ಚಹಾ ಪ್ಯಾಕೆಟ್ ನಲ್ಲಿದ್ದದ್ದು 35 ಲಕ್ಷದಷ್ಟು ವಿದೇಶಿ ಕರೆನ್ಸಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 4: ವಿವಿಧ ದೇಶಗಳ ಕರೆನ್ಸಿಗಳನ್ನು ಅಕ್ರಮವಾಗಿ ಹೊಂದಿದ್ದ ಯುವಕನೊಬ್ಬನನ್ನು ಡಿಆರ್ ಐ ತಂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಶಕ್ಕೆ ಪಡೆದಿದ್ದಾರೆ. ಯುವಕನನ್ನು ಭಟ್ಕಳ ನಿವಾಸಿ ಅಬ್ದುರ್ ರಬ್ (21) ಎಂದು ಗುರುತಿಸಲಾಗಿದ್ದು, ಚಹಾ ಹುಡಿಯ ಪ್ಯಾಕೆಟಿನೊಳಗೆ ಬಚ್ಚಿಟ್ಟಿದ್ದ ಒಟ್ಟು 35,02,900 ರುಪಾಯಿ ಮೌಲ್ಯದ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಅಬ್ದುರ್ ರಬ್ ಜೆಟ್ ಏಎ ವೇಸ್ ವಿಮಾನದ ಮೂಲಕ ಮಂಗಳೂರಿನಿಂದ ದುಬೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ. ಈತನ ಬಳಿ ಅಕ್ರಮ ಕರೆನ್ಸಿ ಇರುವ ಬಗ್ಗೆ ಕಂದಾಯ ಮತ್ತು ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು.[ಹದಿನೈದರ ಬಾಲೆಯನ್ನು ಹೊತ್ತೊಯ್ದು, ಅತ್ಯಾಚಾರವೆಸಗಿ, ಮಾರಿದ ದುರುಳರು]

Illegal foreign currency: Young man arrested in Mangaluru airport

ಆಗ ದುಬೈ ದಿರಾಮ್, ಯುಎಸ್ ಡಾಲರ್, ಸೌದಿ ರಿಯಾಲ್ ಹಾಗೂ ಆಸ್ಟ್ರೇಲಿಯಾ ಡಾಲರ್ ಸೇರಿದಂತೆ ಒಟ್ಟು 35,02,900 ರುಪಾಯಿ ಮೌಲ್ಯದ ಅಕ್ರಮ ಕರೆನ್ಸಿ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಚಹಾ ಹುಡಿಯ ಪ್ಯಾಕೇಟಿನೊಳಗೆ ಈತ ಕರೆನ್ಸಿಗಳನ್ನು ಅಡಗಿಸಿಟ್ಟಿದ್ದ ಎನ್ನಲಾಗಿದ್ದು, ಆತನನ್ನು ಬಂಧಿಸಿ, ಆತನ ಬಳಿಯಿದ್ದ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Abdur Rab- who has foreign currency illegally, arrested in Mangaluru airport. He is leaving to Dubai, 35 lakh worth of currency seized.
Please Wait while comments are loading...