ಕೊನೆಗೂ ಸಿಕ್ಕಿಬಿದ್ದ ಮಂಗಳೂರಿನ ಮನೆಗಳ್ಳ..!

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 15: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪಿಯ ಪೊಲೀಸರು ದೇವಸ್ಥಾನ ಮತ್ತು ಮನೆಗಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ದರೋಡೆ ಮಾಡಿದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿಯ, ಸದ್ಯ ಮಿಯ್ಯಾರು ಚರ್ಚ್ ಎದುರಿನ ರಸ್ತೆಯ ಮನೆಯೊಂದರಲ್ಲಿ ವಾಸವಾಗಿರುವ ಉಮಾನಾಥ ಪ್ರಭು ಬಂಧಿತ ವ್ಯಕ್ತಿ. ಈತ ಮಂಗಳೂರಿನ ಎಂಟು ಮನೆ ಹಾಗೂ ಒಂದು ದೇವಸ್ಥಾನದಲ್ಲಿ ಕಳವು ನಡೆಸಿದ್ದು,ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸೇರಿದಂತೆ ಹಣವನ್ನ ದರೋಡೆ ಮಾಡಿದ್ದ ಎನ್ನಲಾಗಿದೆ.[ಹುಬ್ಬಳ್ಳಿ ಮನೆಗಳ್ಳರ ರಾಜಧಾನಿಯಾಗುತ್ತಿದೆಯಾ?]

House stolen arrested in karkala in mangaluru

ಈ ಪ್ರಕರಣವನ್ನ ಬೆನ್ನತ್ತಿದ ಕಾರ್ಕಳ ಎಎಸ್ಪಿ ಡಾ. ಸುಮಾನ ಡಿ.ಪಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಜೋಯ್ ಅಂತೋನಿ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ರಫೀಕ್ , ನಗರ ಠಾಣಾಧಿಕಾರಿ ರವಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.[ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]

ಬಂಧಿತ ಆರೋಪಿಯಿಂದ 135 ಗ್ರಾಂ ಚಿನ್ನ, ಕಾಲು ಕೆ.ಜಿ ಬೆಳ್ಳಿ ಆಭರಣ ಮತ್ತು ಹದಿನಾಲ್ಕು ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತನ ವಿರುದ್ಧ ಉಡುಪಿ ನಗರ, ಹೆಬ್ರಿ ಠಾಣೆಗಳಲ್ಲಿ ಹಲವು ಕೇಸುಗಳು ದಾಖಲಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karkala rural police station range House stolen arrested the accused. Jewelry, cash seized by police
Please Wait while comments are loading...