ಮಂಗಳೂರಲ್ಲಿ ತಾರಕ್ಕಕ್ಕೇರಿದ ಹಿಂದೂ ಮುಸ್ಲಿಂ ಘರ್ಷಣೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಜನವರಿ,18: ಹಿಂದೂ ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ಮಂಗಳೂರಿನ ಸಮೀಪದ ಬಜಾಲ್ ಬಳಿ ಇಂದು ಒಂದು ಗಂಟೆ ಸುಮಾರಿನಲ್ಲಿ ನಡೆದಿದೆ. ಬಳಿಕ ಮುಸ್ಲಿಂ ಯುವಕರು ಹಿಂದೂ ಧರ್ಮೀಯರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಎರಡು ವಾಹನಗಳು ಜಖಂಗೊಂಡಿವೆ.

ಹಿಂದೂ ಸಂಘಟನೆ ಕಾರ್ಯಕರ್ತರು ಬಜಾಜ್ ನಿವಾಸಿಗಳಾದ ಸಿರಾಜ್ ಎಂಬುವವನಿಗೆ ಆಯುಧದಿಂದ ಇರಿದಿದ್ದು ಮತ್ತು ಶರ್ಫುದ್ದೀನ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇವರಿಬ್ಬರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಭಗವಂತಾ ಇದೇನಿದು? ಭಗವಾನ್ ಕೈಯಲ್ಲಿ ಸರಸ್ವತಿ ವಿಗ್ರಹ!]

Mangaluru

ಹಲ್ಲೆ ನಡೆದದ್ದು ಏಕೆ?

ಹಲ್ಲೆಗೊಳಗಾಗಿರುವ ಸಿರಾಜ್ ಮತ್ತು ಶರ್ಫುದ್ದೀನ್ ಮಾರುಕಟ್ಟೆಯಲ್ಲಿ ಕೆಲಸ ಮುಗಿಸಿ ವಾಪಾಸ್ಸಾಗುತ್ತಿದ್ದ ವೇಳೆ ಸಾಗರ್, ಗಣೇಶ್, ಸತೀಶ್ ಇನ್ನಿತರರು ಮುಸ್ಲಿಂ ಧರ್ಮಗುರುಗಳಾದ ಫಾರೂಖ್ ದಾರಿಮಿಯವರಿಗೆ ಹೊಡೆಯುತ್ತಿದ್ದರು. ಆಗ ಇದನ್ನು ಕಂಡ ಮುಸ್ಲಿಂ ಯುವಕರು ಪ್ರಶ್ನಿಸಿದ್ದಾರೆ.[ಕಾಶೀಮಠ ಸಂಸ್ಥಾನದ ಪೀಠಾಧಿಪತಿ ಸುಧೀಂದ್ರತೀರ್ಥ ಸ್ವಾಮೀಜಿ ವಿಧಿವಶ]

ಆಗ ಧರ್ಮಗುರುಗಳನ್ನು ಬಿಟ್ಟ ಹಿಂದೂ ಯುವಕರು ಮುಸ್ಲಿಂ ಯುವಕರ ಎದೆ, ಹೊಟ್ಟೆ ಭಾಗಗಳಿಗೆ ಮಾರಕಾಸ್ತ್ರಗಳಿಂದ ಇರಿದ್ದಿದ್ದಾರೆ. ಈ ಮಾಹಿತಿ ತಿಳಿದ ಮುಸ್ಲಿಂ ಯುವಕರ ಗುಂಪೊಂದು ಪಡೀಲ್ ನ ಹಿಂದೂ ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದು, ಆರ್ ಎಸ್ಎಸ್ ಮುಖಂಡರ ಆವರಣಕ್ಕೆ ನುಗ್ಗಿ ಎರಡು ಮೋಟಾರ್ ಬೈಕ್ ಗಳನ್ನು ಜಖಂಗೊಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Some hindus Sathish, Ganesh, Sagar onslaught on the muslim boys Siraj and Sharffuddin in Bajal, Mangaluru, on Monday at 1 AM.
Please Wait while comments are loading...