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ-ಮುಕ್ತ

|
Google Oneindia Kannada News

ಮಂಗಳೂರು, ಆಗಸ್ಟ್ 11 : ಅಂತೂ ಇಂತೂ ಎಲ್ಲಾ ಗಡುವುಗಳು ಮುಗಿದ ಬಳಿಕ ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಸುಮಾರು 69 ಕೋಟಿ ರೂಪಾಯಿ ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆಯನ್ನು ಕಾಂಕ್ರಿಟ್‌ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗಿದೆ.

ಶಿರಾಡಿ ಘಾಟ್ ರಸ್ತೆಯಯ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹಾದೇವಪ್ಪ ಅವರು ಘೋಷಿಸಿದರು. ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟ್ ರಸ್ತೆಯನ್ನು 2015ರ ಜನವರಿ 2ರಿಂದ ಬಂದ್ ಮಾಡಲಾಗಿತ್ತು. [ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ಮುಕ್ತ]

ಮೊದಲ ಹಂತದಲ್ಲಿ ಶಿರಾಡಿ ಘಾಟ್ ರಸ್ತೆ ಒಟ್ಟು 69.90 ಕೋ. ರೂ. ವೆಚ್ಚದಲ್ಲಿ 11.77 ಕಿ.ಮೀ. ಉದ್ದ ಹಾಗೂ 8.50 ಮೀಟರ್‌ ಅಗಲದಲ್ಲಿ ಕಾಂಕ್ರಿಟಿಕರಣಗೊಂಡು ಅಭಿವೃದ್ಧಿಯಾಗಿದೆ. ಸೈನ್‌ ಬೋರ್ಡ್‌ ಅಳವಡಿಕೆ, ತಡೆಗೋಡೆ ನಿರ್ಮಾಣ, ಕ್ಯಾಷ್‌ ಬ್ಯಾರಿಯರ್‌ ನಿರ್ಮಾಣ ಮುಂತಾದ ಕಾಮಗಾರಿಗಳು ಪೂರ್ಣಗೊಂಡಿವೆ. [ಹೆದ್ದಾರಿಗಳಿಗೆ ಅನುದಾನ, ಸಂಸದರೊಂದಿಗೆ ಸಭೆ]

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್, ಶಾಸಕಿ ಶಕುಂತಾಳ ಶೆಟ್ಟಿ, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಮಾಜಿ ಶಾಸಕರಾದ ಶಿವರಾಮ್‌, ವಿಶ್ವನಾಥ್‌ ಮುಂತಾದವರು ಶಿರಾಡಿ ಘಾಟ್‌ಗೆ ಭೇಟಿ ನೀಡಿ, ರಸ್ತೆಯ ಗುಣಮಟ್ಟವನ್ನು ವೀಕ್ಷಿಸಿದ್ದಾರೆ. ವಾಹನ ಸಂಚಾರಕ್ಕೆ ಶಿರಾಡಿ ಮುಕ್ತ ಚಿತ್ರಗಳು....

ಎಲ್ಲಾ ವಾಹನಗಳ ಸಂಚಾರಕ್ಕೆ ಶಿರಾಡಿ ಮುಕ್ತ

ಎಲ್ಲಾ ವಾಹನಗಳ ಸಂಚಾರಕ್ಕೆ ಶಿರಾಡಿ ಮುಕ್ತ

ಶಿರಾಡಿ ಘಾಟ್ ರಸ್ತೆಯಯ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹಾದೇವಪ್ಪ ಅವರು ಘೋಷಿಸಿದ್ದಾರೆ. ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು 2015ರ ಜನವರಿ 2ರಿಂದ ಬಂದ್ ಮಾಡಲಾಗಿತ್ತು. ಆ.10ರಿಂದ ರಸ್ತೆಯಲ್ಲಿ ವಾಹನ ಸಂಚಾರ ಪುನಃ ಆರಂಭವಾಗಿದೆ.

ಮೊದಲ ಹಂತದ ಕಾಮಗಾರಿ ಪೂರ್ಣ

ಮೊದಲ ಹಂತದ ಕಾಮಗಾರಿ ಪೂರ್ಣ

ಸಕಲೇಶಪುರದ ಬಳಿ ಶಿರಾಡಿ ಘಾಟ್ ಪ್ರಾರಂಭವಾಗುವ ಹೆಗ್ಗದ್ದೆಯಿಂದ ಕೆಂಪುಹೊಳೆ ಚೌಡೇಶ್ವರಿ ದೇವಸ್ಥಾನದವರೆಗಿನ 11.77 ಕಿ.ಮೀ ಉದ್ದದ ರಸ್ತೆ ಕಾಂಕ್ರಿಟಿಕರಣ ಮುಗಿದಿದೆ. ಒಟ್ಟು 69.90 ಕೋ. ರೂ. ವೆಚ್ಚದಲ್ಲಿ 11.77 ಕಿ.ಮೀ. ಉದ್ದ ಹಾಗೂ 8.50 ಮೀಟರ್‌ ಅಗಲದ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಸೈನ್‌ ಬೋರ್ಡ್‌ ಅಳವಡಿಕೆ, ತಡೆಗೋಡೆ ನಿರ್ಮಾಣ, ಕ್ಯಾಷ್‌ ಬ್ಯಾರಿಯರ್‌ ನಿರ್ಮಾಣ ಮುಂತಾದ ಕಾಮಗಾರಿಗಳು ಪೂರ್ಣಗೊಂಡಿವೆ.

ಮಳೆಗಾಲದ ಬಳಿಕ 2ನೇ ಹಂತದ ಕಾಮಗಾರಿ

ಮಳೆಗಾಲದ ಬಳಿಕ 2ನೇ ಹಂತದ ಕಾಮಗಾರಿ

ದ್ವಿತೀಯ ಹಂತದ ರಸ್ತೆ ದುರಸ್ತಿ ಕಾಮಗಾರಿ ಮಳೆಗಾಲದ ಬಳಿಕ ಆರಂಭಗೊಳ್ಳಲಿದೆ. ಒಟ್ಟು 85.28 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದೆ. ಇದರಲ್ಲಿ 22.18 ಕೋಟಿ ರೂ. ವೆಚ್ಚದಲ್ಲಿ 21 ಕಿ.ಮೀ. ರಸ್ತೆ (ಗುಳಗಳಲೆಯಿಂದ ಹೆಗ್ಗದ್ದೆ ವರೆಗೆ) ಡಾಂಬರೀಕರಣ ಹಾಗೂ 63.10 ಕೋಟಿ ರೂ. ವೆಚ್ಚದ 12.38 ಕಿ.ಮೀ. ರಸ್ತೆ ಕಾಂಕ್ರಿಟಿಕರಣ (ಕೆಂಪುಹೊಳೆಯಿಂದ ಅಡ್ಡಹೊಳೆವರೆಗೆ) ಕಾಮಗಾರಿ ನಡೆಯಲಿದೆ.

ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದೆ

ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದೆ

ಶಿರಾಡಿ ಘಾಟ್‌ನಲ್ಲಿ ಆಯೋಜಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹಾದೇವಪ್ಪ ಅವರು, ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರತಿವರ್ಷ ಎದುರಿಸುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂಬ ಬಹುಕಾಲದ ಬೇಡಿಕೆ ಈಡೇರಿದೆ. ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಿದೆ ಎಂದರು.

ಸುರಂಗಮಾರ್ಗ ನಿರ್ಮಾಣ ಶೀಘ್ರ ಕೈಗೆತ್ತಿಕೊಳ್ಳಲಿ

ಸುರಂಗಮಾರ್ಗ ನಿರ್ಮಾಣ ಶೀಘ್ರ ಕೈಗೆತ್ತಿಕೊಳ್ಳಲಿ

ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಮಾತನಾಡಿ, ಶಿರಾಡಿ ಘಾಟಿಯಲ್ಲಿ ರಸ್ತೆ ಸಮಸ್ಯೆ ನಿವಾರಣೆಯಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದೆ. ತಾನು ಕೇಂದ್ರ ಸಚಿವನಾಗಿದ್ದ ವೇಳೆ ಕರ್ನಾಟಕದಿಂದ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಪಟ್ಟು ಬಹುತೇಕ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಿದ್ದೇನೆ. ಶಿರಾಡಿಯಲ್ಲಿ ಸುರಂಗಮಾರ್ಗ ನಿರ್ಮಾಣ ಯೋಜನೆಯನ್ನು ಶೀಘ್ರ ಕೈಗೆತ್ತಿಗೊಳ್ಳಲಿ ಎಂದರು.

ಸುರಂಗ ಮಾರ್ಗ, ಮೇ ಅಂತ್ಯಕ್ಕೆ ಡಿಪಿಆರ್‌ ಸಲ್ಲಿಕೆ

ಸುರಂಗ ಮಾರ್ಗ, ಮೇ ಅಂತ್ಯಕ್ಕೆ ಡಿಪಿಆರ್‌ ಸಲ್ಲಿಕೆ

ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿ ಶೀಘ್ರ ಪ್ರಾರಂಭವಾಗಲಿದ್ದು, 2016ರ ಮೇ ಅಂತ್ಯದೊಳಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಇದಕ್ಕೆ ಈಗಾಗಲೇ 10.15 ಕೋಟಿ ರೂ. ಮಂಜೂರು ಆಗಿದೆ. ಅಡ್ಡಹೊಳೆಯಿಂದ ಹೆಗ್ಗದ್ದೆವರೆಗೆ 22.84 ಕಿ.ಮೀ. ಉದ್ದದ ಈ ಯೋಜನೆ ಇದಾಗಿದೆ. ಒಟ್ಟು 12.41 ಕಿ.ಮೀ. ಉದ್ದದ 7 ಸುರಂಗಗಳು, ಒಟ್ಟು 6.77 ಕಿ.ಮೀ. 10 ಸೇತುವೆಗಳನ್ನು ಒಳಗೊಂಡಿದೆ. ಯೋಜನೆ 77 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ ಎಂದು ಸಚಿವ ಮಹದೇವಪ್ಪ ವಿವರಿಸಿದರು.

English summary
Shiradi Ghat stretch which was strengthened at a cost of Rs. 69.9 core, was opened for vehicles from Monday. The stretch was closed for vehicles in January 2015. Public Works Minister H.C. Mahadevappa declared the road was formally opened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X