ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವ

By Mahesh
|
Google Oneindia Kannada News

ಧರ್ಮಸ್ಥಳ, ಡಿ. 09: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆಯುವ ವಾರ್ಷಿಕ ಕೆರೆಕಟ್ಟೆ ಉತ್ಸವ ಅಚ್ಚುಕಟ್ಟಾಗಿ ನೆರವೇರಿದೆ. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ಉತ್ಸವವನ್ನು ವೀಕ್ಷಿಸಿ ಪುಣ್ಯಭಾಗಿಗಳಾದರು.

ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು ಕೇತ್ರಕ್ಕೆ ಬಂದ ಭಕ್ತಾದಿಗಳು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.[ಲಕ್ಷದೀಪೋತ್ಸವ: ಧರ್ಮಸ್ಥಳಕ್ಕೆ ಭಕ್ತರಿಂದ ಪಾದಯಾತ್ರೆ]

ವಸ್ತುಪ್ರದರ್ಶನದಲ್ಲಿ 195 ಮಳಿಗೆಗಳಿದ್ದು ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ 10 ರ ವರೆಗೆ ಉಚಿತ ಪ್ರವೇಶಾವಕಾಶವಿದೆ. ವಸ್ತುಪ್ರದರ್ಶನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.['ಲಕ್ಷದೀಪೋತ್ಸವ: ಇನ್ನೊಬ್ಬರಿಗೆ ಬೆಳಕಾಗುವ ಕಾರ್ಯ']

ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಮಿಂದು ಬಹಿರಂಗವಾಗಿ ಶುಚಿರ್ಭೂತರಾದರೆ ಬಳಿಕ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಅಂತರಂಗವಾಗಿ ಶಾಂತಿ, ನೆಮ್ಮದಿ ಪಡೆಯುತ್ತಾರೆ. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆಯುತ್ತಾರೆ. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]

ರತ್ನಗಿರಿ (ಬಾಹುಬಲಿ ಬೆಟ್ಟ), ಲಲಿತೋದ್ಯಾನ, ಮಂಜೂಷಾ ವಸ್ತು ಸಂಗ್ರಹಾಲಯ, ವಿಂಟೇಜ್ ಕಾರುಗಳ ಮ್ಯೂಸಿಯಂ, ನೆಲ್ಯಾಡಿ ಬೀಡು, ಚಂದ್ರನಾಥ ಸ್ವಾಮಿ ಬಸದಿ, ವಸಂತ ಮಹಲ್, ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಡಿಸೆಂಬರ್ 6 ರಿಂದ 11 ರ ವರೆಗೆ ನಡೆಯುವ ಧರ್ಮಸ್ಥಳದ ಲಕ್ಷದೀಪೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ.

ವಾರ್ಷಿಕ ಕೆರೆಕಟ್ಟೆ ಉತ್ಸವ

ವಾರ್ಷಿಕ ಕೆರೆಕಟ್ಟೆ ಉತ್ಸವ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆಯುವ ವಾರ್ಷಿಕ ಕೆರೆಕಟ್ಟೆ ಉತ್ಸವ ಅಚ್ಚುಕಟ್ಟಾಗಿ ನೆರವೇರಿದೆ. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ಉತ್ಸವವನ್ನು ವೀಕ್ಷಿಸಿ ಪುಣ್ಯಭಾಗಿಗಳಾದರು.

ರಾಜ್ಯಮಟ್ಟದ ವಸ್ತುಪ್ರದರ್ಶನ

ರಾಜ್ಯಮಟ್ಟದ ವಸ್ತುಪ್ರದರ್ಶನ

ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು ಕೇತ್ರಕ್ಕೆ ಬಂದ ಭಕ್ತಾದಿಗಳು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಭಕ್ತರು

ಪಾದಯಾತ್ರೆಯಲ್ಲಿ ಭಕ್ತರು

ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಮಿಂದು ಬಹಿರಂಗವಾಗಿ ಶುಚಿರ್ಭೂತರಾದರೆ ಬಳಿಕ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಅಂತರಂಗವಾಗಿ ಶಾಂತಿ, ನೆಮ್ಮದಿ ಪಡೆಯುತ್ತಾರೆ. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆಯುತ್ತಾರೆ.

ಧರ್ಮಸ್ಥಳದ ಲಕ್ಷದೀಪೋತ್ಸವ

ಧರ್ಮಸ್ಥಳದ ಲಕ್ಷದೀಪೋತ್ಸವ

ಡಿಸೆಂಬರ್ 6 ರಿಂದ 11 ರ ವರೆಗೆ ನಡೆಯುವ ಧರ್ಮಸ್ಥಳದ ಲಕ್ಷದೀಪೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ.

English summary
Kerekatte Utsav was held at Sri Kshetra Dharmasthala, as part of Lakshadeepotsav celebrations. Here is report with pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X