ಮೋದಿ ದೊಡ್ಡ ಕೆಲಸಕ್ಕೆ ಪುತ್ತೂರಿನ ಸಾಧಿಕ್ ಸಣ್ಣ ಸಹಕಾರ

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಪುತ್ತೂರು, ನವೆಂಬರ್ 16: ಎಲ್ಲೆಡೆ ರು 500 ಮತ್ತು 1000 ನೋಟಿನ ಬದಲಾವಣೆಗಾಗಿ ಜನರು ಪರದಾಡುತ್ತಿದ್ದು, ದಿನಗಟ್ಟಲೆ ಬ್ಯಾಂಕ್‌ನ ಮುಂದೆ ಕ್ಯೂ ನಿಂತು ಬಸವಳಿಯುತ್ತಿದ್ದಾರೆ. ಪ್ರಧಾನಿ ಮೋದಿಯವರ ಈ ನೆಡೆಗೆ ಮನಸೋತ ಆಟೋಚಾಲಕನೊಬ್ಬ ನೋಟು ಬದಲಾವಣೆಗೆ ಆಗಮಿಸುವ ಜನರಿಗೆ ಉಚಿತ ಪ್ರಯಾಣವನ್ನು ಘೋಷಿಸಿದ್ದಾನೆ.

ಉಚಿತ ಪ್ರಯಾಣವನ್ನು ಘೊಷಿಸಿರುವ ಆಟೋ ಚಾಲಕನೇ ಪುತ್ತೂರಿನ ಸಾಧಿಕ್. ಇಷ್ಟು ವರ್ಷ ಕದ್ದು ತಿಂದು ತೇಗುತ್ತಿದ್ದ ವ್ಯಕ್ತಿಗಳ ವಿರುದ್ಧ ಸಮರ ಸಾರಿರುವ ವ್ಯಕ್ತಿಗೆ ಜನರು ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟು ಬಿಟ್ಟಿದ್ದಾರೆ ಏನುವುದಕ್ಕೆ ಆಟೋ ಚಾಲಕ ಸಾಧಿಕ್ ಉದಾಹರಣೆ.[ಮೋದಿ ವಿರುದ್ದ 25 ಕೋಟಿ ಲಂಚ ಪಡೆದ ಗುರುತರ ಆರೋಪ!]

Humanity have no religion prove the saadiq

ಹಣ ಬದಲಾವಣೆ ಮಾಡಲು ಬಂಕ್ ಗೆ ಬರುವ ನಾಗರಿಕರಿಗೆ ತನ್ನ ಆಟೋದಲ್ಲಿ ಉಚಿತ ಪ್ರಯಾಣ ನೀಡಿ ಮೋದಿ ಕನಸಿನ ಅಚ್ಚೇ ದಿನಕ್ಕೆ ಮುನ್ನುಡಿ ಬರೆದಿದ್ದಾರೆ. ಪುತ್ತೂರು ತಾಲೂಕಿನ ನೈತಾಡಿ , ಪಂಜಳ, ಮುಡೂರು ಜನರಿಗೆ KA 21 B 4240 ನಂಬರ್ ನ ಆಟೋ ಚಾಲಕ ಸಾಧಿಕ್ ಅವರು ನೀಡುತ್ತಿರುವ ಈ ಸೇವೆ ನಿಜ್ಜಕು ಪ್ರಶಂಸೆಗೆ ಪಾತ್ರವಾಗಿದೆ.

ಹಣ ಬದಲಾಯಿಸಲು ಬ್ಯಾಂಕ್‌ಗೆ ಹೋಗುವ ಎಲ್ಲಾ ಗ್ರಾಹಕರಿಗೆ ಉಚಿತ ಪ್ರಯಾಣ ಎಂಬ ಬ್ಯಾನರ್ ರಿಕ್ಷಾದ ಮುಂಭಾಗದಲ್ಲಿ ಅಳವಡಿಸಿಕೊಂಡಿರುವ ಸಾಧಿಕ್ ಬ್ಯಾನರ್‌ನಲ್ಲಿ ಮೋದಿಯ ಭಾವಚಿತ್ರ ಮತ್ತು ತನ್ನ ಮೊಬೈಲ್ ನಂಬರನ್ನು ಹಾಕಿದ್ದಾರೆ. ಸಾಧಿಕ್ ನ ಸೇವೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.[ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ]

ಅವರ ದೊಡ್ಡ ಕೆಲಸಕ್ಕೆ ನನ್ನ ಸಣ್ಣ ಸಹಕಾರ
ನಾನು ಮೋದಿಯ ಅಭಿಮಾನಿ. ಕಳೆದ 6 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ. ಮೋದಿ ಅವರು ಮಾಡಿರುವ ಈ ಒಳ್ಳೆಯ ಕೆಲಸಕ್ಕೆ ನಾನು ಬೆಂಬಲ ನೀಡುವ ಸಲುವಾಗಿ ಇದೀಗ ಈ ಸೇವೆಯನ್ನು ಮಾಡುತ್ತಿದ್ದೇನೆ. ಅವರ ದೊಡ್ಡ ಕೆಲಸಕ್ಕೆ ನನ್ನ ಸಣ್ಣ ಸಹಕಾರ. ಇಂದಿನಿಂದ 3 ದಿನಗಳ ಕಾಲ ಈ ಸೇವೆಯನ್ನು ನೀಡಲಿದ್ದೇನೆ. ಇಂದು ನನ್ನ ಆಟೋದಲ್ಲಿ ಹಲವಾರು ಮಂದಿ ಬ್ಯಾಂಕ್‌ಗೆ ಬಂದು ಹಣವನ್ನು ಬದಲಾಯಿಸಿಕೊಂಡು ಹೋಗಿದ್ದಾರೆ.

ನನ್ನ ಅಟೋ ಗ್ಯಾಸ್‌ನಲ್ಲಿ ಓಡಾಟ ನಡೆಸುತ್ತಿರುವ ಕಾರಣ ನನಗೆ ದಿನವೊಂದಕ್ಕೆ ಸುಮಾರು 300 ರೂಪಾಯಿಯ ಗ್ಯಾಸ್ ಮುಗಿಯುತ್ತದೆ. ಮೋದಿ ಸರ್ಕಾರ ಬಂದ ಬಳಿಕ ಗ್ಯಾಸ್‌ನ ಬೆಲೆಯೂ ಕಡಿಮೆಯಾಗಿರುವ ಕಾರಣ ಇದರಿಂದ ನನಗೆ ಹೆಚ್ಚು ಖರ್ಚು ಆಗುತ್ತಿಲ್ಲ. ನಾನಂತೂ 2 ಸಾವಿರದ ನೋಟು ಹಿಡಿದಿಲ್ಲ. ಆದರೆ ಮೋದಿಯ ಈ ತೀರ್ಮಾನದ ಬಳಿಕ 10 ಮತ್ತು 20 ರೂಪಾಯಿಯ ಹೊಸ ನೋಟುಗಳು ಗ್ರಾಹಕರಿಗೆ ಬ್ಯಾಂಕ್‌ನಿಂದ ಸಿಗುತ್ತಿದೆ.

ಪುತ್ತೂರು ತಾಲೂಕಿನ .ನೈತಾಡಿ , ಪಂಜಳ, ಮುಡೂರುನಲ್ಲಿ ನೀವು ಉಚಿತ ಪ್ರಯಾಣ ಮಾಡಬೇಕಾದಲ್ಲಿ ಸಂಪರ್ಕಿಸಿ : 9108123313

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
500,1000 note ban : people suffering to exchange money in que. But in puttur auto driver saadiq still help the people in money exchange to drop bank free of cost.
Please Wait while comments are loading...