ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಶ್ಚಿಮ ಕರಾವಳಿಯ ಬಹುದೊಡ್ಡ ಉತ್ಸವ ಕೊಡಿಯಾಲ್ ತೇರು

ಕೊಡಿಯಾಲ್ ತೇರು ಎಂಬುದು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ, ಅದು ಸಮಸ್ತ ಕೊಂಕಣಿ ಬಾಂಧವರನ್ನು ಒಂದೆಡೆ ಬೆಸೆಯುವ, ಕಳೆಯುವ, ಕಲಿಸುವ, ದೇಹಶ್ರಮದ ಮೂಲಕ ಮನದ ಭಾರವನ್ನು ಶ್ರೀವೀರ ವೆಂಕಟೇಶನ ಪದತಲದಲ್ಲಿ ಇಳುಹಿ ಹಗುರಾಗುವ ಅದ್ಬುತ ಪ್ರಕ್ರಿಯೆ.

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಬೆಂಗಳೂರು, ಫೆಬ್ರವರಿ 03: ಅತ್ಯಂತ ಪ್ರಸಿದ್ಧ ಶ್ರೀವೆಂಕಟರಮಣ ದೇವಸ್ಥಾನದ ಕೊಡಿಯಾಲ್ ತೇರಿಗೆ ಶುಕ್ರವಾರ(ಫೆಬ್ರವರಿ 03) ಚಾಲನೆ ನೀಡಲಾಯಿತು.

ಪಶ್ಚಿಮ ಕರಾವಳಿಯ ಗೌಡ ಸಾರಸ್ವತರ ಅನನ್ಯತೆಯ ಸಂಕೇತವಾಗಿ, ಈ ಸಮಾಜದ ಪ್ರತಿಯೋರ್ವ ಸದ್ಯಸನ ಭಕ್ತಿ, ಶ್ರದ್ದೆ, ಭಾವೈಕ್ಯದ ಮೂರ್ತರೂಪವಾಗಿ, ಮೂಲ ತಾಯಿಬೇರಿಗೆ ಸೆಳತದ ಕುರುಹಾಗಿ, ಬಾಲ್ಯಕಾಲದ ಸವಿನೆನಪುಗಳ ಜತೆಗೆ ವರ್ತಮಾನವನ್ನು ಬೆಸೆಯುತ್ತಾ, ಭವಿಷ್ಯತ್ತಿನತ್ತ ನೆಮ್ಮದಿಯ ಹೆಜ್ಜೆಗಳನ್ನಿಡಲು ಭರವಸೆಯ ಆಧಾರವಾಗಿ ಬಂದೆ ಬಂದಿದೆ ಕೊಡಿಯಾಲ್ ತೇರು.

ಬೆಳಿಗ್ಗೆ 7ಕ್ಕೆ ಪ್ರಾಥನೆ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ ಪ್ರಾಥನೆಗಳನು ಮಾಡಲಾಯಿತು ನಂತರ ಮಧ್ಯಾಹ್ನ 1.30ಕ್ಕೆ ಶ್ರೀ ದೇವರು ಯಜ್ಞಮಂಟಪಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು. 5.30 ಕ್ಕೆ ರಥಪೂಜೆ ಶುರುವಾಗಿದ್ದು, ರಾತ್ರಿ 11.30ಕ್ಕೆ ರಥೋತ್ಸವ ಹಾಗು ಬೆಳಿಗ್ಗೆ ವಸಂತಪೂಜೆ - ಪ್ರಸಾದ ವಿತರಣೆ ಮಾಡಲಾಗುವುದು.

ದೇಶ-ವಿದೇಶದಿಂದ ಬಂದಿರುವ ಗೌಡ ಸಾರಸ್ವತ ಸಮಾಜದವರು ಸೇರಿದಂತೆ ಎಲ್ಲಾ ಜಾತಿ, ಮತ ಪಂಥಗಳಿಗೆ ಸೇರಿದ ಭಕ್ತಾದಿಗಳು ಒಟ್ಟಿಗೆ ಕೂಡಿಕೊಂಡು ಭಗವಂತನ ಆಶೀರ್ವಾದ, ಕೃಪೆ ಬೇಡುತ್ತಾ, ಪಲ್ಲಕ್ಕಿಗಳಲ್ಲಿ ಶ್ರೀನಿವಾಸ, ವೀರ ವೆಂಕಟರಮಣ ದೇವರ ವಿಗ್ರಹಗಳನ್ನು ಹೊತ್ತು ಸಾಗಿದರು.

ಕೇವಲ ಒಂದು ಧಾರ್ಮಿಕ ಉತ್ಸವವಲ್ಲ

ಕೇವಲ ಒಂದು ಧಾರ್ಮಿಕ ಉತ್ಸವವಲ್ಲ

ಕೊಡಿಯಾಲ್ ತೇರು ಎಂಬುದು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ, ಅದು ಸಮಸ್ತ ಕೊಂಕಣಿ ಬಾಂಧವರನ್ನು ಒಂದೆಡೆ ಬೆಸೆಯುವ, ಕಳೆಯುವ, ಕಲಿಸುವ, ದೇಹಶ್ರಮದ ಮೂಲಕ ಮನದ ಭಾರವನ್ನು ಶ್ರೀ ವೀರ ವೆಂಕಟೇಶನ ಪದತಲದಲ್ಲಿ ಇಳುಹಿ ಹಗುರಾಗುವ ಅದ್ಬುತ ಪ್ರಕ್ರಿಯೆ.

ಅತ್ಯಪೂರ್ವ ವರ್ಷದಿನ

ಅತ್ಯಪೂರ್ವ ವರ್ಷದಿನ

ಇಂದು ಮಾಘಶುದ್ಧ ರಥಸಪ್ತಮಿ, ಗೌಡ ಸಾರಸ್ವತರ ಸಾಂಸ್ಕೃತಿಕ, ಧಾರ್ಮಿಕ ಹಾಗು ಸಾಮಾಜಿಕ ರಾಜಧಾನಿ ಕೊಡಿಯಾಲದ ರಥಬೀದಿಯಲ್ಲಿ. ಸಿಂಗರಿಸಿದ ಭ್ರಮರಥವನ್ನು ಸಾಲಂಕೃತವಾಗಿ ಏರಿ ತನ್ನ ಭಕ್ತರಿಗೆ ಶ್ರೀ ವೀರವೆಂಕಟೇಶ ಸಮೀಪದರ್ಶನ ಮೀಯುವ ಅತ್ಯಪೂರ್ವ ವರ್ಷದಿನ.

ವೀರವೆಂಕಟೇಶನ ರಥೋತ್ಸವ

ವೀರವೆಂಕಟೇಶನ ರಥೋತ್ಸವ

ಶ್ರೀ ವೀರವೆಂಕಟೇಶನ ರಥೋತ್ಸವದ ಸಮಯದಲ್ಲಿ ದುಡಿಯುವ ಸ್ವಯಂ ಸೇವಕರಲ್ಲಿ ಒಂದೇ ಕುಟುಂಬದ ನಾಲ್ಕು ತಲೆಮಾರುಗಳ ಸದ್ಯಸರು ಇದ್ದಾರೆ, ಪುಟ್ಟ ಬಾಲಕರಿಂದ ಹಿಡಿದು 58-90ರ ವಯೋವೃದ್ಧರಿದ್ದಾರೆ, ಉದ್ಯೋಗ ನಿಮಿತ್ತ ಪರವೊರಲ್ಲಿದ್ದರೂ ಆರು ದಿನಗಳ ರಜೆ ಹಾಕಿ ಬಂದು ಭಾಗವಹಿಸುವವರಿದ್ದಾರೆ, ವಿವಿಧ ರಂಗಗಳ ಉದ್ಯೋಗಿಗಳಿದ್ದಾರೆ, ದಿನವೊಂದಕ್ಕೆ ಬೇಕಾಗುವ 500 ಕೆ.ಜಿ ಎಲೆ ಹಲಸಿನ ಕಾಯಿ ಗುಜ್ಜಿಗಳನ್ನು ಪ್ರತಿವರ್ಷ ನಿಯಮಿತವಾಗಿ ನೀಡುವವರಿದ್ದಾರೆ

ಇಲ್ಲಿ ಸಮರ್ಪಿತವಾಗುವ ಪರಿ ಅನನ್ಯ

ಇಲ್ಲಿ ಸಮರ್ಪಿತವಾಗುವ ಪರಿ ಅನನ್ಯ

ರಥೋತ್ಸವಕ್ಕೆ ಬೇಕಾದ ತರಕಾರಿಗಳನ್ನು ಉಚಿತವಾಗಿ ನೀಡುವವರಿದ್ದಾರೆ, ಸಿಹಿಭಕ್ಷ್ಯಕ್ಕೆ ಬೇಕಾದ 20 ಕ್ವಿಂಟಲ್ ಸಕ್ಕರೆ ಒದಗಿಸುವವರಿದ್ದಾರೆ, ಆದರೆ ಯಾವುದೇ ಪ್ರದರ್ಶನಕ್ಕಾಗಿ ಅಲ್ಲ, ತೋರಿಕೆಗಾಗಿಯೂ ಅಲ್ಲ, ಬದುಕಿನ ಭಾಗ್ಯಗಳೆಲ್ಲವೂ ಆತನಿಂದಲೇ ಪ್ರಾಪ್ತಿಯಾಯಿತೆಂದು ನಂಬುವ ಮಂದಿ, ಆತನಿತ್ತುದನ್ನು ಮತ್ತೆ ಆತನಿಗೆ ಸಮಸ್ತುಗಳ ರೊಪದಲ್ಲಾಗಲೀ, ದೇಹಶ್ರಮದ ಮೂಲಕವಾಗಲೀ ಮರುಸಮರ್ಪಿಸುವ ಕಾಯಕ, ಸದ್ದುಗದ್ದಲವಿಲ್ಲದೆಯೇ ಇಲ್ಲಿ ಸಮರ್ಪಿತವಾಗುವ ಪರಿ ಅನನ್ಯವಾದುದು.

ರಥೋತ್ಸವದಲ್ಲಿ ಕಂಡ ಮುಖ

ರಥೋತ್ಸವದಲ್ಲಿ ಕಂಡ ಮುಖ

ವರ್ಷ ವರ್ಷವೂ ರಥೋತ್ಸವ ಬರುತ್ತದೆ. ಆದರೆ ಈ ಬಾರಿಯಷ್ಟು ಗೌಜಿ ಯಾವತ್ತೂ ಆಗಿರಲಿಲ್ಲ ಎಂಬ ಮಾತು ಭಜಗರ ಬಾಯಿಂದ ಪ್ರತಿಬಾರಿಯೂ ಬಂದೆ ಬರುತ್ತದೆ. ರಥೋತ್ಸವ ನಮ್ಮ ಪಾಲಿಗೆ ಕೇವಲ ರಥೋತ್ಸವವಲ್ಲ, ರಥದ ಗಾಲಿಗಳು ಉರುಳುತ್ತ ಉರುಳುತ್ತ ಮುಂದೆ ಸಾಗುತ್ತಿದ್ದಂತೆ, ನಿಂತ ನೀರಿನಂಥ ಬದುಕಿಗೊಂದು ಹೊಸ ಚಾಲನೆ ಸಿಗುತ್ತದೆ, ಎಷ್ಟೋ ವರ್ಷಗಳ ಹಿಂದೆ ಕಂಡ ಯಾವುದೇ ಹಳೆಯ ಪರಿಚಯದ ಮುಖ ಈ ರಥೋತ್ಸವದಲ್ಲಿ ಪಕ್ಕನೆ ಕಂಡಾಗ ಧಟ್ಟನೆ ನಮ್ಮ ವಿಸ್ಶ್ಮೃತಿಯ ತೆರೆ ಸರಿಯುತ್ತದೆ.

ವಿಶಿಷ್ಟ ಮಾನವ ಸರಪಳಿ

ವಿಶಿಷ್ಟ ಮಾನವ ಸರಪಳಿ

ಆ ಮುಖದೊಡ್ಡನಿದ್ದ ನಮ್ಮ ಸಂಬಂಧಗಳು ನೆನಪಾಗುತ್ತದೆ. ಮನದ ಮೂಲೆಗೆ ಸೇರಿದ್ದ ಎಷ್ಟೋ ವಿಷಯಗಳು ಮತ್ತೆ ಜಾಗೃತಗೊಳುತ್ತವೆ, ಕೈಗೆ ಕೈ ಸೇರಿಸಿ ಇಡೀ ಮಾನವ ಸರಪಳಿ ನಮ್ಮ ಭವ್ಯ ಸಂಸೃತಿಯ ತೇರನ್ನು ಮುಂದಕ್ಕೆ ಮುಂದಕ್ಕೆ ಎಳೆಯುತ್ತಿದ್ದಂತೆಯೇ ನಮ್ಮ ತಾಯಿ ಬೇರಿಗೆ ನೆನಪಾಗುತ್ತದೆ, ವಲಸಿಗರದ ನಾವು ಬಿಟ್ಟುಬಂದ ನಮ್ಮ ಪೂರ್ವಜರ ಭೂಮಿಯ ನೆನಪಾಗುತ್ತದೆ. ಚಿತ್ರ : ಮಂಜು ನೀರೇಶ್ವಾಲ್ಯ

ದೇವರಿಗೆ ಪೂಜೆ ಪುನಸ್ಕಾರ

ದೇವರಿಗೆ ಪೂಜೆ ಪುನಸ್ಕಾರ

ವೆಂಕಟರಮಣ ದೇವರಿಗೆ ವಿಶೇಷ ಅಭಿಷೇಕ, ಪೂಜೆ ಕಾರ್ಯಗಳು ನಿರಂತರವಾಗಿ ನಡೆಯಲಿವೆ. ಚಿತ್ರ : ಮಂಜು ನೀರೇಶ್ವಾಲ್ಯ

ವೆಂಕಟರಮಣ ದೇವರ ತೇರು

ವೆಂಕಟರಮಣ ದೇವರ ತೇರು

ವೆಂಕಟರಮಣ ದೇವರ ತೇರು, ಬ್ರಹ್ಮ ರಥಾಹೋರಣ ಸಂಭ್ರಮದಲ್ಲಿ ಭಕ್ತಸಮೂಹ. ಚಿತ್ರ : ಮಂಜು ನೀರೇಶ್ವಾಲ್ಯ

English summary
Thousands of devotees gathered on Friday (February 3)in Kodialbail, Mangaluru and celebrated Kodial Theru or Mangalore Car festival. This festival is celebrated without any discrepancy of caste, creed and religion for the grace of Lord Venkatakarama. The idols of Shri Srinivasa and Shri Veera Venkatesa carried during Brahma Ratharohana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X