ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 31 : ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಹಾಗೂ ಫಲ್ಗುಣಿ ನದಿ ತೀರಗಳಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿ ನಡೆಯುತ್ತಿದೆ. ಮಂಗಳೂರು, ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ಎನ್ನದೆ ಸಾಲುಗಟ್ಟಿ ಸಂಚರಿಸುತ್ತಿರುವ ಲಾರಿಗಳು ಇದಕ್ಕೆ ಸಾಕ್ಷಿಯಾಗಿವೆ.

ಮಳೆಗಾಲ ಆರಂಭವಾದ ಬಳಿಕ 4-5 ತಿಂಗಳು ಮರಳು ಗಣಿಗಾರಿಕೆ ನಡೆಸುವುದು ಅಸಾಧ್ಯ. ಆದ್ದರಿಂದ, ಮೇ ತಿಂಗಳು ಅಂತ್ಯವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ದಂಧೆ ಜೋರಾಗಿ ನಡೆಯುತ್ತಿದೆ. ಈ ಬಾರಿ ವಿಪರೀತ ಬಿಸಿಲಿನಿಂದ ಬರಡಾಗಿರುವ ನೇತ್ರಾವತಿ ನದಿಯಲ್ಲಿ ಸಂಪೂರ್ಣವಾಗಿ ಮರಳು ಗೋಚರಿಸುತ್ತಿದ್ದು, ಇದು ದಂಧೆ ಕೋರರಿಗೆ ವರದಾನವಾಗಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಮಾನವ ಶ್ರಮದಿಂದಲೇ ಮರಳು ತೆಗೆಯಬೇಕೆಂಬ ನಿಯಮವಿದ್ದರೂ ನೇತ್ರಾವತಿ ಹಾಗೂ ಫಲ್ಗುಣಿ ನದಿ ಯುದ್ದಕ್ಕೂ ಅಕ್ರಮ ಮರಳು ದಂಧೆ ಕೋರರು ಜೆಸಿಬಿ, ಹಿಟಾಚಿ ಯಂತ್ರಗಳನ್ನು ನದಿಗೆ ಇಳಿಸಿ ಮರಳು ತೆಗೆಯುತ್ತಿದ್ದಾರೆ. ನದಿಯಿಂದ ತೆಗೆದ ಮರಳನ್ನು ರಾಷ್ಟ್ರೀಯ ಹೆದ್ದಾರಿಯ ಒಳಪ್ರದೇಶಗಳ ವಿಶಾಲವಾದ ಜಾಗದಲ್ಲಿ ಸಂಗ್ರಹಿಸಲಾಗುತ್ತಿದೆ. [ಅಕ್ರಮ ಮರಳು ಸಾಗಾಟಕ್ಕೆ ಹೊಸ ತಂತ್ರ!]

sand

ಮರಳು ಸಂಗ್ರಹವಾದ ಸ್ಥಳದಿಂದ 10-12 ಚಕ್ರಗಳ ಲಾರಿಗಳಲ್ಲಿ ಅವುಗಳನ್ನು ತುಂಬಿಸಿ ಬೆಂಗಳೂರು, ಮೈಸೂರು ಕಡೆಗೆ ಸಾಗಿಸಲಾಗುತ್ತಿದೆ. ಜಿಲ್ಲೆಯಿಂದ ಹಗಲು ರಾತ್ರಿ ಎನ್ನದೆ ಮರಳು ಸಾಗಾಟವಾಗುತ್ತಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಮನೆ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮರಳು ಲಭ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ. [ಅಕ್ರಮ ಮರಳು ದಂಧೆ ವಿರುದ್ಧ ಏಕಾಂಗಿಯಾಗಿ ದನಿ ಎತ್ತಿದ ರೈತ]

ಅಧಿಕ ಲಾಭದ ಉದ್ದೇಶದಿಂದ ಸ್ಥಳೀಯವಾಗಿ ಮರಳು ಮಾರಾಟ ಮಾಡದೆ ದುಪ್ಪಟ್ಟು ಬೆಲೆಗೆ ದೂರದ ಪ್ರದೇಶಗಳಿಗೆ ಸಾಗಾಟ ಮಾಡಲಾಗುತ್ತಿದೆ. ಸ್ಥಳೀಯ ಜನರು ಒಂದು ಲೋಡ್ ಮರಳು ಪಡೆಯಲು ಇನ್ನಿಲ್ಲದ ಕಷ್ಟ ಪಡಬೇಕಾಗಿದೆ. ಅದರಲ್ಲೂ ಉತ್ತಮ ಗುಣಮಟ್ಟದ ಮರಳು ಸ್ಥಳೀಯರಿಗೆ ಲಭ್ಯವಾಗುತ್ತಿಲ್ಲ. ಕಲ್ಲು ಮಿಶ್ರಿತ ಮರಳೇ ಇಲ್ಲಿನ ಜನರಿಗೆ ಗತಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. [ಕನಿಷ್ಠ ಲಾರಿಯನ್ನಾದ್ರೂ ಉಳಿಸಿದರಲ್ಲ ಪುಣ್ಯಾತ್ಮ ಪೊಲೀಸರು!]

ಅಧಿಕ ಲಾಭದ ಉದ್ದೇಶದಿಂದ ಮರಳು ಸಾಗಾಟದ ಲಾರಿಗಳು ನಿಗದಿಗಿಂತ ಹೆಚ್ಚು ಮರಳು ತುಂಬಿಸಿ ಸಾಗಾಟ ಮಾಡುವುದರಿಂದ ಕೆಲವು ಲಾರಿಗಳು ಭಾರ ತಾಳಲಾಗದೆ ಚಕ್ರ ಒಡೆದು ಹೆದ್ದಾರಿಯ ನಡುವೆ ನಿಲ್ಲುತ್ತಿವೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

ಅಧಿಕಾರಿಗಳ ವೌನ : ವರ್ಷದ ಆರಂಭದಲ್ಲಿ ರಾತ್ರಿ ಹೊತ್ತು ಮಾತ್ರ ರಹಸ್ಯವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯು ಏಪ್ರಿಲ್, ಮೇ ತಿಂಗಳಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಭೂ ಮತ್ತು ಗಣಿ ಇಲಾಖಾ ಧಿಕಾರಿಗಳು ವೌನವಾಗಿದ್ದು, ಇದು ಮರಳು ದಂಧೆಕೋರರೊಂದಿಗೆ ಸಹಾಯಕವಾಗಿದೆ.

ಪ್ರಭಾವಿಗಳ ಸವಾರಿ : ಪ್ರಸ್ತುತ ನೇತ್ರಾವತಿ ಹಾಗೂ ಫಲ್ಗುಣಿ ನದಿ ತೀರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಹೆಚ್ಚಿನ ಅಕ್ರಮ ಮರಳು ದಂಧೆಯು ಜಿಲ್ಲೆಯ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಅಧಿಕಾರಿಗಳಿಗೆ ಆಮಿಷ ಹಾಗೂ ಬೆದರಿಕೆಯೊಡ್ಡಿ ತಮ್ಮ ದಂಧೆಯನ್ನು ಮುಂದುವರಿಸುತ್ತಿದ್ದಾರೆ.

ಅದಿರು ಲಾರಿಗಳ ನೆನಪು : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಮರಳು ಲಾರಿಗಳ ಸಾಲು ಸಾರ್ವಜನಿಕರಿಗೆ ಅದಿರು ಲಾರಿಗಳನ್ನು ನೆನಪಾಗುವಂತೆ ಮಾಡಿದೆ. ಸುರತ್ಕಲ್-ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾದ ಬಳಿಕ ಅದಿರು ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅದಿರು ಸಾಗಾಟ ಮಾಡುತ್ತಿದ್ದ ಲಾರಿಗಳು ಇಂದು ಮರಳು ಸಾಗಾಟದಲ್ಲಿ ತೊಡಗಿವೆ.

English summary
A key challenge facing the Dakshina Kannada district administration is controlling the illegal sand mafia. Officials failed to control sand mining in Phalguni and Netravati river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X