ಚಿತ್ರಗಳು : 'ಓಖಿ' ಚಂಡಮಾರುತದಿಂದ ಮಂಗಳೂರಲ್ಲಿ ಕಡಲ್ಕೊರೆತ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 03 : ಓಖಿ ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿ ತೀರಕ್ಕೂ ತಟ್ಟಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಿ ಅಬ್ಬರ ಜೋರಾಗಿದೆ. ಕಡಲಕೊರೆತ ಆರಂಭವಾಗಿದೆ.

ವಿಡಿಯೋ, ಚಿತ್ರಗಳಲ್ಲಿ ಲಕ್ಷದ್ವೀಪದ ಓಖಿ ಅಬ್ಬರ!

ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಪ್ಪರ, ಉಪ್ಪಳ ಬಳಿಯ ಕೊಯಿಪಾಡಿ ಎಂಬಲ್ಲಿ 6 ಮನೆಗಳು ಸಮುದ್ರದ ಪಾಲಾಗಿವೆ. ಅಲ್ಲಿದ್ದ ನಿವಾಸಿಗಳನ್ನು ಮೊದಲೇ ಸ್ಥಳಾಂತರ ಮಾಡಿದ್ದರಿಂದ ಜೀವ ಹಾನಿ ತಪ್ಪಿದೆ.

In Pics:ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು

ಮಂಜೇಶ್ವರದ ಕಡಲ ಕಿನಾರೆಯಲ್ಲಿ ಮನೆಯೊಂದು ನೋಡ ನೋಡುತ್ತಿದ್ದಂತೆಯೇ ಸಮುದ್ರದ ಪಾಲಾಯಿತು. ಶನಿವಾರ ಸಂಜೆಯಿಂದಲೇ ಕಡಲ್ಕೊರೆತ ಆರಂಭವಾಗಿದೆ. ಇದರಿಂದಾಗಿ ಮನೆಗಳಿಗೆ ಹಾನಿಯಾಗಿದೆ.

ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲದ ತೀರ ಪ್ರದೇಶದಲ್ಲಿ ಕಡಲ ಅಬ್ಬರ ಹೆಚ್ಚಿದ್ದು ಸಮುದ್ರದಲ್ಲಿ ಆಳೆತ್ತರದ ಕಲೆಗಳು ಏಳುತ್ತಿದೆ. ಕಳೆದ ರಾತ್ರಿ ಉಳ್ಳಾಲದ ರೆಸಾರ್ಟ್ ಗೂ ನೀರು ನುಗ್ಗಿದೆ.

ಅಕ್ಕ-ಪಕ್ಕದ ರಾಜ್ಯಗಳಲ್ಲಿ ಮಳೆ

ಅಕ್ಕ-ಪಕ್ಕದ ರಾಜ್ಯಗಳಲ್ಲಿ ಮಳೆ

'ಓಖಿ' ಚಂಡಮಾರುತದ ಅಬ್ಬರದಿಂದಾಗಿ ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.

ಮಂಗಳೂರಿನಲ್ಲಿಯೂ ಪ್ರಭಾವ

ಮಂಗಳೂರಿನಲ್ಲಿಯೂ ಪ್ರಭಾವ

'ಓಖಿ' ಚಂಡಮಾರುತದ ಪ್ರಭಾವ ಮಂಗಳೂರಿನ ಕಡಲ ತೀರದಲ್ಲಿ ಕಂಡುಬರುತ್ತಿದೆ. ಶನಿವಾರ ಸಂಜೆಯಿಂದ ಕಡಲ್ಕೊರೆತ ಆರಂಭವಾಗಿದೆ.

ಆಳೆತ್ತರದ ಆಲೆಗಳ ಆರ್ಭಟ

ಆಳೆತ್ತರದ ಆಲೆಗಳ ಆರ್ಭಟ

ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಿ ಅಬ್ಬರ ಜೋರಾಗಿದೆ. ಕಡಲಕೊರೆತ ಆರಂಭವಾಗಿದೆ. ಆಳೆತ್ತರದ ಅಲೆಗಳು ಆರ್ಭಟ ನಡೆಸುತ್ತಿವೆ.

ಸ್ಥಳೀಯರ ದೂರು

ಸ್ಥಳೀಯರ ದೂರು

ಮಂಜೇಶ್ವರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಆಗುತ್ತಿದ್ದು ಬ್ರೇಕ್ ವಾಟರ್ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಕೆಲವು ಪ್ರದೇಶಗಳಲ್ಲಿ ಸಮುದ್ರದ ತೀವ್ರತೆ ಹೆಚ್ಚಿದ್ದಾಗಿ ಸ್ಥಳೀಯರು ದೂರಿದ್ದಾರೆ. ಇನ್ನು ಮಂಜೇಶ್ವರದ ಕಡಪ್ಪರದಲ್ಲಿ ಮನೆಯೊಂದು ನೋಡ ನೋಡುತ್ತಲೇ ಸಮುದ್ರಕ್ಕೆ ಬಿದ್ದು ನೀರುಪಾಲಾಗಿದೆ.

ಉಳ್ಳಾಲದಲ್ಲೂ ಅಬ್ಬರ

ಉಳ್ಳಾಲದಲ್ಲೂ ಅಬ್ಬರ

ಉಳ್ಳಾಲದ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ಖಾಸಗಿ ರೆಸಾರ್ಟ್‌ ಗೋಡೆಯೊಂದು ಅಲೆಗಳ ಹೊಡೆತಕ್ಕೆ ಸಮುದ್ರದ ಪಾಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A deep depression in the Bay of Bengal near Tamil Nadu has turned into a cyclone named 'Ockhi'. Due to cyclone sea erosion in Mangaluru, Dakshina Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ