ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಧರ್ಮಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ದಕ್ಷಿಣ ಕನ್ನಡ, ಅಕ್ಟೋಬರ್ 29 : 'ಪರ್ ಡ್ರಾಪ್ ಮೋರ್ ಕ್ರಾಪ್ ಪರಿಕಲ್ಪನೆಯಡಿ ರೈತರು ಪ್ರತಿ ನೀರಿನ ಹನಿಯ ಬಳಕೆಯಲ್ಲೂ ದೃಷ್ಟಿಯಲ್ಲಿಟ್ಟು ಕೃಷಿ ಮಾಡುವತ್ತ ದಾಪುಗಾಲಿಡಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

In Pics : ಧರ್ಮಸ್ಥಳದಲ್ಲಿ ನರೇಂದ್ರ ಮೋದಿ

ಭಾನುವಾರ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ, ಉಜಿರೆಯ ರತ್ನಾಕರ ವರ್ಮ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು.

ವೀರೇಂದ್ರ ಹೆಗ್ಗಡೆ ಕಾರ್ಯಗಳನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿವೀರೇಂದ್ರ ಹೆಗ್ಗಡೆ ಕಾರ್ಯಗಳನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಫಲಾನುಭವಿಗಳಿಗೆ ರೂಪೇ ಕಾರ್ಡ್ ವಿತರಿಸಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದರು.

Live : ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿLive : ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. 'ಆದಿ ಶಂಕರಾಚಾರ್ಯರು ಸ್ಥಾಪಿಸಿದ ಕೇದಾರನಾಥಕ್ಕೆ ಕೆಲವು ದಿನಗಳ ಹಿಂದೆ ಭೇಟಿ ನೀಡಿದ್ದೆ. ಈ ಬಾರಿ ದಕ್ಷಿಣದ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಸೌಭಾಗ್ಯ ನನಗೆ ದೊರಕಿದ್ದು, ಸಂತಸ ತಂದಿದೆ' ಎಂದರು.

'ನಾನು ತುಂಬಾ ತುಂಬಾ ಸಾಮಾನ್ಯ'

'ನಾನು ತುಂಬಾ ತುಂಬಾ ಸಾಮಾನ್ಯ'

'ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಶ್ಲಾಘಿಸಿದ ನರೇಂದ್ರ ಮೋದಿ ಕಳೆದ 50 ವರ್ಷಗಳಿಂದ ಡಾ.ವೀರೇಂದ್ರ ಹೆಗ್ಗಡೆಯವರು ಮಾಡಿಕೊಂಡು ಬಂದಂತಹ ಕಾರ್ಯ ಅವಿಸ್ಮರಣೀಯ ಹೆಗಡೆಯವರಂಥ ವ್ಯಕ್ತಿತ್ವದ ಮುಂದೆ ನಾನು ತುಂಬಾ ತುಂಬಾ ಸಾಮಾನ್ಯ' ಎಂದು ಹೇಳಿದರು.

'ಜನಪರ ಕಾರ್ಯಕ್ರಮ ಅನುಷ್ಠಾನ'

'ಜನಪರ ಕಾರ್ಯಕ್ರಮ ಅನುಷ್ಠಾನ'

ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕೌಶಲ್ಯಾಭಿವೃದ್ಧಿ ಕಾರ್ಯಗಳು ದೇಶಕ್ಕೆ ಮಾದರಿಯಾಗಿವೆ. ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ರೀತಿಯನ್ನು ಹೆಗಡೆ ಅವರಿಂದ ಕಲಿಯಬೇಕು' ಎಂದು ಅವರು ಅಭಿಪ್ರಾಯಪಟ್ಟರು

‘ಹೆಚ್ಚಿನ ಚರ್ಚೆಗಳಾಗಿಲ್ಲ'

‘ಹೆಚ್ಚಿನ ಚರ್ಚೆಗಳಾಗಿಲ್ಲ'

'ಕೌಶಲ್ಯ ಅಭಿವೃದ್ಧಿ ಕೇವಲ ಜೀವನ ನಿರ್ವಹಣೆಗೆ ಮಾತ್ರವಲ್ಲದೆ ಅದು ದೇಶದ ಅಭಿವೃದ್ಧಿಯ ದಾರಿ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಇಂತಹ ಕಾರ್ಯಗಳು ಈಗಾಗಲೇ ನಡೆಯುತ್ತಿವೆ. ತೀರ್ಥ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಕುರಿತು ಇಂದಿಗೂ ಹೆಚ್ಚಿನ ಚರ್ಚೆಗಳಾಗಿಲ್ಲ' ಎಂದರು.

'ಒಂದು ಸಂಸ್ಥೆ ಹೇಗೆ ಕೆಲಸ ಮಾಡಬೇಕು'

'ಒಂದು ಸಂಸ್ಥೆ ಹೇಗೆ ಕೆಲಸ ಮಾಡಬೇಕು'

'ಎಂಬಿಎ , ಇಂಜಿನಿಯರಿಂಗ್ ಹಾಗೂ ಕಾಮರ್ಸ್ ಕಾಲೇಜುಗಳ ಶ್ರೇಣಿಗಳನ್ನು ನಾವೀಗಾಗಲೇ ಕಾಣುತ್ತಿದ್ದೇವೆ. ಸಾಮಾಜಿಕ ಕಲ್ಯಾಣಕ್ಕಾಗಿ ಒಂದು ಸಂಸ್ಥೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ಧರ್ಮಸ್ಥಳ ಮಾಡಿ ತೋರಿಸುತ್ತಾ ಬಂದಿದೆ' ಎಂದರು.

'ಕ್ಯಾಶ್ ಲೆಸ್ ಮಾಡುವತ್ತ ದಾಪುಗಾಲಿಟ್ಟಿದ್ದೇವೆ'

'ಕ್ಯಾಶ್ ಲೆಸ್ ಮಾಡುವತ್ತ ದಾಪುಗಾಲಿಟ್ಟಿದ್ದೇವೆ'

'21 ನೇ ಶತಮಾನದಲ್ಲಿ ಕೌಶಲ್ಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ ಇಡೀ ಭಾರತವನ್ನು ಕ್ಯಾಶ್ ಲೆಸ್ ಮಾಡುವತ್ತ ದಾಪುಗಾಲಿಟ್ಟಿದ್ದೆವೆ. ಡಿಜಿಟಲ್ ಇಂಡಿಯಾ ಯೋಜನೆ ಘೋಷಣೆಯಾದಾಗ ಕ್ಯಾಶ್ ಲೆಸ್ ವ್ಯವಸ್ಥೆಯನ್ನು ಹಲವರು ಪ್ರಶ್ನಿಸಿದ್ದರು.ದೇಶದ ಮಹಾನ್ ಚಿಂತಕರು, ಆರ್ಥಿಕ ತಜ್ಞರು ಎಂದು ಗುರುತಿಸಿಕೊಳ್ಳುವವರು ಕ್ಯಾಶ್ ಲೆಸ್ ವ್ಯವಸ್ಥೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಈ ಟೀಕೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರೇ ಉತ್ತರ ನೀಡಿದ್ದಾರೆ' ಎಂದು ಅವರು ಹೇಳಿದರು .

'ಹಣದ ರೂಪ ಬದಲಾಗುತ್ತಿದೆ'

'ಹಣದ ರೂಪ ಬದಲಾಗುತ್ತಿದೆ'

'ಶತಮಾನಗಳಿಂದ ಹಣದ ರೂಪ ಬದಲಾಗುತ್ತಿದೆ. ಕಲ್ಲಿನ ನಾಣ್ಯದಿಂದ ಆರಂಭಗೊಂಡು ಬಂಗಾರ, ಕಂಚಿನ ನಾಣ್ಯ ಗಳಿಂದ ಹಿಡಿದು ಕಾಗದದ ನೋಟುಗಳ ವರೆಗೆ ನಗದು ವ್ಯವಹಾರ ಬದಲಾವಣೆ ಕಂಡಿದೆ. ಆದರೆ, ಈಗ ಡಿಜಿಟಲ್ ಹಣದ ಯುಗ ಆರಂಭವಾಗಿದೆ' ಎಂದು ಮೋದಿ ಹೇಳಿದರು.

 'ಪರ್ ಡ್ರಾಪ್ ಮೋರ್ ಕ್ರಾಪ್'

'ಪರ್ ಡ್ರಾಪ್ ಮೋರ್ ಕ್ರಾಪ್'

'ಪರಿಸರ ರಕ್ಷಣೆ ಹಾಗೂ ನೀರಿನ ಸದ್ಬಳಕೆ ಬಗ್ಗೆ ಸಂಕಲ್ಪ ಮಾಡಬೇಕಾದ ಅನಿವಾರ್ಯತೆ ಇದೆ. ಪರ್ ಡ್ರಾಪ್ ಮೋರ್ ಕ್ರಾಪ್ ಪರಿಕಲ್ಪನೆಯಡಿ ರೈತರು ಪ್ರತಿ ನೀರಿನ ಹನಿಯ ಬಳಕೆಯಲ್ಲೂ ದೃಷ್ಟಿಯಲ್ಲಿಟ್ಟು ಕೃಷಿ ಮಾಡುವತ್ತ ದಾಪುಗಾಲಿಡಬೇಕು' ಎಂದು ಮೋದಿ ಕರೆ ನೀಡಿದರು.

 ಮೀನುಗಾರರಿಗೆ ಸಲಹೆ

ಮೀನುಗಾರರಿಗೆ ಸಲಹೆ

'ಕರಾವಳಿಯ ಮೀನುಗಾರರಿಗೆ ಸಿ ವಿಡ್ ಬೆಳೆಸುವ ಕುರಿತು ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕಾ ರಜೆ ಸಂದರ್ಭದಲ್ಲಿ ಸಮುದ್ರ ತಟದಲ್ಲಿ ಈ ಸಿ ವೀಡ್ ಗಳನ್ನು ಬೆಳೆದು ಮೀನುಗಾರರು ಆದಾಯ ಗಳಿಸಬಹುದು ಎಂದು ಅವರು ಹೇಳಿದರು. ಈ ಸಸ್ಯಗಳನ್ನು ಕೃಷಿ ಸಂದರ್ಭದಲ್ಲೂ ಮಣ್ಣಿನಲ್ಲಿ ಬೆರೆಸುವುದರಿಂದ ಕೃಷಿಯ ಉತ್ಪಾದನೆ ಕೂಡ ಹೆಚ್ಚುತ್ತದೆ' ಎಂದು ಅವರು ಹೇಳಿದರು

'ಯೂರಿಯಾ ಬಳಕೆ ಕಡಿಮೆ'

'ಯೂರಿಯಾ ಬಳಕೆ ಕಡಿಮೆ'

'ಪ್ರಕೃತಿಯನ್ನು ಉಳಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಲೇ ಆರಂಭಗೊಳ್ಳಬೇಕು ಎಂದು ಹೇಳಿದ ಪ್ರಧಾನಿ ಮೋದಿ 2022 ರ ಹೊತ್ತಿಗೆ ಕೃಷಿಯಲ್ಲಿ ಯೂರಿಯಾ ಬಳಕೆ ಶೇ 50 ರಷ್ಟು ತಗ್ಗಿಸುವ ನಿಟ್ಟಿನಲ್ಲಿ ಕೃಷಿಕರು ಸಂಕಲ್ಪ ತೊಡಬೇಕು' ಎಂದು ಅವರು ಕರೆ ನೀಡಿದರು .

English summary
PM Narendra Modi in Karnataka, on October 29, 2017 he adressed public meeting in Ujire, Dharmasthala, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X