ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಬಂದ 25 ಪೊಲೀಸ್ ಗಸ್ತು ವಾಹನಗಳ ವಿಶೇಷತೆಗಳೇನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ. 12 : ಅತ್ಯಾಧುನಿಕ ವ್ಯವಸ್ಥೆಗಳಿಂದ ಕೂಡಿರುವ 25 ಹೈಟೆಕ್ ಹೊಯ್ಸಳ ಕಾರುಗಳು(ಗಸ್ತು ವಾಹನ) ಮಂಗಳೂರು ಮಹಾನಗರದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಗೆ ಬಂದಿವೆ.

ಇದರ ಜತೆಗೆ ಜಿಲ್ಲಾ ಎಸ್ಪಿ ವ್ಯಾಪ್ತಿಗೆ 3 ಕಾರುಗಳು ಮಂಜೂರಾಗಿದ್ದು ಈ ತಿಂಗಳಾಂತ್ಯಕ್ಕೆ ಬರಲಿವೆ. ಸಂತಸದ ವಿಷಯವೆಂದರೆ ಈ ಕಾರುಗಳು ನಗರದ ಹಾಗೂ ಜಿಲ್ಲೆಯ ನಾನಾ ಕಡೆ ಕಾರ್ಯವಹಿಸಲಿದೆ.

ನಗರಕ್ಕೆ ಹೈಟೆಕ್ ಮಾದರಿಯ ಹೊಯ್ಸಳ ಕಾರು ಪರಿಚಯಿಸಲಾಗಿದ್ದು ಈ ನಿಟ್ಟಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ನಗರದಲ್ಲಿ ಕಾರುಗಳಿಗೆ ಚಾಲನೆ ನೀಡಿದರು.

ಆಗಿದ್ದರೆ ಈ ಗಸ್ತು ವಾಹನಗಳ ವಿಶೇಷತೆಗಳು ಏನು ಎಂಬುವುದನ್ನು ಮುಂದೆ ಓದಿ.

ಕಮಿಷನರ್ ವ್ಯಾಪ್ತಿಗೆ 25 ವಾಹನಗಳು

ಕಮಿಷನರ್ ವ್ಯಾಪ್ತಿಗೆ 25 ವಾಹನಗಳು

ಹೈಟೆಕ್ ಮಾದರಿಯ ಹೊಯ್ಸಳ 25 ಕಾರುಗಳು ಕಮಿಷನರ್ ವ್ಯಾಪ್ತಿಯ ಒಂದೊಂದು ಠಾಣೆಗೆ ಒಂದರಂತೆ ನೀಡಲು ಉದ್ದೇಶಿಸಲಾಗಿದೆ. ಚಾಲಕ ಸೇರಿದಂತೆ ಕನಿಷ್ಠ ಇಬ್ಬರು ಸಿಬ್ಬಂದಿ ಈ ವಾಹನದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ಒಟ್ಟು 3 ಪಾಳಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿ ಇದರಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಎಸ್ಪಿ ವ್ಯಾಪ್ತಿಗೆ 3 ವಾಹನಗಳು

ಎಸ್ಪಿ ವ್ಯಾಪ್ತಿಗೆ 3 ವಾಹನಗಳು

ದ. ಕ ಜಿಲ್ಲಾ ಎಸ್ಪಿ ವ್ಯಾಪ್ತಿಗೂ 3 ಕಾರುಗಳು ಮಂಜೂರಾಗಿದ್ದು ಈ ವಾಹನಗಳಿಗೆ ತಂತ್ರಜ್ಞಾನ ಅಳವಡಿಕೆ ಕೆಲಸ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಜನವರಿ 15ರ ಬಳಿಕ ಜಿಲ್ಲೆಗೆ ಬರಲಿವೆ.

ಈ ವಾಹನಗಳ ಕಾರ್ಯವೈಖರಿ ಹೇಗೆ?

ಈ ವಾಹನಗಳ ಕಾರ್ಯವೈಖರಿ ಹೇಗೆ?

ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಾಕ್ಷಣ '100' ನಂಬರ್ ನ ಕಂಟ್ರೋಲ್ ರೂಮ್ ಗೆ ವಿಷಯ ತಿಳಿಸಬೇಕು. ಈ ಬಗ್ಗೆ ಕಂಟ್ರೋಲ್ ರೂಮ್ ನಿಂದ ನೇರ ಮಾಹಿತಿ ಘಟನೆ ನಡೆದ ಸ್ಥಳದ ಸಮೀಪವಿರುವ ಹೊಯ್ಸಳ ತಂಡಕ್ಕೆ ರವಾನೆಯಾಗುತ್ತದೆ.

ನಂತರ ಘಟನೆ ನಡೆದ ಸ್ಥಳಕ್ಕೆ ಆ ವಾಹನ ತಕ್ಷಣ ತೆರಳಿ ಘಟನೆಯ ಸಂಪೂರ್ಣ ಮಾಹಿತಿ ಕಂಟ್ರೋಲ್ ರೂಮ್ ಮತ್ತು ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಈ ವಾಹನದಲ್ಲಿ ಟ್ಯಾಬ್ ಇರುವುದರಿಂದ ಫೋಟೋ ಮಾಹಿತಿಯನ್ನು ಕೂಡಲೇ ಅಪ್ಲೋಡ್ ಮಾಡಲು ವ್ಯವಸ್ಥೆ ಇದೆ.

ತಪ್ಪಿತ್ತಸ್ಥರು ಬಹುಬೇಗನೇ ಸರೆ

ತಪ್ಪಿತ್ತಸ್ಥರು ಬಹುಬೇಗನೇ ಸರೆ

ಈ ಮೇಲಿನ ಸೌಲಭ್ಯಗಳಿಂದ ಆರೋಪಿಯ ಚಿತ್ರ ಸೇರಿದಂತೆ ದೂರಿನ ಬಗ್ಗೆ ಸಮಗ್ರ ವಿವರವನ್ನು ರವಾನಿಸಲಾಗುವುದು. ಇವೆಲ್ಲವೂ ತಪ್ಪಿತ್ತಸ್ಥರು ಬಹುಬೇಗನೇ ಸರೆ ಹಿಡಿಯಲು ನೆರವಾಗಲಿದೆ.

English summary
Home minister Dr G Parameshwara on Thursday, January 12 launched 25 new patrolling vehicles of Mangaluru city police at the city commissionerate office here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X