ಶರತ್ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿ ನನ್ನ ಬಳಿ ಇದೆ: ಸ್ವಾಮೀಜಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 14: ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣದ ಷಡ್ಯಂತ್ರದ ಬಗೆಗಿನ ಸ್ಫೋಟಕ ಮಾಹಿತಿಯನ್ನು ತನಿಖಾ ದಳಕ್ಕೆ ನೀಡುವುದಾಗಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಎನ್ ಐಎ ಕಚೇರಿ ತೆರೆಯಲು ಟ್ವಿಟ್ಟಿಗರ ಆಗ್ರಹ

ಮಂಗಳೂರಿನಲ್ಲಿ ಮಾತನಾಡಿದ ಅವರು, ಶರತ್ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಸಂಬಂಧ ನನ್ನ ಬಳಿ ಸ್ಫೋಟಕ ಮಾಹಿತಿಯಿದ್ದು, ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದೇ ಆದಲ್ಲಿ ಆ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡುತ್ತೇನೆ ಎಂದು ಹೇಳಿದರು.

I have explosive details of Sharath murder case: seer

ಐಪಿಎಸ್ ಅಧಿಕಾರಿಯೊಬ್ಬರನ್ನು ನನ್ನ ಸಹಚರರ ಮುಂದೆ ನಿಲ್ಲಿಸಿ, ವ್ಯಕ್ತಿಯೊಬ್ಬರ ಮೇಲೆ ಆ ಸೆಕ್ಷನ್ - ಈ ಸೆಕ್ಷನ್ ಹಾಕಿ ಎನ್ನುವಂತಹ ಜನಪ್ರತಿನಿಧಿ ಇದ್ದಾರೆ. ಹೀಗಿರುವಾಗ ರಾಜ್ಯ ಪೊಲೀಸರಿಗೆ ನನ್ನ ಬಳಿಯಿರುವ ಮಾಹಿತಿಯನ್ನು ನೀಡಿದ್ದೇ ಆದಲ್ಲಿ, ಅದನ್ನು ತಿರುಚುವ ಅಥವಾ ಮುಚ್ಚಿಡುವ ಪ್ರಯತ್ನವನ್ನು ನಡೆಸಬಹುದು ಎಂಬ ಅನುಮಾನ ವ್ಯಕ್ತಪಡಿದರು.

ಆ ಕಾರಣಕ್ಕೆ ನನ್ನ ಬಳಿಯಿರುವ ಮಾಹಿತಿಯನ್ನು ಪೊಲೀಸರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ದಿನಗಳಲ್ಲಿ ಈ ಸಂಬಂಧ ಕೇಂದ್ರ ಗ್ರಹಸಚಿವರು ಹಾಗೂ ಪ್ರಧಾನಿ ಬಳಿಗೆ ತೆರಳುವುದಾಗಿಯೂ ಇದೇ ಸಂದರ್ಭದಲ್ಲಿ ಹೇಳಿದರು.

I have explosive details of Sharath murder case: seer

ಶರತ್ ಶವಯಾತ್ರೆಯ ಮೆರವಣಿಗೆಯಲ್ಲಿ ನನ್ನ ವಾಹನಕ್ಕೂ ಹಾನಿಯಾಗಿದ್ದು, ಘಟನೆಗೆ ನಾನು ಸಾಕ್ಷಿಯಾಗಿದ್ದರೂ ಏಕಾಏಕಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಗಂಭೀರ ಪ್ರಕರಣ ದಾಖಲಿಸುವುದು ಷಡ್ಯಂತ್ರವಾಗಿದೆ ಎಂದು ಅವರು ಆರೋಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I have explosive details of RSS worker Sharath murder case, said by Gurupura Vajradehi mutt Rajashekharananda seer in Mangaluru.
Please Wait while comments are loading...