ದಕ್ಷಿಣ ಕನ್ನಡದಲ್ಲಿ ಹೋಂ ಸ್ಟೇ ಟ್ರೆಂಡ್, ಪಾರಂಪರಿಕ ಮನೆಗೆ ಡಿಮ್ಯಾಂಡ್

By: ಕಿರಣ್ ಸಿರ್ಸೀಕರ್
Subscribe to Oneindia Kannada

ರಾಜ್ಯದಲ್ಲಿ ಕೈಗಾರಿಕೆ, ಐಟಿ-ಬಿಟಿ ಕ್ಷೇತ್ರ ಏರುಗತಿಯಲ್ಲಿ ಅಭಿವೃದ್ಧಿ ಆಗುತ್ತಿದ್ದಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಲು ಗಂಭೀರ ಚಿಂತನೆ ಆರಂಭಗೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋಂ ಸ್ಟೇಗಳ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯಿಂದಲೇ ಪರವಾನಗಿ ನೀಡಲು ಸರಕಾರ ನಿರ್ಧರಿಸಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋಂ ಸ್ಟೇಗೆ ಪ್ರವಾಸೋದ್ಯಮ ಇಲಾಖೆಯ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ರಾಜ್ಯ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೋಂ ಸ್ಟೇಗೆ ಉತ್ತೇಜನ ನೀಡುವ ಯೋಜನೆಯನ್ನು ಆರಂಭಿಸಿದ್ದು, ಸ್ವಂತ ನಿವಾಸ ಹೊಂದಿದವರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಮಲೆನಾಡಿನ ಮನೆಯಲ್ಲಿ ಮಳೆಗಾಲದ ಮೂರು ದಿನ-ಇದು ಹೋಮ್ ಸ್ಟೇ ಅನುಭವ

ಮನೆಯಲ್ಲಿ 5 ಕೊಠಡಿಗಳಿದ್ದರೆ ಹೋಂ ಸ್ಟೇ ಆರಂಭಿಸಲು ಅವಕಾಶ ನೀಡಲಾಗುತ್ತದೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಹೋಂ ಸ್ಟೇಗೆ ಅವಕಾಶ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಕರಾವಳಿ ಗ್ರಾಮೀಣ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹೋಂ ಸ್ಟೇಯನ್ನು ಪ್ರೋತ್ಸಾಹಿಸಲಾಗುತ್ತಿದೆ

ತುಳುನಾಡ ಪಾರಂಪರಿಕ ಮನೆಗಳಿಗೆ ಬೇಡಿಕೆ

ತುಳುನಾಡ ಪಾರಂಪರಿಕ ಮನೆಗಳಿಗೆ ಬೇಡಿಕೆ

ಕರಾವಳಿ ಪ್ರಾಕೃತಿಕ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿಗೆ ಪ್ರವಾಸ ಬರುವವರು ಹೆಚ್ಚಾಗಿ ಗುತ್ತಿನ ಮನೆ, ಕ್ರೈಸ್ತರ ಪಾರಂಪರಿಕ ಹಳೆ ಮನೆ ಸೇರಿದಂತೆ ಗ್ರಾಮೀಣ ಶೈಲಿಯ ಹೋಂ ಸ್ಟೇಗಳಲ್ಲಿ ಇರಲು ಹೆಚ್ಚು ಇಷ್ಟಪಡುತ್ತಾರೆ. ತುಳುನಾಡ ಪಾರಂಪರಿಕ ಮನೆಗಳ ವಿನ್ಯಾಸದಲ್ಲಿ ಹೋಂ ಸ್ಟೇ ನಿರ್ಮಾಣ ಮಾಡಿದರೆ ಒಳ್ಳೆಯ ಬೇಡಿಕೆ ಸಾಧ್ಯವಿದೆ. ವಿನ್ಯಾಸ ಮತ್ತು ಅನುಕೂಲತೆಗೆ ಅನುಗುಣವಾಗಿ ಹೋಂ ಸ್ಟೇಗಳಲ್ಲಿನ ದರವೂ ವ್ಯತ್ಯಾಸವಾಗುತ್ತದೆ.

ಬಾಡಿಗೆ ಆಧಾರದಲ್ಲಿ ಖಾಸಗಿ ಮನೆ

ಬಾಡಿಗೆ ಆಧಾರದಲ್ಲಿ ಖಾಸಗಿ ಮನೆ

ಹೋಂ ಸ್ಟೇ ಎಂದರೆ ಪ್ರವಾಸಿಗರಿಗೆ ಮತ್ತು ಜಿಲ್ಲೆಗೆ ನಾನಾ ಕಾರಣಕ್ಕೆ ಭೇಟಿ ನೀಡುವವರಿಗೆ ಬಾಡಿಗೆ ಆಧಾರದ ಮೇಲೆ ವಸತಿ ಸೌಲಭ್ಯ ನೀಡುವ ಖಾಸಗಿ ಮನೆ. ನೂತನವಾಗಿ ಆರಂಭಿಸಲಾಗುವ ಹೋಂ ಸ್ಟೇಗೆ 3 ವರ್ಷಗಳಿಗೆ ನೊಂದಣಿ ಶುಲ್ಕ 500 ಎಂದು ನಿಗದಿಪಡಿಸಲಾಗಿದೆ.

ದರ ಪಟ್ಟಿಯ ವಿವರಣೆ

ದರ ಪಟ್ಟಿಯ ವಿವರಣೆ

ಹೋಂಸ್ಟೇ ಕೊಠಡಿ ಶುಲ್ಕವು ದಿನಕ್ಕೆ 5 ಸಾವಿರ ರುಪಾಯಿಗಿಂತ ಕಡಿಮೆಯಿದ್ದಲ್ಲಿ ವಿಲಾಸಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕಗಳನ್ನು ಗೃಹ ಬಳಕೆ ದರದಲ್ಲಿ ನೀಡಲಾಗುತ್ತದೆ. ವಸತಿ ಉದ್ದೇಶಗಳಿಗೆ ನಿರ್ದಿಷ್ಟಪಡಿಸಿರುವಂತೆ ಆಸ್ತಿ ತೆರಿಗೆ ದರಗಳನ್ನು ಪಾವತಿಸಬೇಕು. ಹೋಂ ಸ್ಟೇ ಮಾಲೀಕರು ಅತಿಥಿಗಳು ಪಾವತಿಸಬೇಕಾದ ದರ ಪಟ್ಟಿಯನ್ನು ನಿಖರವಾಗಿ ವಿವರಿಸಬೇಕು.

ಸರಕಾರದ ವೆಬ್ ಸೈಟ್ ನಲ್ಲಿ ನೋಂದಣಿ

ಸರಕಾರದ ವೆಬ್ ಸೈಟ್ ನಲ್ಲಿ ನೋಂದಣಿ

ಹೋಂ ಸ್ಟೇ ಯೋಜನೆಯನ್ನು ಆರಂಭಿಸಲು ಆಸಕ್ತಿಯಿರುವವರು ಕರ್ನಾಟಕ ಸರಕಾರದ ವೆಬ್ ಸೈಟ್ ನಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೂಲಕ ಜಿಲ್ಲೆಗೆ ಬರುವ ಪ್ರವಾಸಿಗರು ಹೋಂ ಸ್ಟೇಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಸಂಬಂಧಪಟ್ಟವರನ್ನು ಸಂಪರ್ಕಿಸಿ, ತಮಗೆ ಬೇಕಾದ ಹೋಂ ಸ್ಟೇಗಳನ್ನು ಮೊದಲೇ ಬುಕ್ ಮಾಡಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Home stay trend started in Dakshina Kannada. Traditional Tulu houses and Christian family houses are in demand by tourists.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ